ಒಂದೇ ಸಲ ಚಾರ್ಜ್ ಮಾಡಿ ಬರೋಬ್ಬರಿ 303 ಕಿಲೋಮೀಟರ್ ಸ್ಕೂಟರ್ ಓಡಿಸಿದ ಗ್ರಾಹಕ

ವಾಯು ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡಬೇಕು ಎಂಬ ಸದುದ್ದೇಶದಿಂದ ನರೇಂದ್ರ ಮೋದಿ ಸರ್ಕಾರ ಇಂಧನ ಸಹಿತ ವಾಹನಗಳನ್ನ ಕಡಿಮೆ ಮಾಡಿ ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ತೀರ್ಮಾನಿಸಿತು. ಅದರಂತೆ ದೇಶದ ಜನರು ಹೆಚ್ಚೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸಲು ಪ್ರೋತ್ಸಾಹ ನೀಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಬ್ಸಿಡಿ ಕೂಡ ನೀಡುತ್ತಿದೆ. ಅದರಂತೆ ಇದೀಗ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳು ಕೂಡ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಅದರಲ್ಲಿಯೂ ಕೂಡ ಓಲಾ ಸಂಸ್ಥೆಯ ಎಲೆಕ್ಟ್ರಿಕ್ ವಾಹನಗಳು ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಅದರ ಜೊತೆಗೆ ಈ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ಒಂದಷ್ಟು ನಕರಾತ್ಮಕ ಪ್ರತಿಕ್ರಿಯೆಗಳು ಕೂಡ ಕೇಳಿ ಬರುತ್ತಿದ್ದವು.

ಇತ್ತ ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿಯಾಗಿ ದಿನ ಬಳಕೆಯ ವಸ್ತುಗಳ ಬೆಲೆ ಕೂಡ ಗಗನ ಮುಟ್ಟಿ ಜನ ಸಾಮಾನ್ಯರು ಬೈಕ್ ಕಾರು ಚಲಾಯಿಸುವುದೇ ಬೇಡಪ್ಪಾ ಅನ್ನೋಷ್ಟರ ಮಟ್ಟಿಗೆ ಬೇಸತ್ತಿದ್ದಾರೆ. ಹಾಗಾಗಿಯೇ ಅನೇಕ ಮಂದಿ ಈ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರುಗಳತ್ತ ಮುಖ ಮಾಡಿದ್ರು. ಅದರಂತೆ ಈ ಎಲೆಕ್ಟ್ರಿಕ್ ವಾಹನಗಳಿಗೆ ಬಾರಿ ಬೇಡಿಕೆ ಕೂಡ ಉಂಟಾಯಿತು. ಇನ್ನೊಂದೆಡೆ ಚಾರ್ಜಿಂಗ್ ಸ್ಕೂಟರ್ ಗಳು ಅಲ್ಲಿಲ್ಲಿ ಬ್ಲಾಸ್ಟ್ ಆಗಿ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿ ಮಾಡಬೇಕು ಅಂತಿದ್ದ ಜನರಲ್ಲಿ ಆತಂಕ ಕೂಡ ಮೂಡಿತು. ಇತ್ತೀಚಿಗೆ ಆಂಧ್ರಪ್ರದೇಶದ ವಿಜಯವಾಡದ ನಿವಾಸಿಯೊಬ್ಬರು ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಿರುತ್ತಾರೆ. ಎಂದಿನಂತೆ ಸಹಜವಾಗಿ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜಿಂಗ್ ಕಾಲಿ ಯಾಗಿದ್ದಾಗ ರಾತ್ರಿಯ ವೇಳೆ ಚಾರ್ಜಿಂಗ್ ಹಾಕಿ ಮಲಗಿರುತ್ತಾರೆ. ಮಧ್ಯರಾತ್ರಿ ಇದ್ದಿಕ್ಕಿದಂತೆ ಚಾರ್ಜಿಂಗ್ ಆಗುತ್ತಿದ್ದಂತಹ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆಗಿ ಮನೆಯಲ್ಲಿದ್ದ ತಂದೆ ಮಗಳು ಸಾವನ್ನಪ್ಪಿದ್ದಾರೆ.

ಅದೇ ರೀತಿ ಘಟನೆ ಇತ್ತೀಚೆಗೆ ತಮಿಳುನಾಡಿನಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಬೆಂಕಿ ಹತ್ತಿಕೊಂಡು ಉರಿದಿತ್ತು. ಈ ರೀತಿಯ ಅಹಿತಕರ ಅಪಾಯಕಾರಿ ಘಟನೆಗಳು ನಡೆಯುತ್ತಲೇ ಇವೆ. ಇದೆಲ್ಲದರ ನಡುವೆ ಇದೀಗ ತಮಿಳುನಾಡಿನ ಜಿಗಾರ್ ಬಾರ್ದಾ ಎಂಬ ವೈದ್ಯರೊಬ್ಬರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನ ಒಮ್ಮೆ ಮಾತ್ರ ಚಾರ್ಜ್ ಮಾಡಿ ಬರೋಬ್ಬರಿ 303 ಕಿಮೀ ದೂರ ಕ್ರಮಿಸಿದ್ದಾರಂತೆ. ಅವರು ಓಲಾ ಎಸ್ ಒನ್ ಪ್ರೋ ಸ್ಕೂಟರ್ ಖರೀದಿ ಮಾಡಿದ್ರಂತೆ. ಇದೇ ಸ್ಕೂಟರ್ ನಲ್ಲಿ ಅವರು ಪ್ರತಿಗಂಟೆಗೆ 23ಕಿಮೀ ವೇಗದಲ್ಲಿ ಸರಿ ಸುಮಾರು 300ಕ್ಕೂ ಹೆಚ್ಚು ಕಿಮೀ ಪ್ರಯಾಣ ಮಾಡಿದ್ದಾರಂತೆ. ಇದು ಅವರಿಗೆ ಸಂತಸ ಮತ್ತು ಅಚ್ಚರಿ ತಂದಿದೆಯಂತೆ. ಈ ವಿಚಾರವನ್ನು ಸ್ವತಃ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

%d bloggers like this: