ಪೈಪೋಟಿಗಳ ನಡುವೆಯೂ ಮೊದಲ ದಿನ‌ ಭರ್ಜರಿ ಗಳಿಕೆ ಮಾಡಿದ ಬಡವ ರಾಸ್ಕಲ್ ಚಿತ್ರ

ಬಾಕ್ಸ್ ಆಫೀಸ್ ನಲ್ಲಿ ‌ಮೊದಲ ದಿನ ಬಡವ ರಾಸ್ಕಲ್ ಸಿನಿಮಾ ಬಾಚಿದ್ದೆಷ್ಟು, ಸ್ಯಾಂಡಲ್ ವುಡ್ ಡಾಲಿ ನಟ ರಾಕ್ಷಸ ಖ್ಯಾತಿಯ ನಟ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ರಾಜ್ಯದ್ಯಂತ ಇನ್ನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿದೆ. ಡಿಸೆಂಬರ್ 24 ಶುಕ್ರವಾರದಂದು ಬಿಡುಗಡೆಯಾದ ಬಡವ ರಾಸ್ಕಲ್ ಸಿನಿಮಾ ರಿಲೀಸಿಗೂ ಮುನ್ನ ಟೀಸರ್, ಟ್ರೇಲರ್ ಮತ್ತು ಹಾಡುಗಳಿಂದ ಸಾಕಷ್ಟು ಸದ್ದು ಮಾಡಿತ್ತು. ನಟ ಧನಂಜಯ್ ಅವರ ಆಪ್ತ ಗೆಳೆಯರಾದ ಗುರು ಶಂಕರ್ ಅವರೇ ಈ ಬಡವ ರಾಸ್ಕಲ್ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ವಾಸುಕಿ ವೈಭವ್ ಅವರ ರಾಗ ಸಂಯೋಜನೆ ಬಡವ ರಾಸ್ಕಲ್ ಸಿನಿಮಾಗೆ ಮತ್ತಷ್ಟು ಬೂಸ್ಟ್ ನೀಡಿತ್ತು.

ಇದೇ ಮೊದಲ ಬಾರಿಗೆ ನಟ ಧನಂಜಯ್ ಅವರು ನಿರ್ಮಾಣ ಕೂಡ ಮಾಡಿ ತಾವೇ ಸ್ವತಃ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇಡೀ ಬಡವ ರಾಸ್ಕಲ್ ಸಿನಿಮಾ ತಂಡ ಸಾಮಾನ್ಯ ಜನರ ಬಳಿಯೇ ನೇರವಾಗಿ ಹೋಗಿ ತಮ್ಮ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ತಿಳಿಸಿ ಸಿನಿಮಾ ನೋಡಿ ಎಂದು ಪ್ರಚಾರ ಮಾಡುತ್ತಿದ್ದರು. ಅದರಲ್ಲಿಯೂ ನಟ ಧನಂಜಯ್ ಅವರು ಸ್ವತಃ ತಾವೇ ಆಟೋ ಓಡಿಸಿಕೊಂಡು ವಿಭಿನ್ನವಾಗಿ ಸಿನಿಮಾ ಪ್ರಮೋಶನ್ ಮಾಡುವ ಮೂಲಕ ಬಡವ ರಾಸ್ಕಲ್ ಚಿತ್ರದ ಬಗ್ಗೆ ಎಲ್ಲೆಡೆ ಭರ್ಜರಿ ಪ್ರಚಾರ ಮಾಡಿದರು. ಮಧ್ಯಮ ವರ್ಗದ ಯುವಕನೋರ್ವನ ಬದುಕು- ಬವಣೆಯ ಕಥೆಯನ್ನು ಎಣೆದಿರುವ ನಿರ್ದೇಶಕ ಗುರು ಶಂಕರ್ ಅವರು ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

ಬಡವ ರಾಸ್ಕಲ್ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಡಾಲಿ ಧನಂಜಯ್ ಮತ್ತು ನಟಿ ಅಮೃತಾ ಅಯ್ಯಂಗರ್ ಮುಖ್ಯ ಭೂಮಿಕೆಯ ಬಡವ ರಾಸ್ಕಲ್ ಸಿನಿಮಾ ಮೊದಲ ದಿನದಲ್ಲೇ ಬರೋಬ್ಬರಿ ಎರಡು ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದೆ. ಇನ್ನು ಈ ಚಿತ್ರದಲ್ಲಿ ನಟ ರಂಗಾಯಣ ರಘು, ತಾರಾ, ನಾಗಭೂಷಣ್ , ಪೂರ್ಣಚಂದ್ರ, ಸ್ಪರ್ಶ ರೇಖಾ, ಜೊತೆಗೆ ವಿಶೇಷ ಪಾತ್ರದಲ್ಲಿ ಮಠ ಚಿತ್ರದ ನಿರ್ದೇಶಕ ಗುರು ಪ್ರಸಾದ್ ಕೂಡ ನಟಿಸಿದ್ದಾರೆ. ಒಟ್ಟಾರೆಯಾಗಿ ವಿಭಿನ್ನ ಪ್ರಮೋಶನ್ ಮೂಲಕ ಗಮನ ಸೆಳೆದಿದ್ದ ಬಡವ ರಾಸ್ಕಲ್ ಚಿತ್ರ ಉತ್ತಮ ಮೆಚ್ಚುಗೆ ಪಡೆದಿದ್ದು ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದೆ.

%d bloggers like this: