ಪದೇ ಪದೇ ಹಣಕಾಸಿನ ತೊಂದರೆ ಆಗುತ್ತಿದೆಯೇ, ಏಲಕ್ಕಿಯಿಂದ ಶುಕ್ರವಾರದಂದು ಹೀಗೆ ಮಾಡಿ

ಈ ಹಣಕಾಸಿನ ಸಮಸ್ಯೆಗಳು ಎನ್ನುವುದು ಎಂತಹವರನ್ನು ಬೆಂಬಿಡದೆ ಕಾಡುತ್ತದೆ, ಕೆಲವೊಮ್ಮೆ ಇತರರಿಂದ ಹಣ ಪಡೆದು ಅದನ್ನು ಹಿಂದಿರುಗಿಸಲಾಗದೆ ಸಂಕಷ್ಠಕ್ಕೆ ಸಿಲುಕುವುದು ಒಂದು ಕಡೆಯಾದರೆ ಇನ್ನೊಂದು ಕಡೆ ನೀವೇ ಸಾಲದ ರೂಪದಲ್ಲಿ ಹಣವನ್ನು ಬೇರೆಯವರಿಗೆ ಕೊಟ್ಟು ನಿಮ್ಮ ಹಣ ನಿಮಗೆ ಹಿಂದುರಿಗಿ ವಾಪಸ್ ಬರದೆ ನಿಮ್ಮನ್ನು ಆರ್ಥಿಕ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಇಂತಹ ಹಣಕಾಸಿನ ಸಮಸ್ಯೆಗಳಿಗೆ ಹಲವರು ಅವರದೇ ರೀತಿಯಲ್ಲಿ ಪರಿಹಾರ ಸೂಚಿಸುತ್ತಾರೆ ಆದರೆ ಏಲಕ್ಕಿಯ ಗಂಟು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಎಂದು ಹೇಳಬಹುದು. ಹೌದು ನಿಮಗೆ ಈ ಹಣಕಾಸು ಸಮಸ್ಯೆ ಸಂಕಷ್ಠ ಪರಿಹಾರ ವಾಗಬೇಕಾದರೆ ಏನು ಮಾಡಬೇಕು.

ಇಂತಹ ಸಮಸ್ಯೆಯ ನಿವಾರಣೆಗಾಗಿ ನೀವು ಅನುಸರಿಸಬೇಕಾದ ಕ್ರಮ ಹೀಗಿರುತ್ತದೆ. ಆರು ಏಲಕ್ಕಿ ಕಾಳುಗಳನ್ನು ಶ್ವೇತ ವಸ್ತ್ರದಲ್ಲಿ ಇಟ್ಟು ಗಂಟು ಹಾಕಿ ಇಡಬೇಕು. ಪುರುಷರಾದರೆ ನಿಮ್ಮ ಪರ್ಸ್ ಗಳಲ್ಲಿ ಈ ಏಲಕ್ಕಿ ಗಂಟನ್ನು ಚಿಕ್ಕದಾಗಿಸಿ ಇರಿಸಿಕೊಳ್ಳಬಹುದು, ಮಹಿಳೆರಾದರೆ ನಿಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಇಡಬಹುದಾಗಿದೆ. ಪ್ರತಿ ಶಕ್ರವಾರ ಈ ಆರು ಏಲಕ್ಕಿ ಗಂಟನ್ನು ಬದಲಾಯಿಸ ಬೇಕಾಗಿರುತ್ತದೆ. ಹೌದು ಒಮ್ಮೆ ನೀವು ಏಲಕ್ಕಿ ಗಂಟನ್ನು ಒಂದು ಶುಕ್ರವಾರ ಪರ್ಸ್ ನಲ್ಲಿ ಇಡುವುದನ್ನು ಆರಂಭಿಸಿದ ಮೇಲೆ ಮುಂದಿನ ಶುಕ್ರವಾರ ಈ ಹಳೆ ಏಲಕ್ಕಿ ಗಂಟನ್ನು ನಿರ್ಜನ ಪ್ರದೇಶದಲ್ಲಿರುವ ಆಲದ ಮರ ಅಥವಾ ಬನ್ನಿ ಮರದ ಬುಡಕ್ಕಿ ಇಟ್ಟು ನಮಸ್ಕರಿಸಿ ಬರಬೇಕು.

ಇದೇ ರೀತಿ ನಾಲ್ಕು ಶುಕ್ರವಾರಗಳ ಕಾಲ ಈ ಏಲಕ್ಕಿ ಬದಲಾವಣೆ ಮಾಡುತ್ತಾ ನಾಲ್ಕು ಶುಕ್ರವಾರ ಕಳೆದ ನಂತರ ಈ ಆರು ಏಲಕ್ಕಿ ಗಂಟನ್ನು ಶಾಶ್ವತವಾಗಿ ನಿಮ್ಮ ಪರ್ಸ್ ನಲ್ಲಿ ಇಟ್ಟು ಕೊಳ್ಳಬೇಕು, ಇದನ್ನು ಆದಷ್ಟು ಬೆಳಿಗ್ಗೆ ಯ ಸಮಯದಲ್ಲಿ ಏಲಕ್ಕಿಯನ್ನು ಬನ್ನಿಮರಕ್ಕೆ ಇಟ್ಟು ಪೂಜಿಸುವುದು ಸೂಕ್ತ ಸಮಯವಾಗಿರುತ್ತದೆ. ಇದರಿಂದಾಗಿ ನಿಮ್ಮ ಹಣಕಾಸು ವ್ಯವಹಾರಗಳನ್ನು ಯಾವುದೇ ತೊಂದರೆ ತಾಪತ್ರಯಗಳಿಲ್ಲದೆ ನಿಶ್ಚಿಂತೆಯಿಂದ ಮುಂದುವರಿಸಬಹುದಾಗಿದೆ ಎಂದು ಹಿರಿಯ ಜ್ಯೋತಿಷ್ಯಶಾಸ್ತ್ರಜ್ಞರು ಸಲಹೆ ನೀಡಿ ಮಾರ್ಗದರ್ಶನ ನೀಡುತ್ತಾರೆ.

%d bloggers like this: