ಆಸ್ಕರ್ ರೇಸ್ ನಲ್ಲಿ‌ ಕನ್ನಡಿಗನ ಜೀವನ ಚರಿತ್ರೆ

ಕನ್ನಡದ ಕಂದ ಗೋಪಿನಾಥ್, ಜೀವನ ಶೈಲಿಯನ್ನು ಆಧಾರಗೊಂಡ ಚಿತ್ರಕಥೆ ಸೂರ ರಾಯ್ ಪೊಟ್ರು ಚಲನಚಿತ್ರ ಆಸ್ಕರ್ ಅವಾರ್ಡ್ ಕಾಂಟೆಸ್ಟ್ ಗೆ ಆಯ್ಕೆಯಾಗಿರುವ ಹಿನ್ನೆಲೆ. ಗೋಪಿನಾಥ್ ರವರು ಇಂಡಿಯನ್ ಎಂಟರ್ಪ್ರಿನರ್ ಅಂದರೆ ಭಾರತೀಯ ಉದ್ಯಮಿಯಾಗಿದ್ದಾರೆ. ಇವರು ಕ್ಯಾಪ್ಟನ್ ಗೊರೂರ್ ರಾಮಸ್ವಾಮಿ ಅಯ್ಯಂಗಾರ್ ಗೋಪಿನಾಥ್ ಎಂದೇ ಹೆಸರುವಾಸಿಯಾಗಿದ್ದಾರೆ. ಏರ್ ದಕ್ಕನ್ನ ಸ್ಥಾಪಕರಾಗಿದ್ದು, ಇಂಡಿಯನ್ ಆರ್ಮಿಯಲ್ಲಿ ರಿಟೈರ್ಡ್ ಕ್ಯಾಪ್ಟನ್, ಲೇಖಕ, ರಾಜಕಾರಣಿಯೂ ಸಹ ಆಗಿದ್ದಾರೆ. ಇವರು ಮೂಲತಃ ಕರ್ನಾಟಕದ ಹಾಸನ, ಗೋರೂರಿನವರಾಗಿದ್ದು ಅಯ್ಯಂಗಾರ್ ಗೋಪಿನಾಥ್ ಇವರು, ರಾಮಸ್ವಾಮಿ ಅಯ್ಯಂಗಾರ್ ಪುತ್ರನಾಗಿದ್ದು, ತಂದೆ ಶಾಲಾ ಶಿಕ್ಷಕ ಹಾಗು ಕನ್ನಡ ಕಾದಂಬರಿಕಾರ. ಆದರೆ ಗೋಪಿನಾಥ್ ಕನ್ನಡ ಮಾಧ್ಯಮ ಶಾಲೆಗೆ ಸ್ವಲ್ಪ ತಡವಾಗಿ ಮತ್ತು ನೇರವಾಗಿ ಅವರು 5ನೇ ತರಗತಿಗೆ ಸೇರಿದ್ದರು.

ಇವರು ಪ್ರವೇಶ ಪರೀಕ್ಷೆಯನ್ನು ತೆರವುಗೊಳಿಸಿ, ಎನ್‌ಡಿಎ ಪ್ರವೇಶ ಪರೀಕ್ಷೆಗಳನ್ನು ತೆರವುಗೊಳಿಸಲು ಗೋಪಿನಾಥ್‌ಗೆ ಶಾಲೆ ಸಹಾಯ ಮಾಡಿತು. ಬಿಜಾಪುರದ ಸೈನಿಕ್ ಶಾಲೆಗೆ ಸೇರಿದರು. ಗೋಪಿನಾಥ್ 3ವರ್ಷಗಳ ವಿಗೋರಸ್(ಹುರುಪಿನ) ತರಬೇತಿಯ ನಂತರ, ಗೋಪಿನಾಥ್ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಶಿಕ್ಷಣವನ್ನು ಪೂರೈಸಿದರು. ನಂತರ ಅವರು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದರು. ಶಾಲೆಯ ನಂತರ, ಅವರು ಭಾರತೀಯ ಸೈನ್ಯದಲ್ಲಿ ಆಯೋಗವನ್ನು ಗಳಿಸಿದರು, ಕ್ಯಾಪ್ಟನ್ ಸ್ಥಾನವನ್ನು ಗಳಿಸಿದರು. ಇವರು ಎಂಟು ವರ್ಷಗಳ ಕಾಲ ಸೈನ್ಯದಲ್ಲಿ ಕಳೆದರು ಮತ್ತು 1971ರ ಬಾಂಗ್ಲಾದೇಶ ಲಿಬರೇಶನ್ ಯುದ್ಧದಲ್ಲಿ ಹೋರಾಡಿದರು.

ಗೋಪಿನಾಥ್, ತಮ್ಮ 28ನೇ ವಯಸ್ಸಿನಲ್ಲಿ ಭಾರತೀಯ ಸೇನೆಯಿಂದ ಆರಂಭಿಕ ನಿವೃತ್ತಿಯನ್ನು ಪಡೆದರು ಅವರು ಪರಿಸರೀಯವಾಗಿ ಸುಸ್ಥಿರ ಸೆರಿಕಲ್ಚರ್ ಫಾರ್ಮ್ ಅನ್ನು ಸ್ಥಾಪಿಸಿದರು. ಅವರ ಇನ್ನೋವೇಟಿವ್ ಮೇಥಡ್ಸ್ ಅವರಿಗೆ 1996ರಲ್ಲಿ ರೋಲೆಕ್ಸ್ ಪ್ರಶಸ್ತಿ ವಿಜೇತ ಪ್ರಶಸ್ತಿಯನ್ನು ತಂದುಕೊಟ್ಟವು. ಅವರು ಮಲ್ನಾಡ್ ಮೊಬೈಕ್ಸ್ (ಎನ್ಫೀಲ್ಡ್ ಡೀಲರ್ಶಿಪ್) ಅನ್ನು ಪ್ರಾರಂಭಿಸಿದರು ಮತ್ತು ಹಾಸನದಲ್ಲಿ ಹೋಟೆಲ್ ಅನ್ನು ತೆರೆದರು. 1997ರಲ್ಲಿ ಅವರು ಡೆಕ್ಕನ್ ಏವಿಯೇಷನ್ ಅನ್ನು ಸಹ-ಸ್ಥಾಪಿಸಿದರು ಹಾಗು ಅದು ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಿತ್ತು. ಏರ್ ಡೆಕ್ಕನ್ 2007ರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡಿತು.

ಇವರ ಸಾಧನೆಗಳು, 2005ರಲ್ಲಿ, ರಾಜ್ಯೋತ್ಸವ ಪ್ರಶಸ್ತಿ (ಕರ್ನಾಟಕ), 2007ರಲ್ಲಿ, ಚೆವಲಿಯರ್ ಡೆಲಾ ಲೆಜಿಯನ್ ಡಿ ಹೊನ್ನೂರ್ (ಫ್ರಾನ್ಸ್), ವ್ಯಕ್ತಿತ್ವ ಪ್ರಶಸ್ತಿ ಪ್ರಶಸ್ತಿ (ಕೆ.ಜಿ. ಫೌಂಡೇಶನ್), ಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ (ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ). ಅಯ್ಯಂಗಾರ್ ಗೋಪಿನಾಥ್ ಇವರ ಜೀವನ ಕಥೆಯನ್ನು, ಕಥಾ ಚಿತ್ರವಾಗಿ, ತಮಿಳ್ ಚಿತ್ರನಟ ಸೂರ್ಯ, ತಮ್ಮ ಸಹಜ ನಟನೆಯಿಂದ ಜನರಿಗೆ ಮೆಚ್ಚಿಕೆಗೆ ಒಳಗಾದ ಕಾರಣ ಕಥಾ ನಿರ್ದೇಶನ ಒಟ್ಟಾರೆ ಚಿತ್ರಕ್ಕೆ ಬೆಂಬಲವಾಗಿ ನಿಂತ ಪ್ರತಿಯೊಬ್ಬ ವ್ಯಕ್ತಿಯ ಕಷ್ಟಗಳಿಗೆ ಇದೀಗ ಆಸ್ಕರ್ ರೇಸ್ನಲ್ಲಿ ಕಾಂಟೆಸ್ಟ್ ಮಾಡುತಿರುವುದು ನಮ್ಮ ಕರ್ನಾಟಕದ ಹುಡುಗನ ಹೆಮ್ಮೆಯಾಗಿದೆ.

%d bloggers like this: