ನಮ್ಮ ಜಗತ್ತು ದಿನೇ ದಿನೇ ದುಬಾರಿಯಾಗುತ್ತ ಸಾಗುತ್ತಿದೆ, ವರ್ಷದಿಂದ ವರ್ಷಕ್ಕೆ ಯಾವುದೇ ಒಂದರ ಮೌಲ್ಯ ಗಣನೀಯವಾದ ಏರಿಕೆಯನ್ನು ಕಾಣುತ್ತಿದೆ. ಅದರಂತೆ ಸಿನಿಮಾ ನಟ ನಟಿಯರು ಕೂಡ ತಮ್ಮ ಖ್ಯಾತಿ ಹೆಚ್ಚಿದಂತೆ ವರ್ಷದಿಂದ ವರ್ಷಕ್ಕೆ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಳ್ಳುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ದೇಶದ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಕೂಡ ಕೆಲವು ಚಿತ್ರಗಳು ದೇಶದ ಎಲ್ಲೆಯನ್ನು ಮೀರಿ ಹೊರ ದೇಶಗಳಲ್ಲಿ ಸಾಕಷ್ಟು ಸದ್ದು ಮಾಡಿ ಗಲ್ಲಾಪೆಟ್ಟಿಗೆಯನ್ನು ತುಂಬಿಸುತ್ತವೆ.

ಕೇವಲ ರಜನಿಕಾಂತ್ ಸಲ್ಮಾನ್ ಖಾನ್ ಶಾರುಖ್ ಖಾನ್ ಅಮೀರ್ ಖಾನ್ ಕಮಲಹಾಸನ್ ಅವರಷ್ಟೇ ಅಲ್ಲ ಸಣ್ಣ ಸಣ್ಣ ಚಿತ್ರಗಳು ಕೂಡ ಈಗ ವಿದೇಶಗಳಲ್ಲಿ ಹೆಸರು ಮಾಡುತ್ತಿದ್ದು ಭಾರತೀಯ ಚಿತ್ರರಂಗದ ಹೆಸರು ಉನ್ನತ ಮಟ್ಟದಲ್ಲಿ ಇದೆ. ಅದರಲ್ಲೂ ಕೆಲವು ನಟರು ಓಡುವ ಕುದುರೆ ಎಂದೇ ಹೆಸರು ಪಡೆದಿರುತ್ತಾರೆ. ಅವರು ಯಾವುದೇ ಚಿತ್ರ ಮಾಡಲಿ ಚಿತ್ರ ಯಶಸ್ಸು ಗಳಿಸಲಿ ಬಿಡಲಿ ಆದರೆ ನಿರ್ಮಾಪಕ ಹಾಕಿದ ಬಂಡವಾಳಕ್ಕೆ ಮಾತ್ರ ಎಂದು ಮೋಸವಾಗುವುದಿಲ್ಲ ಬದಲಾಗಿ ದುಪ್ಪಟ್ಟು ಲಾಭ ವನ್ನಾದರೂ ಕೊಟ್ಟು ಹೋಗುತ್ತದೆ.

ಅಂತಹ ದೇಶದ ಕೆಲವೇ ಕೆಲವು ನಟರಲ್ಲಿ ಬಾಲಿವುಡ್ ನ ಬಹುಬೇಡಿಕೆ ನಟನಾದ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕೂಡ ಒಬ್ಬರು. ಉಳಿದ ಖ್ಯಾತ ನಟರು ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾಗಳನ್ನು ಮಾಡಿದರೆ ಕಿಲಾಡಿ ಅಕ್ಷಯ್ ಕುಮಾರ್ 3 4 ಕೆಲವೊಮ್ಮೆ 5 ಚಿತ್ರಗಳನ್ನು ಸಹ ಮಾಡುತ್ತಾರೆ. ಅಕ್ಷಯ್ ಬಿಡುವಿಲ್ಲದೆ ಕೆಲಸ ಮಾಡುವುದಕ್ಕೆ ಅವರಿಗೆ ಒಂದರ ಹಿಂದೆ ಒಂದರಂತೆ ಸಾಲು ಸಾಲುಗಳು ಆಫಾರ್ ಗಳು ಸಿಗುತ್ತವೆ. 2020 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಟಾಪ್ ಒನ್ ಅಕ್ಷಯ್ ಕುಮಾರ್ ಎಂದು ಫೋರ್ಬ್ಸ್ ವರದಿ ಮಾಡಿತ್ತು.

ಹೌದು ಕೆಲವರ್ಷಗಳ ಹಿಂದೆ ಚಿತ್ರವೊಂದಕ್ಕೆ 99 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಿದ್ದ ಅಕ್ಷಯ್ ಕುಮಾರ್ ನಂತರ ಅದನ್ನು 110 ಕೋಟಿಗೆ ಹೆಚ್ಚಿಸಿಕೊಂಡರು. ಆದರೆ ಸದ್ಯಕ್ಕೆ ಬಂದ ಹೊಸ ವರದಿಯ ಪ್ರಕಾರ 2022 ರಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳಿಗೆ ಅಕ್ಷಯ್ ಕುಮಾರ್ ಬರೋಬ್ಬರಿ ಒಂದು 125 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ಈ ಮೂಲಕ ಇಡೀ ಭಾರತ ಚಿತ್ರರಂಗದಲ್ಲಿಯೇ ಅತಿಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಅಕ್ಷಯ್ ಕುಮಾರ್ ಹೊರಹೊಮ್ಮಿದ್ದಾರೆ.

ಬಹುತೇಕ ನಿರ್ಮಾಪಕರು ಅಕ್ಷಯ್ ಕೇಳಿದ ಸಂಭಾವನೆಯನ್ನು ಹಿಂದುಮುಂದು ನೋಡದೆ ಒಪ್ಪಿಕೊಳ್ಳುತ್ತಾರೆ ಅದಕ್ಕೆ ಮುಖ್ಯ ಕಾರಣ ಅಕ್ಷಯ್ ಕುಮಾರ್ ಅಭಿನಯದ ಒಂದು ಚಿತ್ರಕ್ಕೆ 35 ರಿಂದ 50 ಕೋಟಿ ರೂಪಾಯಿ ವ್ಯಯ ಆಗುತ್ತದೆ, ಸಿನಿಮಾ ಪ್ರಚಾರಕ್ಕಾಗಿ ಹತ್ತರಿಂದ ಹದಿನೈದು ಕೋಟಿ ರೂಪಾಯಿ ಸಾಕಾಗುತ್ತದೆ. ಇವುಗಳ ಜೊತೆ ಅಕ್ಷಯ್ ಅವರಿಗೆ ನೀಡುವ ಸಂಭಾವನೆಯನ್ನು ಪರಿಗಣಿಸಿದರೆ ಒಟ್ಟಾರೆ 180 ರಿಂದ 190 ಕೋಟಿ ಖರ್ಚಾಗುತ್ತದೆ. ಆದರೆ ಸಿನಿಮಾ ಬಿಡುಗಡೆಯಾದ ದಿನವೇ ನೂರು ಕೋಟಿ ರೂಪಾಯಿಗಳನ್ನು ಅಕ್ಷಯ್ ಕುಮಾರ್ ಸಿನಿಮಾ ಗಳಿಸಿ ಕೊಡುತ್ತದೆ. ಹೀಗಾಗಿಯೇ ಅವರಿಗಾಗಿ ಸಾಲುಸಾಲು ನಿರ್ಮಾಪಕರು ಚಿತ್ರ ಮಾಡಲು ಕಾಯುತ್ತಿರುತ್ತಾರೆ.