ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಎಂದರೆ ಆಸ್ಕರ್. ಪ್ರತಿಬಾರಿಯಂತೆ ಈ ವರ್ಷವೂ ಆಸ್ಕರ್ ಅಖಾಡದಲ್ಲಿ ನೂರಾರು ಸಿನಿಮಾಗಳು ನಾಮನಿರ್ದೇಶನವಾಗಲು ಹಣಾಹಣಿ ನಡೆಸಿದವು. ಇತ್ತೀಚೆಗೆ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಅಂತರಾಷ್ಟ್ರೀಯ ಅವಾರ್ಡ್ ನಲ್ಲಿ ಜೈ ಭೀಮ್ ಹವಾ ಕ್ರಿಯೇಟ್ ಮಾಡಿತ್ತು. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಓಟಿಟಿ ಮೂಲಕವೇ ಬಿಡುಗಡೆಯಾದರು, ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಸಿನಿಮಾ ಅಂದರೆ ಅದು ಜೈಭೀಮ್. ತಮಿಳಿನ ನಿರ್ದೇಶಕ ಜ್ಞಾನವೇಲ್ ಅವರ ನಿರ್ದೇಶನದಲ್ಲಿ ಮೂಡಿಬಂದ ಸಾಮಾಜಿಕ ಸಂದೇಶ ಇರುವ ಈ ಜೈ ಭೀಮ್ ಸಿನಿಮಾ ಪೊಲೀಸ್ ವ್ಯವಸ್ಥೆಯಲ್ಲಿ ಬುಡಕಟ್ಟು ಸಮುದಾಯವೊಂದರ ಅಮಾಯಕರ ಮೇಲೆ ಯಾವ ರೀತಿ ದೌರ್ಜನ್ಯ ಎಸಗುತ್ತದೆ.

ಅದರಿಂದಾಗುವ ಪರಿಣಾಮ ಎಂತ್ತಾದ್ದು ಎಂಬುದನ್ನ ನಿರ್ದೇಶಕರು ಬಹಳ ಸೂಕ್ಷ್ಮವಾಗಿ ಅಚ್ಚು ಕಟ್ಟಾಗಿ ಕಟ್ಟಿಕೊಡುವ ಮೂಲಕ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಪಾರ ಪ್ರಶಂಸೆ ಪಡೆದುಕೊಂಡಿತ್ತು. ತಮಿಳುನಾಡಿನ ಜಸ್ಟೀಸ್ ಚಂದ್ರು ಅವರ ಜೀವನದಲ್ಲಿ ನಡೆದ ಈ ಸತ್ಯ ಘಟನೆ ಆಧಾರಿತ ಸಿನಿಮಾದಲ್ಲಿ ನಟ ಸೂರ್ಯ ಅವರು ಚಂದ್ರು ಎಂಬ ವಕೀಲ ಪಾತ್ರದಲ್ಲಿ ಅಮೋಘ ಅಭಿನಯ ಮಾಡಿದ್ದಾರೆ. ಜೊತೆಗೆ ಚಿತ್ರದ ನಾಯಕಿಯಾಗಿ ನಟಿಸಿರುವ ನಟಿ ಲಿಜೋಮೋಲ್ ಜೋಸ್ ಇಬ್ಬರಿಗೂ ಕೂಡ ನೋಯ್ಡಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2022 ನೇ ಸಾಲಿನ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.



ಅಷ್ಟೇ ಅಲ್ಲದೆ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಯನ್ನು ಕೂಡ ಜೈ ಭೀಮ್ ಸಿನಿಮಾ ತನ್ನ ಮುಡಿಗೇರಿಸಿಕೊಂಡಿದೆ. ಜೈ ಭೀಮ್ ಸಿನಿಮಾ ದೇಶಾದ್ಯಂತ ಈ ಪ್ರಮಾಣದ ಸದ್ದು ಮಾಡಲು ಪ್ರಮುಖ ಕಾರಣ ಅಂದರೆ ಈ ಸಿನಿಮಾದ ಕಥೆ. ಹೌದು ತಮಿಳುನಾಡಿನ ಇರುಲರ್ ಎಂಬ ಬುಡಕಟ್ಟಿನ ಸಮುದಾಯದ ಮೇಲೆ ಆಗುವ ಪೊಲೀಸ್ ದೌರ್ಜನ್ಯ ಮತ್ತು ಅವರಿಗಾಗುವ ಅನ್ಯಾಯವನ್ನ ಪ್ರತಿಭಟಿಸುವ ಪ್ರತಿನಿಧಿಯಾಗಿ ಚಂದ್ರು ಎಂಬ ವಕೀಲರು ಕಾನೂನಿನ ಹೋರಾಟ ಮಾಡಿದ ಕಥೆಯನ್ನ ಹೊಂದಿದೆ.



ಇದು ಸಂವಿಧಾನಕ್ಕೆ ಇರುವ ಮಹತ್ವದ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಅಪಾರ ಜಾಗೃತಿ ಮೂಡಿಸುವಂತಹ ಸಿನಿಮಾವಾಗಿ ಹೊರ ಹೊಮ್ಮಿತು. ಆದರೆ ಈ ಸಿನಿಮಾ ಈಗ ಆಸ್ಕರ್ ನ ಅಂತಿಮ ಸುತ್ತಿಗೆ ಆಯ್ಕೆಯಾಗಲು ವಿಫಲವಾಗಿದೆ. ಆಸ್ಕರ್ ಯೂಟ್ಯೂಬ್ ಲೈಬ್ರರಿ ಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಿನಿಮಾ ಎಂಬ ಖ್ಯಾತಿಗೆ ಜೈ ಭೀಮ್ ಚಿತ್ರ ಪಾತ್ರವಾಗಿದೆ. ಆದರೆ ಈ ಬಾರಿಯಾದರೂ ಭಾರತಕ್ಕೆ ಒಂದು ಆಸ್ಕರ್ ಪ್ರಶಸ್ತಿ ಸಿಗಲಿದೆ ಎಂಬ ಕನಸು ಕಾಣುತ್ತಿದ್ದ ವೀಕ್ಷಕರಿಗೆ ನಿರಾಸೆಯಾಗಿದೆ.