ರಿಷಭ್ ಪಂತ್ ಭರ್ಜರಿ ಶತಕ ಬಾರಿಸುವುದರ ಜೊತೆಗೆ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ. ಹೌದು ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಬಲವಾಗಿ ನಿಂತಿದ್ದು ರಿಷಭ್ ಪಂತ್ ಮತ್ತು ರವೀಂದ್ರಾ ಜಡೇಜಾ. ಭಾರತ ತಂಡ ಟಾಸ್ ಸೋತು ಮೊದಲೇ ಬ್ಯಾಟಿಂಗ್ ಆರಂಭ ಮಾಡುತ್ತದೆ. ಗೇಮ್ ಆರಂಭದಲ್ಲಿ ಚೇತೇಶ್ವರ್ ಪೂಜಾರ ಮತ್ತು ಶುಬ್ಮನ್ ಗಿಲ್ ಇಬ್ಬರು ಕ್ರೀಜ಼್ ನಲ್ಲಿ ನಿಂತು ಉತ್ತಮವಾಗಿ ಸಾಗುತ್ತದೆ. ಆದರೆ ಶುಬ್ಮನ್ ಗಿಲ್ ಅವರು ಎಷ್ಟು ಬೇಗ ರನ್ ಕಲೆ ಹಾಕುತ್ತಿದ್ರೋ ಅಷ್ಟೇ ಬೇಗ ಅಂದ್ರೆ ಕೇವಲ 17ರನ್ ಬಾರಿಸಿ ಆಂಡರ್ಸನ್ ಅವರಿಗೆ ವಿಕೆಟ್ ಒಪ್ಪಿಸುತ್ತಾರೆ. ಇವರ ಬಳಿಕ ಚೇತೇಶ್ವರ್ ಪೂಜಾರ ಅವರು ಸಹ 13 ರನ್ ಗಳಿಸಿ ಪೆವಿಲಿಯನ್ ಸೇರುತ್ತಾರೆ. ಇವರ ನಂತರ ಬಂದಂತಹ ಹನುಮ ವಿಹಾರಿ, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ಫೀಲ್ಡ್ ನಲ್ಲಿ ನಿಲ್ಲದೆ ಔಟ್ ಆಗಿ ಹೊರಡುತ್ತಾರೆ.

ಇಲ್ಲಿಗೆ ಭಾರತ ತಂಡಕ್ಕೆ ಕೊಂಚ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಇಂಗ್ಲೆಂಡ್ ವಿರುದ್ದ ಸೆಣಸಾಟದಲ್ಲಿ ಕೇವಲ 98 ರನ್ ಗಳಿಸಿ ಭಾರತ ತಂಡ ಐದು ವಿಕೆಟ್ ಕಳೆದುಕೊಳ್ಳುತ್ತದೆ. ಇದು ಭಾರತ ತಂಡಕ್ಕೆ ಸವಾಲಿನ ಪರಿಸ್ಥಿತಿದಂತಾಗುತ್ತದೆ. ಈ ಸಂಧರ್ಭದಲ್ಲಿ ಜೋಡಿಯಾದ ರಿಷಭ್ ಪಂತ್ ಮತ್ತು ರವೀಂದ್ರಾ ಜಡೇಜಾ ಈ ಇಬ್ಬರು ಮಧ್ಯಮ ಕ್ರಮಾಂಕದ ಆಟಗಾರರು ಇಂಗ್ಲೆಂಡ್ ತಂಡದ ಬೌಲರ್ ಗಳಿಗೆ ನೀರಿಳಿಸುತ್ತಾರೆ. ರಿಷಭ್ ಪಂತ್ 89 ಎಸೆತಗಳಿಗೆ ಶತಕ ಬಾರಿಸುತ್ತಾರೆ. ರಿಷಭ್ ಪಂತ್ ಜೊತೆಯಾಟದಲ್ಲಿ 146 ರನ್ ಗಳಿಸಿ ವಿಕೆಟ್ ಒಪ್ಪಿಸುತ್ತಾರೆ. ರಿಷಭ್ ಪಂತ್ ಈ ಮೂಲಕ ಹೊಸದೊಂದು ದಾಖಲೆಯನ್ನ ತಮ್ಮ ಹೆಸರಿಗೆ ಸೇರಿಸಿಕೊಳ್ಳುತ್ತಾರೆ. ಹೌದು ಬರೋಬ್ಬರಿ 120 ವರ್ಷಗಳಲ್ಲಿ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಅತೀ ವೇಗವಾಗಿ ಯಾರೂ ಕೂಡ ಶತಕ ಸಿಡಿಸಿರಲಿಲ್ಲ.

ಇದೀಗ ಭಾರತ ತಂಡದ ರಿಷಭ್ ಪಂತ್ ಅತೀ ವೇಗವಾಗಿ ಶತಕ ಬಾರಿಸುವುದರ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿಂದೆ ಇಂಗ್ಲೆಂಡ್ ತಂಡದ ಕೆವಿನ್ ಪೀಟರ್ಸನ್ ಅವರು ಅತೀ ವೇಗವಾಗಿ ಶತಕ ಸಿಡಿಸಿದ ಕ್ರಿಕೆಟಿಗ ಎಂಬ ದಾಖಲೆ ಮಾಡಿದ್ದರು. ಇದೀಗ ಈ ದಾಖಲೆಯನ್ನ ರಿಷಭ್ ಪಂತ್ ಅವರು ಮುರಿದಿದ್ದಾರೆ. ರಿಷಭ್ ಪಂತ್ ಅವರು ಈ ದಾಖಲೆಯ ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಗಳ ಸಾಲಿನಲ್ಲಿ ಬರೋಬ್ಬರಿ 2000 ರನ್ ಕಲೆ ಹಾಕಿದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಇಂಟರ್ ನ್ಯಾಶನಲ್ ಕ್ರಿಕೆಟ್ ನಲ್ಲಿ ಬರೋಬ್ಬರಿ ನೂರು ಸಿಕ್ಸರ್ ಸಿಡಿಸಿದ ಭಾರತದ ಅತೀ ಕಿರಿಯ ಆಟಗಾರ ಎಂಬ ಹೆಸರಿಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ಭಾರತ ಮತ್ತು ಇಂಗ್ಲೆಂಡ್ ತಂಡದ ಟೆಸ್ಟ್ ಸರಣಿ ಪಂದ್ಯದಲ್ಲಿ ಬರೋಬ್ಬರಿ 222 ರನ್ ಗಳ ಬೃಹತ್ ಜೊತೆಯಾಟ ಎಂದೂ ಕೂಡ ಎನಿಸಿಕೊಂಡಿದೆ.