ಒಂದು ಸಿನಿಮಾಗೆ ಬರೋಬ್ಬರಿ 135 ಕೋಟಿ ಸಂಭಾವನೆ ಪಡೆಯುವ ನಟ ಇವರೇ ನೋಡಿ

ಸಿನಿಮಾ ತಾರೆಯರು ಬದುಕು ನೋಡಿದರೆ ಎಂತವರಿಗಾದರು ಅಚ್ಚರಿಯಾಗಿರುತ್ತದೆ. ಏಕೆಂದರೆ ಅವರ ಐಷಾರಾಮಿ ಕಾರು, ಬಂಗಲೆ, ಜೀವನ ಶೈಲಿ ಎಲ್ಲವೂ ಅದ್ದೂರಿಯಾಗಿಯೇ ಇರುತ್ತದೆ. ಅದರಲ್ಲಿಯೂ ಬಾಲಿವುಡ್ ಸ್ಟಾರ್ ನಟರ ಜೀವನ ಶೈಲಿ ನೋಡಿದರಂತು ಅಬ್ಬಾ ಇವರು ಈ ಪರಿ ಐಷಾರಾಮಿ ಜೀವನ ನಡೆಸಬೇಕಾದರೆ ಐಷಾರಾಮಿ ಅದ್ದೂರಿ ಲೈಫ್ ಲೀಡ್ ಮಾಡಬೇಕಾದರೆ ಇವರ ಆದಾಯದ ಮೂಲ ಎಷ್ಟಿರ ಬಹುದು. ಯಾವ್ಯಾವ ಮೂಲಗಳಿಂದ ಆದಾಯ ಗಳಿಸುತ್ತಿರಬಹುದು ಎಂಬ ಪ್ರಶ್ನೆ ಬಂದೇ ಬರುತ್ತದೆ. ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ ನಟರು ಕೇವಲ ನಟನೆ ಮಾತ್ರ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುತ್ತಾರೆ.

ಬಾಲಿವುಡ್ ಸ್ಟಾರ್ ನಟರಿಗೆ ಬೇರೆ ಮೂಲಗಳಿಂದ ಎಷ್ಟು ಆದಾಯ ಬರುತ್ತದೋ ಆದರೆ ಸಿನಿಮಾಗಳಿಂದಾನೇ ಅವರಿಗೆ ನೂರಾರು ಕೋಟಿ ಆದಾಯ ಬರುತ್ತದೆ ಎಂಬುದು ಬಿ-ಟೌನ್ ನಲ್ಲಿ ತಿಳಿದು ಬರುವ ಸುದ್ದಿ. ಬಾಲಿವುಡ್ ಮೂಲಗಳು ನೀಡುವ ಮಾಹಿತಿ ಪ್ರಕಾರ ಬಾಲಿವುಡ್ ಸ್ಟಾರ್ ನಟರು ತಮ್ಮ ಸಂಭಾವನೆಯನ್ನ ಸಿನಿಮಾ ಗಳಿಸಿದ ಲಾಭಾಂಶದಲ್ಲಿ ಪಾಲುದಾರಿಕೆಯ ರೂಪದಲ್ಲಿ ಪಡೆಯುತ್ತಾರಂತೆ. ಅಂತಹ ನಟರ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ನಟ ಅಂದರೆ ಅದು ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್. ಹೌದು ನಟ ಸಲ್ಮಾನ್ ಖಾನ್ ತಾವು ನಟಿಸಿದ ಚಿತ್ರ ಗಳಿಕೆ ಮಾಡಿದ ಲಾಭದಲ್ಲಿ ಪಾಲುದಾರಿಕೆ ಪಡೆಯುವ ಸೂತ್ರವನ್ನು ಕಳೆದ ಹತ್ತು ವರ್ಷಗಳಿಂದಾನೇ ಆರಂಭಿಸಿದ್ದಾರೆ.

ಹಾಗಾಗಿಯೇ 2016 ರಲ್ಲಿ ತೆರೆಕಂಡ ಸುಲ್ತಾನ್ ಚಿತ್ರಕ್ಕೆ ಬರೋಬ್ಬರಿ ನೂರು ಕೋಟಿ ಪಡೆದಿದ್ದರಂತೆ. ಅದಲ್ಲದೆ 2017 ರಲ್ಲಿ ರಿಲೀಸ್ ಆದ ಟೈಗರ್ ಜಿಂದಾ ಹೈ ಸಿನಿಮಾಗೆ ಬರೋಬ್ಬರಿ 130 ಕೋಟಿ ಸಂಭಾವನೆ ಪಡೆದಿದ್ದಾರೆ. ಇವೆಲ್ಲವು ಕೂಡ ಲಾಭಾಂಶದಲ್ಲಿ ಪಾಲುದಾರಿಕೆ ಪಡೆದುದ್ದಾಗಿರುತ್ತದೆ. ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ಅವರು ಕೂಡ ಸಿನಿಮಾ ಲಾಭಾಂಶದಲ್ಲಿ ಶೇಕಡಾ 75 ರಷ್ಟು ಮೊತ್ತ ಪಡೆಯುತ್ತಾರೆ. ಇತ್ತ ಬಾಲಿವುಡ್ ಬಾದ್-ಶಾ ಶಾರುಖ್ ಖಾನ್ ಶೇಕಡ 60 ರಷ್ಟು ಫ್ರಾಫಿಟ್ ಪರ್ಸೆಂಟೇಜ್ ಪಡೆಯುತ್ತಾರೆ.

ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರು ತಮ್ಮ ಒಂದು ಸಿನಿಮಾಗೆ ಬರೋಬ್ಬರಿ 135 ಕೋಟಿ ಸಂಭಾವನೆಯನ್ನ ನಿಗದಿ ಮಾಡಿದ್ದಾರಂತೆ‌. ಈ ಮೂಲಕ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿ ಗುರುತಿಸಿಕೊಂಡಿದ್ದಾರೆ ಅಕ್ಷಯ್ ಕುಮಾರ್. ಅದರಂತೆ ಹಿಂದಿ ಚಿತ್ರರಂಗದಲ್ಲಿ ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ಶೈನ್ ಆಗುತ್ತಿರುವ ಯುವ ನಟರಾದಂತಹ ರಣ್ ಬೀರ್ ಕಪೂರ್ ಎಪ್ಪತ್ತು ಕೋಟಿ ಸಂಭಾವನೆ ಪಡೆದರೆ, ಟೈಗರ್ ಶ್ರಾಫ್ ಐವತ್ತು ಕೋಟಿ ಸಂಭಾವನೆ ಪಡೆಯಲಿದ್ದಾರೆ. ನಟ ವರುಣ್ ಧವನ್ ಮೂವತ್ತು ಕೋಟಿ ಸಂಭಾವನೆ ಪಡೆದರೆ, ಜಾನ್ ಅಬ್ರಾಹಂ ಇಪ್ಪತ್ತು ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.

%d bloggers like this: