ಒಂದೇ ತಿಂಗಳಲ್ಲಿ ಬರೊಬ್ಬರಿ 16,331 ಕಾರುಗಳನ್ನು ಮಾರಾಟ ಮಾಡಿದ ದೈತ್ಯ ಕಂಪನಿ

ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಪ್ರಸಿದ್ದ ಕಾರುಗಳಲ್ಲಿ ಒಂದಾದ ಕಿಯಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ವಹಿವಾಟು ನಡೆಸಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಬರೋಬ್ಬರಿ 16,331 ಕಿಯಾ ಕಾರುಗಳು ಮಾರಾಟವಾಗಿವೆ ಎಂದು ಸಂಸ್ಥೆಯೇ ತಿಳಿಸಿದೆ. ಇನ್ನು ಕಳೆದ ವರ್ಷ ಇದೇ ಅಕ್ಟೋಬರ್ ತಿಂಗಳು ಬರೋಬ್ಬರಿ 21,021 ಕಿಯಾ ಕಾರುಗಳು ಮಾರಾಟ ಕಂಡಿದ್ದವು. ಕೊರಿಯಾ ಮೂಲದ ಈ ಕಿಯಾ ಕಂಪನಿಯ ಕಾರುಗಳು ಸದ್ಯಕ್ಕೆ ಭಾರತದಲ್ಲಿ ಉತ್ತಮ ಬೇಡಿಕೆಯನ್ನ ಸೃಷ್ಟಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಿಸಿಕೊಂಡು ಮಾರಾಟವಾಗುತ್ತಿದ್ದ ಕಿಯಾ ಕಾರುಗಳು ಕೋವಿಡ್ ನಿಂದಾಗಿ ಶೇಕಡ 20 ರಷ್ಟು ಇಳಿಮುಖ ಕಂಡಿದೆ.

ಆದರೂ ಕೂಡ ಯಾವುದೇ ರೀತಿಯಾಗಿ ಬೇಡಿಕೆಯಲ್ಲಿ ಮಾತ್ರ ಕಿಯಾ ಕಾರು ತನ್ನ ಮಾರುಕಟ್ಟೆಯನ್ನು ಕಳೆದುಕೊಂಡಿಲ್ಲ. ಕಿಯಾ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಆಗಿರುವ ಟೇ ಜಿನ್ ಪಾರ್ಕ್ ಅವರು ನಮ್ಮ ಕಿಯಾ ಕಂಪನಿಯ ಗ್ರಾಹಕರು ಮತ್ತು ಮಾರಾಟಗಾರರ ನಿರಂತರ ಬೆಂಬಲವು ವರ್ಷಪೂರ್ತಿ ಉತ್ತಮ ಕಾರ್ಯಕ್ಷಮತೆ ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಪ್ರಮುಖವಾಗಿ ಕಿಯಾ ಇಂಡಿಯಾ ಕಂಪನಿಯ ಕಿಯಾ ಎಸ್ ಯೂ ವಿ ಸೆಲ್ಟೋಸ್ ಮತ್ತು ಸೊನೆಟ್ ನಿಂದ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಈ ಸೆಲ್ಟೋಸ್ ಕಾರು ಕಿಯಾ ಸಂಸ್ಥೆಯ ಮೊದಲ ಕಾರ್ ಆಗಿದೆ.

ಇದುವರೆಗೂ ಈ ಕಿಯಾ ಸೆಲ್ಟೋಸ್ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಕಾರ್ ಮಾರಾಟವಾಗಿದೆ ಎಂದು ತಿಳಿಸಿದ್ದರು. ಈ ಕಿಯಾ ಸೆಲ್ಟೋಸ್ ಮತ್ತು ಸೊನೆಟ್ ಕಾರ್ ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದ ಬೇಡಿಕೆಯನ್ನು ಹೊಂದಿದೆ. ಈ ಕಿಯಾ ಸೆಲ್ಟೋಸ್ ವಿವಿಧ ವೇರಿಯೆಂಟ್ಸ್ ಗಳನ್ನು ಒಳಗೊಂಡಿದ್ದು, ಎಕ್ಸ್ ಲೈನ್ ವೇರಿಯೆಂಟ್ ಭಾರತದಲ್ಲಿ ಇದರ ಬೆಲೆಯು 17.79 ಲಕ್ಷ ರೂಗಳದ್ದಾಗಿದೆ. ಇದರಲ್ಲಿ ಲೈನ್ ಅಪ್ ನ ಹೊಸ ಟಿಪ್ ಆಫ್ ಲೈನ್ ವೇರಿಯೆಂಟ್ ಆಗಿದ್ದು, ಟಾಪ್ ಸ್ಪೆಕ್ ಜಿಟಿ ರೂಪಾಂತರವನ್ನು ಹೊಂದಿದ್ದಾಗಿದೆ. ಈ ಕಾರ್ ಆಕರ್ಷಕ ಸ್ಟೋರ್ಟ್ ಕಾರ್ ವಿನ್ಯಾಸ ಹೊಂದಿದ್ದು ಕಾರು ಪ್ರಿಯರನ್ನ ಬಹುಬೇಗ ತನ್ನತ್ತ ಸೆಳೆಯುತ್ತದೆ.

ಪ್ರಸ್ತುತ ಭಾರತದಲ್ಲಿ ಕಿಯಾ ಕಂಪನಿಯ ಕಾರುಗಳು ಜಗತ್ತಿನ ಸುಪ್ರಸಿದ್ದ ಐಷಾರಾಮಿ ಕಾರುಗಳಿಗೆ ಸೇರಿದಂತೆ ಟಯೋಟ, ಮಾರುತಿ ಸುಜುಕಿ, ಹೋಂಡಾ ಸಂಸ್ಥೆಯ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಒಟ್ಟಾರೆಯಾಗಿ ಈ ಕಿಯಾ ಕಂಪನಿಯ ಕಾರುಗಳ ತಿಂಗಳಿಂದ ತಿಂಗಳಿಗೆ ಹೆಚ್ಚೆಚ್ಚು ಮಾರಾಟ ಕಾಣುತ್ತಿದ್ದು ಕಳೆದ ತಿಂಗಳು ನವೆಂಬರ್ ರಂದು ಬರೋಬ್ಬರಿ 14,214 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ನವೆಂಬರ್ ತಿಂಗಳು ಶೇಕಡ 33 ರಷ್ಟು ಗಣನೀಯವಾಗಿ ಇಳಿಕೆ ಕಂಡಿದೆ. ಇನ್ನು ಇತ್ತೀಚೆಗೆ ಭಾರತೀಯ ಚಿತ್ರರಂಗದ ಖ್ಯಾತ ಗಾಯಕ ಸೋನು ನಿಗಮ್ ಕೂಡ 25 ಲಕ್ಷ ಮೌಲ್ಯದ ಕಿಯಾ ಕಾರ್ನಿವಲ್ ಕಾರನ್ನು ಖರೀದಿ ಮಾಡಿ ಸುದ್ದಿಯಾಗಿದ್ದರು.

%d bloggers like this: