ಒಂದೇ ದಿನಕ್ಕೆ ಬರೊಬ್ಬರಿ 5 ಲಕ್ಷ ಟಿಕೆಟ್ ಮಾರಾಟ, ಭಾರತದಲ್ಲಿ ದಾಖಲೆ ಬರೆಯುತ್ತಿದೆ ಹಾಲಿವುಡ್ ಚಿತ್ರ

ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಜಾಗತಿಕ ಸಿನಿಮಾ, ಇಡೀ ವಿಶ್ವವೇ ಅಪಾರ ನಿರೀಕ್ಷೆಯಿಂದ ಕಾಯುತ್ತಿರುವ ಇಂಗ್ಲೀಷಿನ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಾಣ ಮಾಡಿದೆ. ಈ ಸ್ಪೈಡರ್ ಮ್ಯಾನ್ ಸಿನಿಮಾ ಅಮೇರಿಕಾದಲ್ಲಿ ಬಿಡುಗಡೆ ಆಗುವ ಮೊದಲೇ ಭಾರತದಲ್ಲಿ ಡಿಸೆಂಬರ್ 16 ರಂದು ರಿಲೀಸ್ ಆಗುತ್ತಿದೆ. ಇದು ಕೂಡ ಒಂದು ರೀತಿಯ ಹೊಸ ಮಾರುಕಟ್ಟೆ ತಂತ್ರವಾಗಿದೆ. ಸ್ಪೈಡರ್ ಮ್ಯಾನ್ ಚಿತ್ರತಂಡದ ಪ್ರಕಾರ ಭಾರತದಲ್ಲಿ ಸಿನಿಮಾ ಗೆದ್ದರೆ ಜಗತ್ತಿನೆಲ್ಲೆಡೆ ನಿರಾಯಾಸವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಅವರದ್ದಾಗಿದೆ. ಈಗಾಗಲೇ ಈ ಸ್ಪೈಡರ್ ಮ್ಯಾನ್ ರಿಲೀಸ್ ಗೂ ಮೊದಲು ಅತ್ಯಧಿಕ ಅಡ್ವಾನ್ಸ್ ಬುಕ್ಕಿಂಗ್ ಪಡೆದುಕೊಂಡ ಇಂಗ್ಲೀಷಿನ ಎರಡನೇ ಚಿತ್ರ ಎಂಬ ದಾಖಲೆ ನಿರ್ಮಾಣ ಮಾಡಿದೆ.

2019 ರಲ್ಲಿ ರಿಲೀಸ್ ಆಗಿದ್ದ ಮಾರ್ವೆಲ್ ನ ಅವೆಂಜರ್ಸ್ ಎಂಡ್ ಗೇಮ್ ಚಿತ್ರ ಇಂಡಿಯಾದಲ್ಲಿ ಅತಿ ಹೆಚ್ಚು ಪ್ರೀ ಬುಕ್ಕಿಂಗ್ ಪಡೆದುಕೊಂಡಿತ್ತು. ನಿನ್ನೆಯಿಂದಾನೇ ಮುಂಗಡ ಬುಕ್ಕಿಂಗ್ ಪ್ಲಾಟ್ ಫಾರ್ಮ್ ಓಪನ್ ಮಾಡಿದ್ದು ಬರೋಬ್ಬರಿ ಐದು ಲಕ್ಷಕ್ಕೂ ಅಧಿಕ ಟಿಕೆಟ್ ಸೋಲ್ಡ್ ಔಟ್ ಆಗಿವೆಯಂತೆ. ಥಿಯೇಟರ್ ಗಳಲ್ಲಿ ಪ್ರೇಕ್ಷಕರು ಥ್ರೀಡಿ, ಫೋರ್ ಎಕ್ಸ್ ಥ್ರೀಡಿಯಲ್ಲಿ ಸ್ಪೈಡರ್ ಮ್ಯಾನ್ ಚಿತ್ರ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಸಿನಿ ಪಂಡಿತರ ಪ್ರಕಾರ ಮೊದಲ ದಿನದಲ್ಲೇ ಈ ಸ್ಪೈಡರ್ ಮ್ಯಾನ್ ಚಿತ್ರ ಮೂವತ್ತು ಕೋಟಿ ಕಲೆಕ್ಷನ್ ಮಾಡಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ.

ಈಗಾಗಲೇ ಸೋಲ್ಡ್ ಔಟ್ ಆಗಿರುವ ಐದು ಲಕ್ಷ ಟಿಕೆಟ್ ಗಳಲ್ಲಿ ಕನಿಷ್ಟ ಅಂದರೂ ಹತ್ತು ಕೋಟಿ ಕಲೆಕ್ಷನ್ ಆಗಿರಲಿದೆ ಎಂದು ತಿಳಿದು ಬಂದಿದೆ. ಮಾರ್ವೆಲ್ ಸ್ಟುಡಿಯೋಸ್, ಕೊಲಂಬಿಯಾ ಪಿಕ್ಚರ್ಸ್, ಪಾಸ್ಕಲ್ ಪಿಕ್ಚರ್ಸ್ ಸಂಸ್ಥೆಯಡಿಯಲ್ಲಿ ಕೆವಿನ್ ಅವರ ನಿರ್ಮಾಣದಲ್ಲಿ ಜಾನ್ ವಾಟ್ಸ್ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಸ್ಪೈಡರ್ ಮ್ಯಾನ್ ಸಿನಿಮಾ ಜಗತ್ತಿನಾದ್ಯಂತ ಡಿಸೆಂಬರ್ 17 ರಂದು ಬಿಡುಗಡೆ ಆಗುತ್ತಿದೆ. ಭಾರತದಲ್ಲಿ ಮಾತ್ರ ಡಿಸೆಂಬರ್ 16 ರಂದು ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಸಿನಿಮಾ ಬಿಡುಗಡೆ ಆಗಲಿದೆ ಎಂದು ಭಾರತದಲ್ಲಿ ಡಿಸ್ಟ್ರಿಬ್ಯೂಶನ್ ರೈಟ್ಸ್ ಪಡೆದುಕೊಂಡಿರುವ ಸೋನಿ ಪಿಕ್ಚರ್ಸ್ ಸಂಸ್ಥೆ ಮಾಹಿತಿ ನೀಡಿದೆ. ಈ ಸ್ಪೈಡರ್ ಮ್ಯಾನ್ ಸಿನಿಮಾಗೆ ಮೈಕಲ್ ಜಿಯಾ ಚಿನೋ ಮ್ಯೂಸಿಕ್ ನೀಡಿದ್ದು, ಟಿಮ್ ಹಾಲೆಂಡ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳ ಅವತರಣೆಕೆಯಲ್ಲಿ ರಿಲೀಸ್ ಆಗುತ್ತಿದೆ.

%d bloggers like this: