ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ, ಅದರ ತಾತ್ಪರ್ಯ ಏನೆಂದರೆ ತುಂಬಾ ಕಷ್ಟ ಪಟ್ಟು ಮಾಡಿದ ಒಂದು ಕೆಲಸ ಅಥವಾ ಒಂದು ಸಾಧನೆ ಅದು ಬೆಳಗುವ ಮೊದಲೇ ಕತ್ತಲಾಗಿ ಬಿಡುವುದು. ಒಂದು ಚಿತ್ರ ಚಿತ್ರವಾಗಿ ನಾವು ತೆರೆಯ ಮೇಲೆ ನೋಡಬೇಕೆಂರೆ ಅದರ ಹಿಂದೆ ಎಷ್ಟು ಕಷ್ಟ ಇರುತ್ತದೆ ಎಂದು ಆ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆನೆ ಗೊತ್ತು. ಅದರಲ್ಲೂ ಒಬ್ಬ ನಿರ್ದೇಶಕನಿಗೆ ತನ್ನ ಚಿತ್ರವೇ ಒಂದು ಮಗುವಿನ ರೀತಿ ಆಗಿರುತ್ತದೆ. ಅದಕ್ಕೆ ಯಾವುದೇ ಒಂದು ಚಿತ್ರವನ್ನು ನಿರ್ದೇಶಕನ ಕನಸಿನ ಕೂಸು ಎಂದು ಕಡಿಯುವುದು ವಾಡಿಕೆ.

ಆದರೆ ಕನ್ನಡ ಚಿತ್ರರಂಗದ ಗ್ಲಾಮರಸ್ ನಿರ್ದೇಶಕ ಹಾಗೂ ಖ್ಯಾತ ಸಾಹಿತಿ ಪೀ ಲಂಕೇಶ್ ಅವರ ಪುತ್ರ ಇಂದ್ರಜಿತ್ ಲಂಕೇಶ್ ಅವರು ಕಂಡ ಕನಸು ಹಠಾತ್ತನೆ ಭಗ್ನವಾಗಿ ಹೋಗಿದೆ. ಹೌದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು 90ರ ದಶಕದಲ್ಲಿ ವಯಸ್ಕ ಚಿತ್ರಗಳ ನಟಿಯಾಗಿ ಖ್ಯಾತಿ ಪಡೆದಿದ್ದ ಶಕೀಲಾ ಅವರ ಜೀವನವನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಸಂಪೂರ್ಣವಾಗಿ ಮುಗಿಸಿದ್ದರು. ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದ ಇಂದ್ರಜಿತ್ ಅವರಿಗೆ ತಮ್ಮ ಮೊದಲ ಪ್ರಯತ್ನದಲ್ಲಿಯೆ ಭಾರೀ ದೊಡ್ಡ ಹೊಡೆತ ಬಿದ್ದಿದೆ.

ಕೋರೋಣ ಅಂತಹ ಕಷ್ಟದ ಕಾಲದಲ್ಲಿಯೂ ಶಕೀಲಾ ಚಿತ್ರತಂಡ ಕಷ್ಟ ಪಟ್ಟು ಕೆಲಸ ಮಾಡಿ ಚಿತ್ರವನ್ನು ಪೂರ್ಣಗೊಳಿಸಿತ್ತು, ಇನ್ನೇನು ಚಿತ್ರವನ್ನು ಬಿಡುಗಡೆ ಮಾಡಿ ಪ್ರೇಕ್ಷಕ ಪ್ರಭುಗಳನ್ನು ಮನರಂಜಿಸುವ ಯೋಜನೆ ಇಟ್ಟಕೊಂಡಿತ್ತು ಚಿತ್ರತಂಡ. ಆದರೆ ಬಿಡುಗಡೆಗೂ ಮುನ್ನವೇ ಕೆಲ ಕಿಡಿಗೇಡಿಗಳು ಮಾಡಿದ ಅವಾಂತರ ದಿಂದಾ ಈಗ ಚಿತ್ರ ಪೈರಸಿ ಆಗಿ ಅಂತರ್ಜಾಲ ದಲ್ಲಿ ಪೂರ್ತಿ ಚಿತ್ರ ಸಿಕ್ಕಿಬಿಟ್ಟಿದೆ. ಈ ಮೂಲಕ ಇಡೀ ಚಿತ್ರತಂಡ ಪಟ್ಟ ಕಷ್ಟ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿಬಿಟ್ಟಿದೆ. ಚಿತ್ರ ಪೈರಸಿ ಆದ ಕಾರಣ ಅನೇಕ ಮೂವಿ ಡೌನ್ಲೋಡ್ ಸೈಟ್ ಗಳಲ್ಲಿ ಚಿತ್ರ ಲಭ್ಯವಾಗಿ ಬಿಟ್ಟಿದೆ.

ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಖ್ಯಾತ ನಟಿ ರಿಚಾ ಚಡ್ಡಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಪಂಕಜ್ ತ್ರಿಪಾಠಿ ಸುಚೇಂದರ ಪ್ರಸಾದ ಮುಂತಾದ ನಟರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು. ಆದರೆ ಕೆಲವು ಅನಾಮಿಕ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಇಡೀ ಚಿತ್ರತಂಡ ಈಗ ಚಿಂತೆಯಲ್ಲಿ ಮುಳುಗಿದೆ. ಈ ಕೃತ್ಯ ಎಸಗಿದವರ ಶೋಧ ಕಾರ್ಯ ಈಗಾಗಲೇ ಶುರು ಆಗಿದೆ. ಒಟ್ಟಾರೆಯಾಗಿ ಮೊದಲ ಬಾರಿ ಬಾಲಿವುಡ್ ಅಂಗಳದಲ್ಲಿ ಮೋಡಿ ಮಾಡಬೇಕೆಂದು ಕೊಂಡಿದ್ದ ಇಂದ್ರಜಿತ್ ಅವರಿಗೆ ಭಾರಿ ದೊಡ್ಡ ಪೆಟ್ಟು ಬಿದ್ದಂತಾಗಿದೆ.