ಒಂದೂವರೆ ಕೋಟಿ ಬೆಲೆಯ ನೆಚ್ಚಿನ ಐಷಾರಾಮಿ ಕಾರು ಖರೀದಿಸಿದ ನಟಿ

ಬಾಲಿವುಡ್ ಬೇಡಿಕೆಯ ಬೆಡಗಿ ದುಬಾರಿ ಕಾರೊಂದನ್ನ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಹೌದು ಇತ್ತೀಚೆಗೆ ಹಿಂದಿ ಚಿತ್ರರಂಗದ ಅನೇಕ ಸ್ಟಾರ್ ನಟ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಐಷಾರಾಮಿ ಮನೆ, ದುಬಾರಿ ಕಾರ್ ಗಳನ್ನು ಖರೀದಿ ಮಾಡುವ ಮೂಲಕ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗುತ್ತಿದ್ದಾರೆ. ಅಂತೆಯೇ ಇದೀಗ ಬಾಲಿವುಡ್ ನ ಬಹು ಬೇಡಿಕೆಯ ನಟಿಯರ ಪೈಕಿ ಒಬ್ಬರಾಗಿರುವ ಕಿಯಾರಾ ಅಡ್ವಾಣಿ ಐಷಾರಾಮಿ ಕಾರ್ ಆದಂತಹ ಆಡಿ ಎ8ಎಲ್ ಮಾದರಿಯ ಕಾರನ್ನು ಖರೀದಿ ಮಾಡಿದ್ದಾರೆ. ಒಂದು ಜಮಾನದಲ್ಲಿ ಬಾಲಿವುಡ್ ನಟರು ಮಾತ್ರ ಐಷಾರಾಮಿ ಇಂಪೋರ್ಟೆಡ್ ಕಾರ್ ಖರೀದಿ ಮಾಡುವ ರೂಢಿಯಲ್ಲಿತ್ತು. ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ನಟರು ತಮ್ಮ ಐಷಾರಾಮಿ ಕಾರ್ ಗಳಲ್ಲಿ ಆಗಮಿಸುತ್ತಿದ್ದರು. ಇದೀಗ ನಟಿಯರು ಕೂಡ ಯಾವ ಸ್ಟಾರ್ ನಟರಿಗೂ ಕೂಡ ಕಡಿಮೆ ಏನಿಲ್ಲ.

ಇನ್ನು ನಟಿ ಕಿಯಾರಾ ಅಡ್ವಾಣಿ ಬಾಲಿವುಡ್ ನಲ್ಲಿ ಸಖತ್ ಬೇಡಿಕೆ ಇರುವ ನಟಿ. ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಕಿಯಾರಾ ಅಡ್ವಾಣಿ ಅವರು ನೂತನ ಆಡಿ ಎ8ಎಲ್ ಕಾರನ್ನು ಶೋರೂಂನಿಂದ ಪಡೆಯುತ್ತಿರುವ ಫೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಕಿಯಾರಾ ಅಡ್ವಾಣಿ ಅವರು ಖರೀದಿ ಮಾಡಿರುವ ಈ ನೂತನ ಆಡಿ ಎ8ಎಲ್ ಕಾರಿನ ಫೀಚರ್ ವಿಶೇಷತೆ ತಿಳಿಯುವುದಾದರೆ 37 ಎಂಎಂ ಉದ್ದ ಹೊಂದಿದ್ದು, 17 ಎಂಎಂ ಎತ್ತರವನ್ನು ಒಳಗೊಂಡಿದೆ. ಆಕರ್ಷಕ ಲುಕ್ ಹೊಂದಿರುವ ಈ ಕಾರು ಮುಂಭಾಗದಲ್ಲಿ ಗ್ರಿಲ್, ಸ್ಲಿಕ್ ಹೆಚ್.ಡಿ.ಮ್ಯಾಟ್ರಿಕ್ಸ್ ಎಲ್.ಇ.ಡಿ ಹೆಡ್ ಲ್ಯಾಂಪ್ ಗಳನ್ನು ಒಳಗೊಂಡಿದೆ. ಜೊತೆಗೆ ಒಳ ವಿನ್ಯಾಸದಲ್ಲಿ ವರ್ಚುವಲ್ ಕಾಕ್ ಪಿಟ್ ಸಲಕರಣಿಗಳಿಂದ ಕೂಡಿದೆ.

ಇದರ ಬೆಲೆ ಬರೋಬ್ಬರಿ ಒಂದು ಕೋಟಿ ಅರವತ್ತು ಲಕ್ಷ ರೂಪಾಯಿಗಳು. ನಟಿ ಕಿಯಾರಾ ಅಡ್ವಾಣಿ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಂತಹ ಸಿನಿಮಾ ಅಂದರೆ ಅದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರ ಧೋನಿ ಅನ್ ಟೋಲ್ಡ್ ಸ್ಟೋರಿ. ಜೊತೆಗೆ ಕಬೀರ್ ಸಿಂಗ್, ಗುಡ್ ನ್ಯೂಸ್ ಅಂತಹ ಸೂಪರ್ ಹಿಟ್ ಸಿನಿಮಾಗಳು ಕಿಯಾರಾ ಅಡ್ವಾಣಿ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿದೆ. ಕೇವಲ ಹಿಂದಿ ಮಾತ್ರ ಅಲ್ಲದೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಭರತ್ ಆನೇ ನೇನು ಮತ್ತು ವಿನಯ ವಿಧೇಯ ರಾಮ ಚಿತ್ರದಲ್ಲಿಯೂ ಕೂಡ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಅದಲ್ಲದೆ ಇತ್ತೀಚೆಗಷ್ಟೇ ತೆರೆಕಂಡ ಸಿದ್ದಾರ್ಥ್ ಮಲ್ಹೋತ್ರಾ ನಾಯಕತ್ವದ ಶೇರ್ ಷಾ ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಅವರ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆಯನ್ನು ಕೂಡ ಪಡೆದಿದ್ದರು.

%d bloggers like this: