ಪಾದಗಳು ಉರಿಯುತ್ತಿದ್ದರೆ ಯಾವ ಎಣ್ಣೆ ಸವರುವ ಅವಶ್ಯಕತೆ ಇಲ್ಲ, ಇಷ್ಟೇ ಮಾಡಿ ಸಾಕು

ಉಷ್ಣ ಪ್ರಕೃತಿಯವರಿಗೆ ದೇಹದಲ್ಲಿ ಅನೇಕ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಪ್ರತಿಯೊಬ್ಬರಿಗೂ ಕೂಡ ಕೆಲವೊಂದು ಸಲ ಹೀಟ್ ಆಗುವುದು ಸಾಮಾನ್ಯ. ಈತರ ಆದಾಗ ಪಾದಗಳು ತುಂಬಾನೇ ಉರಿಯುವ ಅನುಭವವಾಗುತ್ತದೆ. ಇದರಿಂದ ಹೊರಬರಲು ಅನೇಕರು ಎಣ್ಣೆ ಸವರುವುದು ಅಥವಾ ಕಾಲುಗಳನ್ನು ಉಪ್ಪಿನ ನೀರಿನಲ್ಲಿ ಇಡುವುದನ್ನು ಮಾಡುತ್ತಾರೆ. ಇವೆಲ್ಲ ತಾತ್ಕಾಲಿಕ ಪರಿಹಾರಗಳಷ್ಟೇ. ಇದರ ಬದಲು ಆಂತರಿಕವಾಗಿ ದೇಹವನ್ನು ತಂಪುಗೊಳಿಸಿದರೆ ಅದು ಇನ್ನೂ ಉತ್ತಮ. ಅದು ಹೇಗೆ ಎಂದಿರಾ ಬನ್ನಿ ನೋಡೋಣ. ಕೊತ್ತಂಬರಿ ಬೀಜದ ಪಾನಿಯವನ್ನು ಒಮ್ಮೆ ಸೇವಿಸಿದರೆ ಸಾಕು ಇಡೀ ದೇಹ ಉಷ್ಣಮುಕ್ತವಾಗಿ ತಂಪಾಗುತ್ತದೆ.

ನೀವು ಒಂದು ಪಾತ್ರೆಗೆ ಸ್ವಲ್ಪ ಕೊತ್ತಂಬರಿ ಕಾಳು ಮತ್ತು ಜೀರಿಗೆಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ರುಬ್ಬಿಕೊಂಡ ಮಿಶ್ರಣವನ್ನು ಗಾಳಿಯಾಡದ ಪಾತ್ರೆಯಲ್ಲಿ ಮುಚ್ಚಿಡಿ. ಒಂದು ಲೋಟ ನೀರಿಗೆ ತಯಾರಾದಂತಹ ಮಿಶ್ರಣವನ್ನು ಒಂದು ಚಮಚ ಹಾಕಿ. ಅದನ್ನು ಕುದಿಸಿ ಸೋಸಿ ಬೆಳಿಗ್ಗೆ ಒಂದು ಸಲ ಮತ್ತು ರಾತ್ರಿ ಒಂದು ಸಲ ಕುಡಿಯಬೇಕು. ಈ ರೀತಿ ಮಾಡಿದ್ರೆ ಸಾಕು ಪಾದಗಳು ಉರಿಯುವಿಕೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ನೀವು ಬೇಕಾದರೆ ಇದಕ್ಕೆ ಕಲ್ಲು ಸಕ್ಕರೆಯನ್ನು ಕೂಡ ಮಿಶ್ರಣ ಮಾಡಿ ಕುಡಿಯಬಹುದು. ಅಲ್ಲದೆ ಇದು ಪಾದದ ಉರಿಯನ್ನು ಕಮ್ಮಿ ಮಾಡುವುದಷ್ಟೇ ಅಲ್ಲ, ಉದರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.

%d bloggers like this: