ಕಾಲಕ್ಕೆ ತಕ್ಕಂತೆ ಮನುಷ್ಯನ ದೇಹ ವಿವಿಧ ರೀತಿಯ ಅನುಭವ ಪಡೆಯುವುದು ಸಹಜ. ಅದರಲ್ಲಿ ಚಳಿಯು ಒಂದು. ಮಳೆಗಾಲದಲ್ಲಿ ಚಳಿಗಾಲದಲ್ಲಿ ಅಥವಾ ತಂಪು ಪ್ರದೇಶಗಳಲ್ಲಿ ಚಳಿಯಾಗುವುದು ಸಹಜ ಪ್ರಕ್ರಿಯೆ. ಆದರೆ ಸುಖಾಸುಮ್ಮನೆ ಅಸಾಮಾನ್ಯವಾಗಿ ನಿಮ್ಮನ್ನು ಚಳಿ ಪದೇ ಪದೇ ಕಾಡುತ್ತಿದ್ದರೆ ಅದು ಕೆಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯೂ ಆಗಿರಬಹುದಾಗಿದೆ.
ಅದರಲ್ಲಿ ಮೊದಲನೆಯದು ಹೈಪೋಥೈರಾಯ್ಡಿಸಂ ಅಂದರೆ ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಥೈರಾಯಿಡ್ ಹಾರ್ಮೋನುಗಳ ಉತ್ಪತ್ತಿ ಆಗುತ್ತಿಲ್ಲ ಎಂಬ ಅರ್ಥ, ಇದರಿಂದ ನಿಮ್ಮ ದೇಹ ಅಗತ್ಯ ತಾಪಮಾನ ಕಾಯ್ದುಕೊಳ್ಳಲು ವಿಫಲವಾಗುವುದು ಹಾಗಾಗಿ ಚಳಿಯ ಅನುಭವವಾಗುತ್ತದೆ. ಎರಡನೆಯದು ರೆನಾಲ್ಡ್ಸ್ ಕಾಯಿಲೆ, ದೇಹದ ತಾಪಮಾನ ಕಡಿಮೆಯಾದ ಕೂಡಲೇ ರಕ್ತನಾಳಗಳು ಕುಗ್ಗಿ ರೆನಾಲ್ಡ್ಸ್ ಎಂಬ ಕಾಯಿಲೆ ಬರಲು ಕಾರಣವಾಗಬಹುದು.
ಈ ಕಾಯಿಲೆ ಎಷ್ಟು ನಿರ್ಲಕ್ಷವೂ ಅಷ್ಟೇ ಗಂಭೀರವೂ ಹೌದು. ಏಕೆಂದರೆ ರಕ್ತನಾಳಗಳು ಕುಗ್ಗುವದರಿಂದ ರಕ್ತಸಂಚಾರ ಕಡಿಮೆಯಾದರೆ ಕೆಲವು ಭಾಗಗಳು ಶಾಶ್ವತವಾಗಿ ವೈಕಲ್ಯವಾಗಬಹುದು ಮತ್ತು ಮೈ ನೀಲಿ ಬಣ್ಣಕ್ಕೆ ತಿರುಗಬಹುದು. ಮೂರನೆಯದು ರಕ್ತಹೀನತೆ, ಅಂದರೆ ದೇಹದಲ್ಲಿ ಆರ್ಬಿಸಿ ಕಣಗಳು ಕಡಿಮೆಯಾದರೆ ಅದನ್ನು ರಕ್ತಹೀನತೆ ಎಂದು ಕರೆಯುತ್ತೇವೆ.
ಆರ್ಬಿಸಿ ಕಣಗಳು ಆಮ್ಲಜನಕ ಸರಬರಾಜು ಮಾಡುತ್ತವೆ. ಇಂಥ ಆರ್ಬಿಸಿ ಕಣಗಳು ಸಂಖ್ಯೆ ಕಡಿಮೆಯಾದರೆ ದೇಹ ಸರಿಯಾಗಿ ಆಮ್ಲಜನಕವನ್ನು ಪಡೆಯದೆ ಚಳಿಯ ಅನುಭವ ಆಗುತ್ತದೆ. ಆದ್ದರಿಂದ ಚಳಿ ನಿಮ್ಮನ್ನು ಅತಿಯಾಗಿ ಭಾದಿಸಿದರೆ ದಯವಿಟ್ಟು ವೈದ್ಯರ ಸಲಹೆ ಪಡೆಯಿರಿ.