ಒಂದು ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಕರ್ನಾಟಕ ಮೂಲದ ನಟನ ಪುತ್ರಿ

ವ್ಯಾಲೆಂಟೆನ್ಸ್ ಡೇ ಆದ ಬೆನ್ನಲ್ಲೇ ದುಬಾರಿ ಐಷಾರಾಮಿ ಕಾರ್ ವೊಂದನ್ನ ಖರೀದಿ ಮಾಡಿ ಸುದ್ದಿಯಾಗಿದ್ದಾರೆ ಬಾಲಿವುಡ್ ಸ್ಟಾರ್ ನಟನ ಪುತ್ರಿ . ಈ ಬಾಲಿವುಡ್ ಸ್ಟಾರ್ ನಟನ ಪುತ್ರಿ ಇತ್ತೀಚೆಗೆ ಭಾರತ ತಂಡದ ಸ್ಟಾರ್ ಕ್ರಿಕೆಟಿರೊಬ್ಬರನ್ನ ಲವ್ ಮಾಡುತ್ತಿರುವುದನ್ನ ಸ್ಪಷ್ಟಪಡಿಸಿ ಸುದ್ದಿಯಾಗಿದ್ದರು. ಇದೀಗ ಹೊಸ ಕಾರ್ ಖರೀದಿ ಮಾಡುವ ಬಿಟೌನ್ ಅಂಗಳದಲ್ಲಿ ಸುದ್ದಿಯಾಗಿದ್ದಾರೆ. ಹಾಗಾದರೆ ಯಾರು ಈ ಬಾಲಿವುಡ್ ಬೆಡಗಿ. ಈಕೆ ಬಾಲಿವುಡ್ ನ ಯಾವ ಸ್ಟಾರ್ ನಟನ ಮಗಳು ಎಂದು ಯೋಚಿಸುತ್ತಿದ್ದೀರಾ. ಈ ಸ್ಟಾರ್ ನಟಿ ಬೇರಾರು ಅಲ್ಲ, ಅಥಿಯಾ ಶೆಟ್ಟಿ. ಬಾಲಿವುಡ್ ಮಾಡೆಲ್ ಕಮ್ ಆಕ್ಟ್ರೆಸ್ ಆಗಿರುವ ಅಥಿಯಾ ಶೆಟ್ಟಿ ಬಾಲಿವುಡ್ ಸ್ಟಾರ್ ನಟರಾದ ಸುನೀಲ್ ಶೆಟ್ಟಿ ಅವರ ಪುತ್ರಿ. ಇವರು ಕರ್ನಾಟಕ ಮೂಲದವರು. ಹಿಂದಿ ಚಿತ್ರರಂಗದಲ್ಲಿ ತಮ್ಮದೇಯಾದ ನೇಮು ಫೇಮು ಮಾಡಿದ್ದಾರೆ.

ಸುನೀಲ್ ಶೆಟ್ಟಿ ಅವರ ಪುತ್ರಿ ನಟಿ ಅಥಿಯಾ ಶೆಟ್ಟಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಭಾರತ ತಂಡದ ಕ್ರಿಕೆಟ್ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಅವರನ್ನ ಪ್ರೀತಿಸುತ್ತಿರುವ ವಿಚಾರವನ್ನು ಅಧಿಕೃತವಾಗಿ ಸ್ಪಷ್ಟಪಡಿಸಿದ್ದರು. ಅದರಂತೆ ಮೊನ್ನೆ ವ್ಯಾಲೆಂಟೆನ್ಸ್ ಡೇ ದಿನದಂದು ಕ್ರಿಕೆಟಿಗ ಕೆ.ಎಲ್.ರಾಹುಲ್ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಟಿ ಅಥಿಯಾ ಶೆಟ್ಟಿ ಅವರ ಜೊತೆ ಇರುವ ಪೋಟೋವೊಂದನ್ನ ಶೇರ್ ಮಾಡಿ ವಿಶ್ ಮಾಡಿದ್ದರು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರಿಗೆ ಈಗಾಗಲೇ ತಮ್ಮ ಮಗಳು ಅಥಿಯಾ ಶೆಟ್ಟಿ ಕೆ.ಎಲ್.ರಾಹುಲ್ ಅವರನ್ನ ಪ್ರೀತಿಸುತ್ತಿರುವುದನ್ನ ತಿಳಿದಿದ್ದು, ಇವರಿಬ್ಬರ ಮದುವೆಗೆ ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರೆ.

