ಕೊರೋನ ವೈರಸ್ ರೂಪಾಂತರಿ ವೈರಸ್ ಓಮೈಕ್ರಾನ್ ದೇಶಾದ್ಯಂತ ಆತಂಕ ಸೃಷ್ಟಿ ಮಾಡಿದೆ. ಇದರ ನಡುವೆ ತಗ್ಗಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ 15 ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ದವಾಗಿದೆ. ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಿಗದಿತ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತದೆ. 2007 ರಲ್ಲಿ ಅಥವಾ ಅದಕ್ಕಿಂತ ಮೊದಲು ಜನಿಸಿರುವ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುವುದಂತೆ. ಉಳಿದ ಮಕ್ಕಳಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುವುದು. ಪ್ರತಿ ದಿನ ಸರಿ ಸುಮಾರು ಐದರಿಂದ ಆರು ಲಕ್ಷ ಮಕ್ಕಳಿಗೆ ಲಸಿಕೆ ಹಾಕಬೇಕು ಎಂಬ ಗುರಿಯನ್ನ ಹೊಂದಿದ್ದೇವೆ.

ಸದ್ಯದ ಮಟ್ಟಿಗೆ ಹತ್ತು ದಿನಗಳಿಗೆ ಆಗುವಷ್ಟು ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್ ತಿಳಿಸಿದ್ದಾರೆ. ಜನವರಿ3 ಈ ದಿನದಂದು ಪ್ರತಿ ಶಾಲೆಯ ಐವತ್ತು ವಿಧ್ಯಾರ್ಥಿಗಳಿಗೆ ಮಾತ್ರ ಲಸಿಕೆ ನೀಡಲಾಗುವುದು. ಪ್ರತಿ ಶಾಲೆಯ ಲಸಿಕೆ ಕೇಂದ್ರದ ಸಮೀಪ ಒಂದೊಂದು ಆಂಬುಲೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಕೋವಿಡ್ ಲಸಿಕೆ ಪಡೆಯಲು ವಿಧ್ಯಾರ್ಥಿಗಳು ನೇರವಾಗಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿರುತ್ತದೆ. ಅದರ ಜೊತೆಗೆ ರಾಜ್ಯ ಸರ್ಕಾರ ಆರಂಭಿಸಿರುವ ಕೋವಿನ್ ಆಪ್ ನಲ್ಲಿಯೂ ಕೂಡ ನೋಂದಾವಣೆ ಮಾಡಿಕೊಳ್ಳಬಹುದಾಗಿರುತ್ತದೆ. ಈ ಕೋವಿನ್ ಆಪ್ ನಲ್ಲಿ ಆಧಾರ್ ಅಥವಾ ಎಸ್ಎಸ್ಎಲ್ಸಿ ತರಗತಿ ಗುರುತಿನ ಚೀಟಿ ಇನ್ಯಾವುದೆ ರಾಷ್ಟೀಯ ಗುರುತಿನ ಚೀಟಿಯ ಮೂಲಕ ನೋಂದಾಯಿಸಿಕೊಳ್ಳಬಹುದಾಗಿರುತ್ತದೆ.



ಮೊದಲ ಡೋಸ್ ನೀಡಿದ ಇಪ್ಪತ್ತೆಂಟು ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಶಾಲಾ ಕಾಲೇಜುಗಳ ನಿಗದಿತ ಸ್ಥಳಗಳಲ್ಲಿ ಲಸಿಕೆ ಕೊರತೆ ಕಂಡು ಬಂದಲ್ಲಿ ಅಂತಹ ಮಕ್ಕಳ ಪೋಷಕರು ಹತ್ತಿರದಲ್ಲಿರುವ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬಹುದಾಗಿರುತ್ತದೆ. ಲಸಿಕೆ ಪಡೆದಂತಹ ಮಕ್ಕಳಿಗೆ ಮಾರನೇಯ ದಿನ ರಜೆ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಲಾಕ್ಡನ್ ಆತಂಕದ ವಾತಾವರಣ ಎದುರಾಗುತ್ತಿದೆ ಎನ್ನಬಹುದು.