ಪಾಕಿಸ್ತಾನದ ಆಟಗಾರನಿಗೆ ವಿಶೇಷ ಉಡುಗೊರೆ ಕಳುಹಿಸಿದ ಧೋನಿ ಅವರು

ಟೀಮ್ ಇಂಡಿಯಾದ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಪಾಕಿಸ್ತಾನ ತಂಡದ ಖ್ಯಾತ ವೇಗದ ಬೌಲರ್ ಒಬ್ಬರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರಿಂದ ಸರ್ಪ್ರೈಸ್ ಗಿಫ್ಟ್ ಪಡೆದಂತಹ ಪಾಕಿಸ್ತಾನದ ಈ ಕ್ರಿಕೆಟಿಗ ಸಖತ್ ಖುಷಿಯಲ್ಲಿದ್ದಾರೆ. ಹೌದು ಕ್ರಿಕೆಟ್ ಜಗತ್ತಿನಲ್ಲಿ ಅಜಾತ ಶತ್ರುದಂತಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಆಟದ ವೈಖರಿಯ ಮೂಲಕ ಎಷ್ಟು ಜನಪ್ರಿಯತೆ ಖ್ಯಾತಿ ಪಡೆದಿದ್ದಾರೋ ಅಷ್ಟೇ ತಮ್ಮ ಸೌಮ್ಯತೆಯ ವ್ಯಕ್ತಿತ್ವದ ಮೂಲಕ ಕೋಟ್ಯಾಂತರ ಹೃದಯಗಳನ್ನ ಗೆದ್ದಿದ್ದಾರೆ. ಜಾತಿ ಧರ್ಮ, ಭಾಷೆ ಅಂತ ಪರಸ್ಪರ ಒಬ್ಬರನ್ನ ಕಂಡರೆ ಒಬ್ಬರು ದೂಷಿಸುವ ಈ ಸಂಧರ್ಭದಲ್ಲಿ ಸೌಹಾರ್ದತೆ ಸಹಭಾಳ್ವೆಯ ಸಂದೇಶ ಸಾರುವಂತಹ ಕೆಲಸ ಮಾಡಿದ್ದಾರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.

ಹೌದು ಪಾಕಿಸ್ತಾನದ ಖ್ಯಾತ ಬೌಲರ್ ಆದಂತಹ ಹ್ಯಾರಿಸ್ ರೌಫ್ ಅವರಿಗೆ ಧೋನಿ ಅವರು ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿವೊಂದನ್ನ ನೀಡಿದ್ದಾರೆ. ಧೋನಿ ಅವರಿಂದ 07 ಸಂಖ್ಯೆಯ ಜೆರ್ಸಿ ಪಡೆದಿರುವ ಈ ವಿಚಾರವನ್ನು ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಗಿಫ್ಟ್ ಆಗಿ ನೀಡಿರುವ ಜೆರ್ಸಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಕೂಲ್ ಕ್ಯಾಪ್ಟನ್ ಅವರು ತಮ್ಮ ಆಟದ ವೈಖರಿ, ವ್ಯಕ್ತಿತ್ವ ನಡವಳಿಕೆಯಿಂದ ಕೋಟ್ಯಾಂತರ ಹೃದಯ ಗೆದ್ದಿದ್ದಾರೆ.

ಇಂತಹ ವ್ಯಕ್ತಿ ನನಗೆ ವಿಶೇಷ ಉಡುಗೊರೆಯಾಗಿ ನೀಡಿರುವುದು ನನಗೆ ಅತ್ಯಂತ ಸಂತೋಷದಾಯಕವಾಗಿದೆ ಎಂದು ಹ್ಯಾರಿಸ್ ರೌಫ್ ಅವರು ಬರೆದುಕೊಂಡಿದ್ದಾರೆ. ಸದ್ಯಕ್ಕೆ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಾ ಭಾರಿ ವೈರಲ್ ಆಗಿದೆ. ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಆಗಿರುವ ಹ್ಯಾರಿಸ್ ರೌಫ್ ಅವರು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ನಲ್ಲಿ ಹ್ಯಾರಿಸ್ ರೌಫ್ ಅವರು ಎರಡು ಪಂದ್ಯಗಳನ್ನ ಆಡಿದ್ದಾರೆ. ಈ ಬಿಬಿಎಲ್ ಕ್ರಿಕೆಟಿನ ಈ ಆವೃತ್ತಿಯಲ್ಲಿ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಒಟ್ಟಾರೆಯಾಗಿ ಏಕದಿನ ಮತ್ತು ಟಿಟ್ವೆಂಟಿ ಕ್ರಿಕೆಟ್ ಗಳಲ್ಲಿ ಪಾಕಿಸ್ತಾನ ತಂಡದ ಪರ ಆಟವಾಡಿ ತಮ್ಮ ವೇಗದ ಬೌಲಿಂಗ್ ಮೂಲಕ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ ಹ್ಯಾರಿಸ್ ರೌಫ್.

%d bloggers like this: