ಪದ್ಮಭೂಷಣ ಪ್ರಶಸ್ತಿ ಪಡೆದ ಬೆನ್ನಲ್ಲೇ ಸಂಕಷ್ಟಕ್ಕೆ ಸಿಕ್ಕ ಗೂಗಲ್ನ ಸುಂದರ್ ಪಿಚೈ

ಭಾರತದ ಮೂಲದ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ನಮ್ಮ ಭಾರತದ ಹೆಮ್ಮೆ. ತಮಿಳುನಾಡಿನ ಮೂಲದವರಾದ ಸುಂದರ್ ಪಿಚೈ ಪ್ರತಿಷ್ಟಿತ ಗೂಗಲ್ ಕಂಪನಿಯ ಸಿಇಒ. ಪ್ರತಿ ವರ್ಷ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಾರತೀಯರಿಗೆ ಅಥವಾ ಭಾರತೀಯ ಮೂಲದವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದೇ ರೀತಿ ಬುಧವಾರ ನಡೆದ 73 ನೇ ಗಣರಾಜ್ಯೋತ್ಸವದಲ್ಲಿ ಸುಮಾರು 128 ಸಾಧಕರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಯಿತು. ತಂತ್ರಜ್ಞಾನ ವಲಯದಲ್ಲಿ ಭಾರತೀಯ ಮೂಲದ ಗೂಗಲ್ ಸಿಇಒ ಆಗಿರುವ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಲಾಯಿತು.

ಆದರೆ ಅದೇ ಪದ್ಮಭೂಷಣ ಪುರಸ್ಕೃತ ಸುಂದರ್ ಪಿಚೈ ಅವರ ಮೇಲೆ ಭಾರತದ ನಿರ್ಮಾಪಕರೊಬ್ಬರು ದೂರು ದಾಖಲಿಸಿದ್ದಾರೆ. ಹೌದು ಬಾಲಿವುಡ್ ನಿರ್ಮಾಪಕ ಸುನಿಲ್ ದರ್ಶನ್ ಅವರು ತಮ್ಮ ಚಿತ್ರವೊಂದರ ಕಾಪಿ ರೈಟ್ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗೂಗಲ್ ಸಂಸ್ಥೆಯ ಐದು ಮಂದಿಯ ವಿರುದ್ಧ ಮತ್ತು ಸುಂದರ್ ಪಿಚೈ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. 2017 ರಲ್ಲಿ ಸುನಿಲ್ ಅವರು ನಿರ್ಮಿಸಿದ ಚಿತ್ರ ಏಕ್ ಹಸೀನಾ ಥಿ ಏಕ್ ದಿವಾನಾ ಥಾ ಚಿತ್ರದ ಕಾಪಿ ರೈಟ್ ಅನ್ನು ಯಾರಿಗೂ ಮಾರಾಟ ಮಾಡದೇ ಇದ್ದರೂ ಅದನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಅನುಮತಿ ಇಲ್ಲದೆ ಸಿನಿಮಾ ಪ್ರಸಾರ ಮಾಡಿರುವ ಮತ್ತು ಕಾಪಿ ರೈಟ್ ಉಲ್ಲಂಘನೆಯ ಪ್ರಕರಣದಲ್ಲಿ ಗೂಗಲ್ ಸಂಸ್ಥೆಯ ಸುಂದರ್ ಪಿಚೈ ಮತ್ತು ಐವರ ಮೇಲೆ ದೂರನ್ನ ದಾಖಲಿಸಿದ್ದಾರೆ.

ಈ ವಿಷಯವಾಗಿ ಮಾತನಾಡಿರುವ ಏಕ್ ಹಸೀನಾ ಥಿ ಏಕ್ ದಿವಾನಾ ಥಾ ಚಿತ್ರದ ನಿರ್ಮಾಪಕ ಸುನಿಲ್ ದರ್ಶನ್, ನನ್ನ ಚಿತ್ರದ ಕಾಪಿ ರೈಟ್ ನಾನು ಮಾರಾಟ ಮಾಡದಿದ್ದರೂ ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಕುರಿತು ನಾನು ಯು ಟ್ಯೂಬ್ ಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ. ನಾನು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿಲ್ಲ. ದಾಖಲೆಗಳ ಸಮೇತ ಸತ್ಯಗಳನ್ನು ನಾನು ಹೊರಹಾಕಲು ಪ್ರಯತ್ನಿಸುತ್ತಿದ್ದೇನೆ. ಇದರ ಹೊರತಾಗಿ ಬೇರೆ ಯಾವ್ ಉದ್ದೇಶವೂ ಇಲ್ಲ. ಒಂದು ಚಲನಚಿತ್ರದ ನಿರ್ಮಾಪಕ ಮತ್ತು ಹಕ್ಕುಸ್ವಾಮ್ಯ ಮಾಲೀಕರಾಗಿ, ನಾನು ಕೆಲವು ಹಕ್ಕುಗಳನ್ನು ಹೊಂದಿದ್ದೇನೆ. ಅವನ್ನು ಉಲ್ಲಂಘಿಸಿದಾಗ ನಾನೇನು ಮಾಡಬೇಕು ಎಂದು ಅಸಹಾಯಕತೆ ತೋರಿದ್ದಾರೆ.

%d bloggers like this: