ದಶಕಗಳ ಹಿಂದೆ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಅವರು ತೆಲುಗಲ್ಲಿ ಮಿಂಚಿದ್ದರು, ಹಾಗೆ ಕಿಚ್ಚ ಸುದೀಪ್ ಅವರೂ ಕೂಡಾ ಪರಭಾಷೆಯಲ್ಲಿ ನಟನೆ ಮಾಡಿ ಮೆರೆದಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ನಟ ಯಶ್ ಅವರು ನಮ್ಮ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದರು. ಯಶ್ ಅವರ ಕೆಜಿಎಫ್ ಚಿತ್ರ ಇಡೀ ಭಾರತ ಚಿತ್ರರಂಗವೇ ಸ್ಯಾಂಡಲ್ವುಡ್ ಕಡೆ ತಿರುಗುವಂತೆ ಮಾಡಿತು ಹಾಗು ಯಶ್ ಅವರು ಈಗ ಪ್ಯಾನ್ ಇಂಡಿಯಾ ನಟ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಶ್ ಮುಖ ಈಗ ಪರಿಚಿತವಾಗಿದೆ. ಈಗ ಇನ್ನೊಂದು ಖುಷಿಯ ವಿಷಯವೆಂದರೆ ಈಗ ಮತ್ತೊಬ್ಬ ಕನ್ನಡ ನಟ ಪರಭಾಷೆಯಲ್ಲಿ ಹಾವಳಿ ಮಾಡಲು ರೆಡಿ ಆಗಿದ್ದಾರೆ ಅವರೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಪುನೀತ್ ಅವರ ಮುಂದಿನ ಬಹು ನಿರಿಕ್ಷಿತ ಚಿತ್ರ ‘ಯುವರತ್ನ’ ಅದ್ದೂರಿಯಾಗಿ ರೆಡಿ ಆಗುತ್ತಿದೆ, ಕಥೆಯಿಂದ ಹಿಡಿದು ಮೇಕಿಂಗ್ ತನಕ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ ಎಂದು ಬಹಳ ನಿರೀಕ್ಷೆ ಮೂಡಿಸಿದೆ.

ಯುವರತ್ನ ಚಿತ್ರವನ್ನು ರಾಜಕುಮಾರ ಹಾಗು ರಾಮಚಾರಿ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಪುನೀತ್ ಅವರ ಜೊತೆ ಎರಡನೇ ಬ್ಲಾಕ್ ಬ್ಲಸ್ಟರ್ ಚಿತ್ರಕ್ಕೆ ಸಿದ್ದರಾಗಿದ್ದಾರೆ. ಈ ಚಿತ್ರ ಕನ್ನಡ ಅಷ್ಟೇ ಅಲ್ಲ ತೆಲುಗಲ್ಲಿಯು ಸಹ ಬಿಡುಗಡೆ ಆಗುತ್ತಿದೆ. ಹತ್ತು ವರ್ಷಗಳ ಹಿಂದೆ ಪುನೀತ್ ಅವರ ಜಾಕಿ ಚಿತ್ರವೂ ಸಹ ತೆಲುಗಿನಲ್ಲಿ ಡಬ್ ಆಗಿ ಬಿಡುಗಡೆ ಆಗಿತ್ತು ಹಾಗು ಯಶಸ್ಸನ್ನು ಸಹ ಗಳಿಸಿತ್ತು. ಈಗ ಪುನೀತ್ ಅವರು ಮತ್ತೊಮ್ಮೆ ಅದ್ದೂರಿಯಾಗಿ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ. ಎರಡು ದಿನಗಳ ಹಿಂದೆ ಯುವರತ್ನದ ಸುದ್ದಿಯು ಟ್ವಿಟ್ಟರ್ ಅಲ್ಲಿ ಸುದ್ದಿಯಾಗಿತ್ತು ಕಾರಣ ಅಂದು ಯುವರತ್ನದ ತೆಲುಗು ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು.



ಅದೇ ದಿನ ಏಕ ಕಾಲಕ್ಕೆ ಯುವರತ್ನ ಚಿತ್ರದ ಮೊದಲ ಹಾಡು ತೆಲುಗು ಹಾಗು ಕನ್ನಡ ಅಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿತ್ತು, ವಾರದ ಹಿಂದೆಯೇ ಯುವರತ್ನ ಮೊದಲ ಹಾಡಿನ ಸಣ್ಣ ತುಣುಕು ಯೌಟ್ಯೂಬ್ ಅಲ್ಲಿ ಬಿಡುಗಡೆ ಆದಾಗ ಬಹಳಷ್ಟು ತೆಲುಗು ಅಭಿಮಾನಿಗಳು ಯುವರತ್ನ ಚಿತ್ರಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಕಾಮೆಂಟ್ ಹಾಕಿದ್ದಾರೆ, ಇದರ ಅರ್ಥ ಪುನೀತ್ ಅವರು ತೆಲುಗು ನಾಡಲ್ಲಿ ಮೆರೆಯಲು ಸಿದ್ದ. ಇಂದು ಯೌಟ್ಯೂಬ್ ಅಲ್ಲಿ ಯುವರತ್ನ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದ್ದೆ ತಡ ಹಾಡು ಅದ್ಭುತವಾಗಿ ಮೂಡಿ ಬಂದಿದ್ದು ಹಾಡಿಗೆ ಎಲ್ಲೆಡೆ ಉತ್ತಮವಾಗಿ ಪ್ರತಿಕ್ರಿಯೆ ದೊರಕುತ್ತಿದೆ, ಅಂತೂ ನಿಧಾನವಾಗಿ ಕನ್ನಡ ನಟರು ದಕ್ಷಿಣ ಭಾರತದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ವಿಷಯ.