ಒಂದೇ ಗಂಟೆಯಲ್ಲಿ ಬರೋಬ್ಬರಿ 53 ತಿಂಡಿಗಳು, ಏಷ್ಯಾದ ದಾಖಲೆ ಪುಸ್ತಕ ಸೇರಿದ ಕರ್ನಾಟಕದ ಹುಡುಗಿ

ಪ್ರತಿಯೊಬ್ಬರಲ್ಲಿಯೂ ಸಹ ಭಿನ್ನ ವಿಭಿನ್ನವಾದ ಪ್ರತಿಭೆ ಅಡಗಿರುತ್ತದೆ. ಕೆಲವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದರೆ ಅವರು ಅದೇ ಕ್ಷೇತ್ರದಲ್ಲಿ, ವಿಚಾರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಾರೆ. ಆದರೆ ಕೆಲವರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಿಕೊಳ್ಳುವುದಕ್ಕೆ ಅವಕಾಶ ಸಿಗುವುದಿಲ್ಲ. ಅಂತಹ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವಂತಹ ಮಹಾತ್ಕಾರ್ಯ ವನ್ನು ಮಾಡುತ್ತಾ ಬಂದಿದೆ. ಏಷ್ಯಾ ಖಂಡದಲ್ಲಿರುವ 48 ದೇಶಗಳಲ್ಲಿ ಸುಮಾರು 50,000 ಕ್ರೀಡೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಕ್ರಾಕೆಟ್, ಕಬಡ್ಡಿ, ಫುಟ್ ಬಾಲ್, ಹಾಕಿ ಸೇರಿದಂತೆ ಹಲವಾರು ಕ್ರೀಡೆಗಳಿಗೆ ಒಂದು ಸ್ದಾನಕೊಟ್ಟು ಆಸಕ್ತರಿಗೆ ಈ ಕ್ರೀಡೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಅದೇ ರೀತಿಯಾಗಿ ಅಡುಗೆ ಮಾಡುವ ಸ್ಪರ್ಧೆಯನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ ಗುರುತಿಸಿದೆ. ಅಂದಹಾಗೆ ಈ ಅಡುಗೆ ಮಾಡುವ ಸ್ಪರ್ಧೆಗಳು ಸಾಮಾನ್ಯವಾಗಿ ಶಾಲಾ ಕಾಲೇಜುಗಳ ಪ್ರತಿಭಾ ದಿನಾಚರಣೆ ದಿನದಂದು ನಡೆಯುತ್ತವೆ. ಅದರಲ್ಲಿ ಕುಕ್ಕಿಂಗ್ ವಿಥ್ ಫೈರ್, ಕುಕ್ಕಿಂಗ್ ವಿಥೌಟ್ ಫೈರ್ ಎಂಬ ಎರಡು ರೀತಿಯ ಅಡುಗೆ ಸ್ಪರ್ಧೆಗಳನ್ನು ಆಯೋಜಿಸುವುದುಂಟು. ಈ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಒಬ್ಬ ಸ್ಪರ್ಧಾಳು ಒಮ್ಮೆಗೆ, ಒಂದು ಗಂಟೆಗೆ ಎಷ್ಟು ಬಗೆಯ ಅಡುಗೆ ಮಾಡಬಹುದು ಒಂದು, ಎರಡು, ಸಮಯ ಅವಕಾಶವಿದ್ದರೆ ಹೆಚ್ಚು ಅಂದರೂ ಕೂಡ ಮೂರು ಬಗೆಯ ಅಡುಗೆ ಮಾಡಬಹುದು.

ಆದರೆ ಇಲ್ಲಿ 12 ವರ್ಷದ ಹುಡುಗಿಯೊಬ್ಬಳು ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ 50ಕ್ಕಿಂತ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಗಮನ ಸೆಳೆದಿದ್ದಾಳೆ. ಹೌದು ಬೆಂಗಳೂರಿನ ಸಾನಿಕ ಎಂಬ 12 ವರ್ಷದ ಹುಡುಗಿ ಬರೋಬ್ಬರಿ 53 ಬಗೆಯ ವಿವಿಧ ತಿಂಡಿ ತಯಾರಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿ ವಿಶೇಷ ಸಾಧನೆ ಮಾಡಿದ್ದಾಳೆ. ಸಾನಿಕ ಕೇವಲ ಒಂದು ಗಂಟೆಯಲ್ಲಿ ಟೀ, ರವೆ ಇಡ್ಲಿ, ನೀರ್ ದೋಸಾ, ಚಿಕನ್ ಕಬಾಬ್, ಚಿಕನ್ ಟಿಕ್ಕ, ಪನ್ನೀರ್ ಟಿಕ್ಕ ಗೀ ರೈಸ್, ಕ್ಯಾಬೇಜ್ ಪಲ್ಯ, ಬೀನೀಸ್ ಪಲ್ಯ, ಬೇಬಿಕಾರ್ನ್, ಸ್ವೀಟ್ ಕಾರ್ನ್ ಮಸಾಲಾ, ಪನ್ನೀರ್ ಮಂಚೂರಿಯನ್ ಹೀಗೆ ಭಾರತದ ಎಲ್ಲಾ ಭಾಗದ ವೈವಿಧ್ಯಮಯ ತಿಂಡಿತಿನಿಸುಗಳನ್ನು ತಯಾರು ಮಾಡಿ ರೆಕಾರ್ಡ್ ಮಾಡಿದ್ದಾಳೆ.

ಸಾನಿಕಾಳ ಈ ವಿಶೇಷ ಪ್ರತಿಭೆಯನ್ನು ಗುರುತಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾನಿಕಾಳ ಹೆಸರನ್ನು ದಾಖಲು ಮಾಡಲಾಗಿದೆ, ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಸಾನಿಕಾ ಸಾಕ್ಷಿಯಾಗಿದ್ದಾಳೆ. ಅಬ್ಬಾ ಒಂದು ತಾಸಿನಲ್ಲಿ ಬರೋಬ್ಬರಿ ಐವತ್ತಕ್ಕಿಂತ ಜಾಸ್ತಿ ತಿಂಡಿ ಮಾಡುವುದು ಸಾಧನೆಯೇ ಸರಿ. ಸಾನಿಕ ಅವರು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ ಹಾಗೂ ಕೇರಳದ ಹುಡುಗಿಯ ಹಳೆಯ ದಾಖಲೆ ಮುರಿದು ಈ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಇದರ ನಡುವೆ ಸಾನಿಕ ಅವರು ಯೌಟ್ಯೂಬ್ ಅಲ್ಲಿ ತಮ್ಮದೇ ‘Sanika Dear Kitchen’ ಎಂಬ ಚಾನೆಲ್ ಶುರು ಮಾಡಿದ್ದು ಅಲ್ಲಿ ತಾವು ಮಾಡುವ ಅಡುಗೆ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ, ಆಟ ಪಾಠವೆನ್ನುವ ಈ 12 ವರ್ಷ ವಯಸ್ಸಿನಲ್ಲಿ ಸಾನಿಕಾಳ ಸಾಧನೆ ನಿಜಕ್ಕೂ ಮಾದರಿಯಾಗಿದೆ. ಇನ್ನು ಈ ಏಷ್ಯಾ ಬುಕ್ ಆಫ್ ರೆಕಾರ್ಡ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಅಂಗ ಸಂಸ್ಥೆಯಾಗಿದೆ. ಇದು ವಿಯೇಟ್ನಾಂ ಹೋಚಿಮ್ಮಿನ್ ನಲ್ಲಿ ತನ್ನ ನಿಯಂತ್ರಣ ಕೆಂದ್ರವನ್ನು ಹೊಂದಿದೆ.

%d bloggers like this: