ಒಂದೇ ನಿಮಿಷದಲ್ಲಿ 25000 ಬುಕಿಂಗ್. ಹೊಸ ದಾಖಲೆ ಬರೆದ ಭಾರತದ ಈ ಕಾರು

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಮನೆಗೊಂದು ಕಾರು ಬೇಕೆ ಬೇಕೆಂಬ ಒಂದು ರೂಢಿ ಶುರು ಆಗುತ್ತಿದೆ. ಹೌದು ನಮ್ಮ ದಿನ ನಿತ್ಯದ ಜೀವನ ಚಟುವಟಕೆಗಳಿಗಾಗಿ ಕಾರು ಅವಶ್ಯಕ ಎಂಬಂತಹ ಒಂದು ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿಯೇ ಜಗತ್ತಿನ ಎಲ್ಲ ಕಾರು ತಯಾರಿಕಾ ಕಂಪೆನಿಗಳು ಭಾರತದ ಮಾರುಕಟ್ಟೆಯನ್ನು ಆವರಿಸಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತವೆ. ಆದರೆ ಈ ವಿದೇಶಿ ಕಾರು ತಯಾರಿಕಾ ಕಂಪೆನಿಗಳಿಗೆ ಇದೀಗ ನಮ್ಮ ಭಾರತದ್ದೇ ಆದ ಮಹೀಂದ್ರ ಕಂಪೆನಿಯು ಸಖತ್ ಪೈಪೋಟಿ ನೀಡುತ್ತಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಮಹೀಂದ್ರ ಕಂಪೆನಿಯ ಕಾರುಗಳಿಗೆ ಬೇಡಿಕೆ ಅತಿಯಾಗಿ ಬರುತ್ತಿದೆ. ಅದಕ್ಕೆ ತಕ್ಕಂತೆ ಕಂಪೆನಿಯು ಸಹ ತಮ್ಮ ಗ್ರಾಹಕರ ಬೇಡಿಕೆಗಳಿಗೆ ಮೀರಿದ ಸೌಲಭ್ಯವನ್ನು ನೀಡಿ ಕೈಗೆಟುಕುವ ಬೆಲೆಯಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಇದೀಗ ಮಹೀಂದ್ರ ಕಂಪೆನಿಯ ಒಂದು ಕಾರಿನ ಹೊಸ ಅವತರಣಿಕೆ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ದಾಖಲೆಯ ಬುಕಿಂಗ್ ಆಗಿ ಹಳೆಯ ಎಲ್ಲ ರೆಕಾರ್ಡ್ ಗಳನ್ನು ಮುರಿದು ಹಾಕಿದೆ. ಹೌದು ಮಹೀಂದ್ರ ಸ್ಕಾರ್ಪಿಯೊ ಎನ್ ಬಿಡುಗಡೆ ಆದ ಒಂದೇ ನಿಮಿಷಕ್ಕೆ 25000 ಬಕಿಂಗ್ ಹಾಗೂ ಮೂವತ್ತು ನಿಮಿಷಗಳಲ್ಲಿ ಬರೋಬ್ಬರಿ ಒಂದು ಲಕ್ಷ ಬುಕಿಂಗ್ ಪಡೆಯುವ ಮೂಲಕ ಎಲ್ಲ ಕಾರು ತಯಾರಿಕಾ ಕಂಪನಿಗಳ ಹುಬ್ಬೇರುವಂತೆ ಮಾಡಿದೆ. ಈ ಮೂಲಕ ಕಾರು ಒಂದು ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಬುಕಿಂಗ್ ಗಳನ್ನ ಪಡೆದು ದಾಖಲೆ ಬರೆದಿದೆ.

ಈ ಹೊಸ ಎಸ್ ಯು ವಿ ಕಾರು ಸ್ಪೋರ್ಟ್ಸ್ ಲುಕ್ ಅನ್ನು ಹೊಂದಿದ್ದು ಆಕರ್ಷಣೀಯವಾಗಿದೆ. ಜುಲೈ 30 ರ ಬೆಳಿಗ್ಗೆ 11 ಗಂಟೆಗೆ ಇದರ ಬುಕಿಂಗ್ ಆರಂಭವಾಗಿತ್ತು. ಬುಕಿಂಗ್ ಬೆಲೆಯನ್ನು 21 ಸಾವಿರಕ್ಕೆ ನಿಗದಿ ಮಾಡಲಾಗಿತ್ತು. ಇದಕ್ಕೆ ಸಖತ್ ಬೇಡಿಕೆ ಬರುತ್ತದೆ ಎಂದು ಊಹಿಸಲಾಗಿತ್ತು. ಆದರೆ ಇಷ್ಟರ ಮಟ್ಟಿಗೆ ಮುಟ್ಟುತ್ತದೆ ಎಂದು ಯಾರೂ ಕೂಡ ಕಲ್ಪನೆ ಮಾಡಿದ್ದಿಲ್ಲ. ಈ ಹೊಸ ಕಾರನ್ನು ಕೇವಲ ಭಾರತ ಅಷ್ಟೇ ಅಲ್ಲ ನೇಪಾಳ, ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಕೂಡ ಬಿಡುಗಡೆ ಮಾಡಲಾಗಿದ್ದು ಅಲ್ಲಿಯೂ ಸಹ ಇದರ ಬೇಡಿಕೆ ಮುಗಿಲು ಮುಟ್ಟಿದೆ ಎಂದು ಹೇಳಲಾಗುತ್ತಿದೆ.

%d bloggers like this: