ಜಗತ್ತಿನಲ್ಲೆಡೆ ಈ ಕೋವಿಡ್ ಸೋಂಕು ತಡೆಯಲು ವಿಧವಿಧದ ಪ್ರಯತ್ನಗಳು ನಡೆಯುತ್ತಲೇ ಇವೆ. ಕೆಲವೊಂದು ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ದೊರೆತರೆ ಬಹುತೇಕ ಚಿಕಿತ್ಸೆಗಳು ಮನೆಯಲ್ಲಿ ಖುದ್ದು ನಾವೇ ಮಾಡುವಂತಹುಗಳಾಗಿವೆ. ಹೌದು ಜನ ಆಸ್ಪತ್ರೆಗೆ ಹೋಗಲು ಹೆದರಿ ಮನೆಯಲ್ಲಿಯೇ ಔಷಧೀಯ ಗುಣಗಳುಳ್ಳ ಆಹಾರಗಳನ್ನು ಬಳಸಿ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಉಪ್ಪು ನೀರಿನ ಬಳಕೆ ಕೂಡ ಒಂದು. ಸಾಮಾನ್ಯವಾಗಿ ಅಲರ್ಜಿ, ಗಂಟಲು ನೋವು ಎಂದು ನೀವು ಆಸ್ಪತ್ರೆಗಳಿಗೆ ಹೋದರೆ ವೈದ್ಯರು ಮುಂಜಾನೆ ಮತ್ತು ರಾತ್ರಿ ಸ್ವಲ್ಪ ಬಿಸಿ ನೀರಿಗೆ ಉಪ್ಪನ್ನು ಹಾಕಿ ಬಾಯಿ ಮುಕ್ಕಳಿಸಿ ಎಂದು ಸಲಹೆ ನೀಡುವುದನ್ನು ನೀವು ಕೇಳಿದ್ದಿರಿ.
ಆದರೆ ಇದೇ ಸಲಹೆ ಇಂದು ಕೊರೋನಾ ಹೆಮ್ಮಾರಿಗೂ ಕೂಡ ರಾಮಬಾಣ ಎಂದು ಅಧ್ಯಯನದಲ್ಲಿ ನಿರತರಾಗಿರುವಂತಹ ವೈದ್ಯರ ತಂಡ ಹೇಳಿದೆ. ಆಗತಾನೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ರೀತಿ ಮಾಡಿ ಬಾಯಿ ಮುಕ್ಕಳಿಸಿ ಗಂಟಲನ್ನು ಸ್ವಚ್ಛಗೊಳಿಸುವುದರಿಂದ ಮಹಾ ಹೆಮ್ಮಾರಿ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬಹುದೆಂದು ಬ್ರಿಟನ್ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನೋಡಿ ಎಷ್ಟು ಸರಳ. ಆಸ್ಪತ್ರೆಗೆ ಹೋಗಿ ನರಕಯಾತನೆ ಅನುಭವಿಸುವ ಬದಲು ಮನೆಯಲ್ಲಿಯೇ ನಾವು ಸೂಕ್ತ ರೀತಿಯಾದಂತಹ ಸರಳ ಪ್ರಯತ್ನಗಳನ್ನು ಮಾಡಿ ದೊಡ್ಡ ಗಂಡಾಂತರದಿಂದ ಪಾರಾಗಬಹುದು. ಈ ವಿಧಾನಗಳನ್ನು ನೀವು ಕೂಡ ಮನೆಯಲ್ಲಿ ಪಾಲಿಸಿ ಜೊತೆ ನಿಮ್ಮವರಿಗೂ ಮಾಡಲು ಹೇಳಿ.