ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೋರೋನಾ ಲಸಿಕೆಗೆ ಸಿಕ್ತು ಗ್ರೀನ್ ಸಿಗ್ನಲ್

ಕಳೆದ ಆರು ತಿಂಗಳಿನಿಂದ ತನ್ನ ರುದ್ರನರ್ತನವನ್ನು ತೋರುತ್ತಿರುವ ಕೊರೋನಾ ಹೆಮ್ಮಾರಿ ಇನ್ನೂ ಅದೇ ರೀತಿ ಮುಂದುವರೆಯುತ್ತಾ ಸಾಗುತ್ತಿದೆ. ವಿಶ್ವದಲ್ಲಿ ಈಗ ಬರೋಬ್ಬರಿ ಹತ್ತಿರ ಹತ್ತಿರ ಮೂರು ಕೋಟಿ ಕೇಸುಗಳು ದೃಢಪಟ್ಟಿದೆ. ಪ್ರತಿಯೊಬ್ಬರೂ ಕೋರೋನಾ ಲಸಿಕೆಗಾಗಿ ಹಾತೊರೆಯುತ್ತಿದ್ದಾರೆ.

ಜಗತ್ತಿನ ಎಲ್ಲ ದೇಶಗಳು ಅದರ ಲಸಿಕೆಯ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಇದೇ ಸಂದರ್ಭದಲ್ಲಿ ಇತ್ತೀಚಿಗೆ ದಿಢೀರನೆ ವಿಶ್ವದ ಶ್ರೇಷ್ಠ ವಿಶ್ವ ವಿದ್ಯಾಲಯಗಳಲ್ಲಿ ಒಂದಾದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತಿದ್ದ ಲಸಿಕೆ ಒಂದಕ್ಕೆ ಬ್ರೇಕ್ ಬಿದ್ದಿತ್ತು. ವಿಶ್ವದ ಹಲವಾರು ದೇಶಗಳ ಲಸಿಕೆಗಳಿಗಿಂತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ತುಂಬಾನೇ ಆಶಾಭಾವನೆ ಮೂಡಿಸಿತ್ತು. ಆದರೆ ದಿಡೀರನೆ ಅದರ ಪ್ರಯೋಗ ನಿಂತಿತ್ತು.

ಇದೀಗ ವಿಘ್ನಗಳೆಲ್ಲ ಕೊನೆಗೊಂಡು ಅದರ ಮೂರನೇ ಹಂತದ ಪ್ರಯೋಗ ಶುರುವಾಗಿದೆ. ಒಟ್ಟಾರೆ ಸ್ವಲ್ಪ ದಿನಗಳ ಮಟ್ಟಿಗೆ ಎಲ್ಲರಲ್ಲೂ ಮನೆಮಾಡಿದ ಆತಂಕ ಈಗ ದೂರವಾಗಿ ಮತ್ತೆ ಲಸಿಕೆ ಬರುವ ದಿನ ಕಾಯುವಂತಾಗಿದೆ. ಆದರೆ ಎಲ್ಲ ಕುತೂಹಲಗಳಿಗೆ ಉತ್ತರ ಸಿಗಲು ಈ ಮೂರನೇ ಹಂತದ ಪ್ರಯೋಗದ ಫಲಿತಾಂಶ ಬರಬೇಕಾಗಿದೆ ಅಷ್ಟೇ.

%d bloggers like this: