ವಿಶ್ವ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾವಾಗಿದ್ದ ಸ್ಪೈಡರ್ ಮ್ಯಾನ್ ಸಿನಿಮಾ ಇದೇ ಡಿಸೆಂಬರ್ 17 ರಂದು ಜಗತ್ತಿನಾದ್ಯಂತ ರಿಲೀಸ್ ಆಗಿದ್ದು ಕೋಟಿ ಕೋಟಿ ಲೂಟಿ ಮಾಡಿದೆ. ಹೌದು ಅಪಾರ ನಿರೀಕ್ಷೆ ಹುಟ್ಟು ಹಾಕಿದ್ದ ಹಾಲಿವುಡ್ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಾಣ ಮಾಡಿದೆ. ಈ ಸ್ಪೈಡರ್ ಮ್ಯಾನ್ ಸಿನಿಮಾ ಅಮೇರಿಕಾದಲ್ಲಿ ಬಿಡುಗಡೆ ಆಗುವ ಮುನ್ನವೇ ಭಾರತದಲ್ಲಿ ಡಿಸೆಂಬರ್ 16 ರಂದು ರಿಲೀಸ್ ಆಗಿತ್ತು. ಸ್ಪೈಡರ್ ಮ್ಯಾನ್ ರಿಲೀಸ್ ಗೂ ಮೊದಲು ಅತ್ಯಧಿಕ ಅಡ್ವಾನ್ಸ್ ಬುಕ್ಕಿಂಗ್ ಪಡೆದುಕೊಂಡ ಎರಡನೇ ಸಿನಿಮಾ ಎಂಬ ದಾಖಲೆ ಕೂಡ ನಿರ್ಮಾಣ ಮಾಡಿತು. 2019 ರಲ್ಲಿ ರಿಲೀಸ್ ಆಗಿದ್ದ ಮಾರ್ವೆಲ್ ನ ಅವೆಂಜರ್ಸ್ ಎಂಡ್ ಗೇಮ್ ಚಿತ್ರ ಇಂಡಿಯಾದಲ್ಲಿ ಅತಿ ಹೆಚ್ಚು ಪ್ರೀ ಬುಕ್ಕಿಂಗ್ ಪಡೆದುಕೊಂಡು ದಾಖಲೆ ಮಾಡಿತ್ತು.

ಮಾರ್ವೆಲ್ ಸ್ಟುಡಿಯೋಸ್, ಕೊಲಂಬಿಯಾ ಪಿಕ್ಚರ್ಸ್, ಪಾಸ್ಕಲ್ ಪಿಕ್ಚರ್ಸ್ ಸಂಸ್ಥೆಯಡಿಯಲ್ಲಿ ಕೆವಿನ್ ಅವರ ನಿರ್ಮಾಣದಲ್ಲಿ ಜಾನ್ ವಾಟ್ಸ್ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಸ್ಪೈಡರ್ ಮ್ಯಾನ್ ಸಿನಿಮಾಗೆ ಮೈಕಲ್ ಜಿಯಾ ಚಿನೋ ಮ್ಯೂಸಿಕ್ ನೀಡಿದ್ದು,ಟಿಮ್ ಹಾಲೆಂಡ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳ ಅವತರಣೆಕೆಯಲ್ಲಿ ರಿಲೀಸ್ ಆಗಿರುವ ಸ್ಪೈಡರ್ ಮ್ಯಾನ್ ಸಿನಿಮಾ ಮೊದಲ ವಾರದಲ್ಲಿ ಬರೋಬ್ಬರಿ 138 ಕೋಟಿ ಗಳಿಕೆ ಮಾಡಿ ದಾಖಲೆ ನಿರ್ಮಾಣ ಮಾಡಿದೆ. ಸ್ಪೈಡರ್ ಮ್ಯಾನ್ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಟಾಮ್ ಹಾಲೆಂಡ್ ಮತ್ತು ಜೆಂಡೆಯಾ ನಟಿಸಿದ್ದು, ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.



ಈ ಸ್ಪೈಡರ್ ಮ್ಯಾನ್ ಸಿನಿಮಾ ಭಾರತದಲ್ಲಿ ಅತೀ ದೊಡ್ಡ ಆರಂಭ ಪಡೆದ ಹಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಾರೆಯಾಗಿ ಭಾರತೀಯ ಸಿನಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕೇವಲ ಒಂದೇ ಒಂದು ವಾರಕ್ಕೆ ಸರಿ ಸುಮಾರು ನೂರಾಮೂವತ್ತು ಕೋಟಿ ರೂ.ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ. ಭಾರತದಲ್ಲಿ ಎಲ್ಲಾ ರೀತಿಯ ಭಾಷೆಗಳಿಗೂ ಕೂಡ ಇಲ್ಲಿ ಉತ್ತಮ ಮಾರುಕಟ್ಟೆ ಇರುವ ಕಾರಣ ಹಾಲಿವುಡ್ ಸಿನಿಮಾಗಳು ಕೂಡ ಈ ಪರಿ ಪ್ರಮಾಣದ ಗಳಿಕೆ ಕಂಡು ಇದೀಗ ಇಂಗ್ಲೀಷ್ ಸಿನಿಮಾಗಳು ಭಾರತದಲ್ಲಿ ಬಾಕ್ಸ್ ಆಫೀಸ್ ಲೂಟಿ ಮಾಡಬಹುದು ಎಂಬುದನ್ನ ಮತ್ತೊಮ್ಮೆ ಪ್ರೂವ್ ಮಾಡಿದೆ.