ಹಾಗಾಗಿ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಈ ಇಬ್ಬರು ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ಅಥಿಯಾ ಶೆಟ್ಟಿ ಅವರು ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಹೀರೋ ಎಂಬ ಚಿತ್ರದ ಮೂಲಕ ಅಥಿಯಾ ಶೆಟ್ಟಿ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ತಕ್ಕ ಮಟ್ಟಿಗೆ ಬೇಡಿಕೆಯಲ್ಲಿರುವ ಅಥಿಯಾ ಶೆಟ್ಟಿ ಇದೀಗ ದುಬಾರಿ ಬೆಲೆಯ ಐಷಾರಾಮಿ ಕಾರ್ ಆಗಿರುವ ಆಡಿ ಕ್ಯೂ7 ಎಸ್ಯುವಿ ಕಾರ್ ಅನ್ನು ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಅಥಿಯಾ ಶೆಟ್ಟಿ ಖರೀದಿ ಮಾಡಿರುವ ಈ ಆಡಿ ಕ್ಯೂ ಸೆವೆನ್ ಎಸ್ಯೂವಿ 55ಟಿಎಫ್ಎಸ್ಐ ಕ್ಯೂ ಕಾರಿನ ಬೆಲೆಯು ಒಂದು ಕೋಟಿ ರೂಪಾಯಿಗಳು.

ಇನ್ನು ಈ ಕಾರಿನ ವೈಶಿಷ್ಟ್ಯತೆಗಳನ್ನ ತಿಳಿಯುವುದಾದರೆ ಟ್ವಿನ್ ಟರ್ಬೋಚಾರ್ಜ್ಡ್, ಪೆಟ್ರೋಲ್ ಇಂಜಿನ್ ಆಧಾರಿತವಾಗಿದ್ದು, 335 ಬಿಎಚ್ಪಿ ಪವರ್ ಮತ್ತು 500 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವಂತಹ ಸಾಮರ್ಥ್ಯವುಳ್ಳ ಇಂಜಿನ್ ಒಳಗೊಂಡಿದೆ. ಈ ಇಂಜಿನ್ 8ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವುದರ ಜೊತೆಗೆ 48 ವೋಲ್ಟ್ ಎಲೆಕ್ಟ್ರಿಕ್ ಮೋಟಾರ್, ಲಿಥಿಯಂ, ಐಯಾನ್ ಬ್ಯಾಟರಿ ಮತ್ತು ಪರ್ಯಾಯ ಸ್ಟಾರ್ಟರ್ ಸಿಸ್ಟಮ್ ಹೊಂದಿದೆ. ಒಟ್ಟಾರೆಯಾಗಿ ಹತ್ತು ಹಲವು ಅಡ್ವಾನ್ಸ್ಡ್ ಫೀಚರ್ ಹೊಂದಿರುವ ಈ ಆಡಿ ಕ್ಯೂ ಸೆವೆನ್ ಎಸ್ಯೂವಿ ಕಾರ್ ಖರೀದಿಸಿ ಇಪ್ಪತ್ತೊಂಬತ್ತು ವರ್ಷದ ನಟಿ ಅಥಿಯಾ ಶೆಟ್ಟಿ ಇದೀಗ ಬಾಲಿವುಡ್ ನಲ್ಲಿ ಸುದ್ದಿಯಲ್ಲಿದ್ದಾರೆ.

%d bloggers like this: