ಒಂದೇ ಒಂದು ದೃಶ್ಯಕ್ಕೆ ದೊಡ್ಡ ಮೊತ್ತದ ಹಣ ಖರ್ಚು ಮಾಡಿದ ದೃವ ಸರ್ಜಾ ಅವರ ಮಾರ್ಟಿನ್ ಚಿತ್ರತಂಡ

ಸ್ಯಾಂಡಲ್ ವುಡ್ ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಮತ್ತು ಅಪಾರ ಅಭಿಮಾನಿ ಬಳಗವನ್ನು ಗಳಿಸಿದ ನಟ ಅಂದರೆ ಅದು ಒನ್ ಅಂಡ್ ಓನ್ಲೀ ಆಕ್ಷನ್ ಪ್ರಿನ್ಸ್ ಧೃವಸರ್ಜಾ. ನಟ ಧೃವಸರ್ಜಾ ಅವರು ಅಭಿನಯಿಸಿರುವುದು ನಾಲ್ಕೇ ಸಿನಿಮಾ. ಆದರೆ ಅವರಿಗೆ ನಾಡಿನಾದ್ಯಂತ ಅಪಾರ ಅಭಿಮಾನಿಗಳ ದಂಡೇ ಇದೆ. ಖಡಕ್ ಡೈಲಾಗ್ ಡೆಲಿವರಿ, ಮಸ್ತ್ ಅನ್ನಿಸುವಂತಹ ಡ್ಯಾನ್ಸ್, ಜಬರದಸ್ತ್ ಫೈಟ್ಸ್ ಹೀಗೆ ಎಲ್ಲಾ ರೀತಿಯಾಗಿ ಮನರಂಜನೆ ನೀಡುವ ಯಂಗ್ ಅಂಡ್ ಎನರ್ಜಿಟಿಕ್ ನಟರಾದ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಅವರನ್ನ ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟ ಪಡುತ್ತಾರೆ. ಇದೀಗ ನಟ ಆಕ್ಷನ್ ಪ್ರಿನ್ಸ್ ಅವರು ತನ್ನನ್ನ ಸ್ಯಾಂಡಲ್ ವುಡ್ ಗೆ ಅದ್ದೂರಿಯಾಗಿ ಪರಿಚಯಿಸಿದ ತಮ್ಮ ಚೊಚ್ಚಲ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್ ಅವರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್ ಚಿತ್ರ ಇತ್ತೀಚೆಗೆ ತಾನೇ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಮಾರ್ಟಿನ್ ಸಿನಿಮಾದಲ್ಲಿ ನಟ ಧೃವ ಸರ್ಜಾ ಅವರ ಎಂಟ್ರಿ ದೃಶ್ಯ ಭರ್ಜರಿಯಾಗಿ ಮೂಡಿ ಬಂದಿದೆಯಂತೆ.

ಈ ದೃಶ್ಯಕ್ಕಾಗಿ ಬರೋಬ್ಬರಿ ಐದೂವರೆ ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮಾರ್ಟಿನ್ ಸಿನಿಮಾದ ಪೋಸ್ಟರ್ ಮತ್ತು ಫಸ್ಟ್ ಲುಕ್ ಟೀಸರ್ ಸಖತ್ ಕ್ರೇಜ಼್ ಹುಟ್ಕು ಹಾಕಿದೆ. ಪೋಸ್ಟರ್ ನೋಡಿದ ಸಿನಿ ಪ್ರೇಕ್ಷಕರು ಅದರಲ್ಲೂ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರ ಅಭಿಮಾನಿಗಳಿಗೆ ಹಬ್ಬದೂಟದ ಮುನ್ಸೂಚನೆ ಸಿಕ್ಕಿದೆ. ಈ ಮಾರ್ಟಿನ್ ಚಿತ್ರಕ್ಕಾಗಿ ಧೃವ ಸರ್ಜಾ ಅವರು ತಮ್ಮ ದೇಹವನ್ನ ಸಖತ್ತಾಗಿಯೇ ಉರಿಗೊಳಿಸಿದ್ದಾರೆ. ಇನ್ನು ಮಾರ್ಟಿನ್ ಸಿನಿಮಾಗೆ ಖ್ಯಾತ ನಿರ್ಮಾಪಕ ಉದಯ್ ಕೆ.ಮೆಹ್ತಾ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿಕೊಂಡಿರುವ ಮಾರ್ಟಿನ್ ಚಿತ್ರತಂಡ ಇನ್ನೊಂದಷ್ಟು ಟಾಕಿ ಪೋಷನ್ ಗಳನ್ನ ಮಾತ್ರ ಬಾಕಿ ಉಳಿಸಿಕೊಂಡಿದೆ. ಈ ಚಿತ್ರದ ಸನ್ನಿವೇಶವೊಂದರಲ್ಲಿ ಬರುವ ಕಾರ್ ಚೇಸಿಂಗ್ ಫೈಟ್ ಸೀನ್ ಗಾಗಿ ಅದ್ದೂರಿ ವೆಚ್ಚ ತೊಡಗಿಸಿ ರಿಚ್ ಆಗಿ ಚಿತ್ರೀಕರಣ ಮಾಡಿದ್ದಾರೆ. ಮಾರ್ಟಿನ್ ಸಿನಿಮಾದಲ್ಲಿ ನಟ ಧೃವಸರ್ಜಾ ಅವರು ಮೂರು ವಿಭಿನ್ನವಾದ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಿರ್ದೇಶಕ ಎ.ಪಿ‌ ಅರ್ಜುನ್ ಅವರು ಹೇಳುವಂತೆ ಎಲ್ಲಾ ಅಂದುಕೊಂಡಂತೆಯಾದರೆ ಇದೇ ವರ್ಷದ ಅಂತ್ಯ ಅಥವಾ ಸೆಪ್ಟೆಂಬರ್ 30ಕ್ಕೆ ಚಿತ್ರ ಮಂದಿರಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಲಿದೆ.

%d bloggers like this: