ವಿಶ್ವದಲ್ಲಿನ ಎಲ್ಲಾ ಆಟಗಳಿಗೂ ಹೆಚ್ಚಿನ ಅಭಿಮಾನಿಗಳು ಇರುವುದು ಭಾರತದಲ್ಲಿಯೇ. ಅದರಲ್ಲೂ ಕ್ರಿಕೆಟ್ ಭಾರತೀಯರ ರಕ್ತದಲ್ಲಿ ಬೇರೂರಿಬಿಟ್ಟಿದೆ. ಅದನ್ನು ಒಂದು ಧರ್ಮ ಅನ್ನುವಷ್ಟರ ಮಟ್ಟಿಗೆ ಸಹ ಇಲ್ಲಿ ಪರಿಗಣಿಸಲಾಗುತ್ತದೆ. ಕ್ರಿಕೆಟನ್ನು ಬಹುತೇಕ ಜನ ಇಷ್ಟಪಟ್ಟರು ಕೆಲವೇ ಕೆಲವು ಮಂದಿ ಅಷ್ಟು ಜನ ಅದನ್ನು ಸೇರುವುದಿಲ್ಲ. ಆದರೆ ಐಪಿಎಲ್ ಪಂದ್ಯಾವಳಿಗಳು ಅಂದರೆ ಎಂತಹ ಕ್ರಿಕೆಟ್ ಇಷ್ಟವಿಲ್ಲದವರೂ ಇಷ್ಟಪಡುತ್ತಾರೆ. ಈ ಕೊರೋನಾ ಹೆಮ್ಮಾರಿಯ ಕಾರಣ ಜಗತ್ತಿನ ಎಲ್ಲ ಕಾರ್ಯಗಳು ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮಾರ್ಚಿನಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಾವಳಿಗಳು ಕೂಡ ರದ್ದಾಗಿದ್ದವು.
ಆದರೆ ಮಿಲಿಯನ್ ಡಾಲರ್ ಬೇಬಿ ಎಂದೇ ಜನಪ್ರಿಯವಾಗಿರುವ ಈ ಪಂದ್ಯಾವಳಿಗಳನ್ನು ಹೇಗಾದರೂ ಮಾಡಿ ನಡೆಸಲೇಬೇಕು ಎಂಬ ಚಿಂತನೆ ಬಿಸಿಸಿಐಗೆ ಕಾಡುತಲಿತ್ತು. ಏಕೆಂದರೆ ಅದರಿಂದ ಸಿಗುವ ಹಣ ಆ ಮಟ್ಟದ್ದಾಗಿರುತ್ತದೆ. ಹೌದು ಈಗ ಬಿಸಿಸಿಐ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೂಡ ಬಹಳ ಮುಂಜಾಗ್ರತೆ ವಹಿಸಿ ಅರಬ್ ದೇಶದಲ್ಲಿ ಸಪ್ಟಂಬರ್ 19 ರಿಂದ ನವೆಂಬರ್ 8ರವರೆಗೆ ಐಪಿಎಲ್ ಪಂದ್ಯಾವಳಿಗಳನ್ನು ನಿಗದಿಗೊಳಿಸಿದೆ. ಒಂದು ವೇಳೆ ಐಪಿಎಲ್ ಪಂದ್ಯಗಳು ನಡೆಯದೆ ಹೋಗಿದ್ದಾರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಬರೋಬ್ಬರಿ 4000 ಕೋಟಿ ರೂ ನಷ್ಟವಾಗುತ್ತಿತ್ತಂತೆ. ಹೌದು ಅಷ್ಟೊಂದು ಮಟ್ಟದ ಖ್ಯಾತಿಯನ್ನು ಐಪಿಎಲ್ ಪಡೆದುಕೊಂಡಿದೆ. ಅವರಿವರೆನ್ನದೆ ಪ್ರತಿಯೊಬ್ಬರೂ ಈ ಚುಟುಕು ಕ್ರಿಕೆಟ್ ಮನರಂಜನೆಯನ್ನು ಸವಿಯುವುದೇ ಈ ಪ್ರಖ್ಯಾತಿಗೆ ಕಾರಣ.