ಪರದೆ ಮೇಲೆ ಅಷ್ಟೇ ಅಲ್ಲ ನಿಜ ಜೀವನದಲ್ಲಿಯೂ ಕೂಡಾ ತಾನು ಹೀರೋನೇ ಎಂದು ಮತ್ತೆ ತೋರಿಸಿಕೊಟ್ಟ ರಕ್ಷಿತ್ ಶೆಟ್ಟಿ

ಮುದ್ದು ನಗೆಯ ಸಿಂಪಲ್ ಸ್ಟಾರ್ ಕನ್ನಡ ಸಿನಿ ರಂಗದ ಫ್ಯೂಚರ್ ಎಂದೇ ಕರೆಸಿಕೊಳ್ಳುವ ರಕ್ಷಿತ್ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ, ಕನ್ನಡಕ್ಕೆ ತಮ್ಮ ವಿಭಿನ್ನ ಚಿತ್ರಗಳ ಮೂಲಕ ಹೊಸ ಆಯಾಮ ಕೊಟ್ಟ ನಟ ಮತ್ತು ನಿರ್ದೇಶಕ ನಮ್ಮ ಹೆಮ್ಮಯ ರಕ್ಷಿತ್ ಶೆಟ್ಟಿ. ಯಾರ ಸಹಾಯ ಹಸ್ತವು ಇಲ್ಲದೆ ಸಿನಿರಂಗದಲ್ಲಿ ಯಾವ ಗಾಡ್ ಫಾದರ್ ಸಹ ಇಲ್ಲದೇ ಇಡೀ ಭಾರತ ಚಿತ್ರೋದ್ಯಮ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ಇದೆ ರಕ್ಷಿತ್ ಶೆಟ್ಟಿ ಅವರು. ನಮ್ಮ ಏರಿಯಾದಲ್ಲಿ ಒಂದಿನ ಎಂಬ ಚಿತ್ರದ ಮೂಲಕ ಶುರುವಾದ ರಕ್ಷಿತ್ ಅವರ ಪಯಣ 2019ರೆಲ್ಲಿ ಬಿಡುಗಡೆಯಾದ ಅವನೇ ಶ್ರೀಮನ್ನಾರಾಯಣ ಎಂಬ ಬ್ಲಾಕ್ ಬಸ್ಟರ್ ಚಿತ್ರದ ವರೆಗಿನ ಅವರ ಪಯಣ ನಿಜಕ್ಕು ಅದ್ಭುತ ಎನ್ನಬಹುದು.

ರಕ್ಷಿತ್ ಒಬ್ಬ ಪಕ್ಕ ಶ್ರದ್ಧಾವಂತ ಆಲ್ ರೌಂಡರ್, ನಿಜ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಕಥೆಯ ಬರಹಗಾರನಾಗಿ ಡೈಲಾಗ್ ಬರಹಗಾರನಾಗಿ ಅಬ್ಬಾ ಅವರ ಕೆಲಸಗಳು ಒಂದ ಎರಡ. ಇದನ್ನು ಗಮನಿಸಿಯೇ ಅನೇಕರು ರಕ್ಷಿತ್ ಅವರನ್ನ ಕನ್ನಡದ ಖ್ಯಾತ ದಂತಕಥೆ ಶಂಕರ್ ನಾಗ್ ಅವರಿಗೆ ಇವರನ್ನು ಹೋಲಿಸುತ್ತಾರೆ. ತುಂಬಾ ಕಷ್ಟ ಪಟ್ಟು ಇಷ್ಟ ಪಟ್ಟು ಬಿಡುವಿಲ್ಲದೆ ಕೆಲಸ ಮಾಡುವ ರಕ್ಷಿತ್ ಅವರ ಮುಂದಿನ ಚಿತ್ರಗಳು ಚಾರ್ಲಿ707 ಮತ್ತು ಸಪ್ತ ಸಾಗರದಾಚೆ ಎಲ್ಲೊ. ಹೌದು ಕಿರಣ್ ರಾಜ್ ನಿರ್ದೇಶನದ ಚಾರ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಬಿಡುಗಡೆಗೆ ಸಜ್ಜಾಗಿದೆ. ಮತ್ತು ಹೇಮಂತ ರಾವ್ ನಿರ್ದೇನದ ಸಪ್ತ ಸಾಗರದಾಚೆ ಎಲ್ಲೊ ಎಂಬ ವಿಭಿನ್ನ ಚಿತ್ರದ ಶೂಟಂಗ್ ಶುರುವಾಗಿದೆ.

ಯಾವಾಗಲೂ ವಿಭಿನ್ನತೆಯನ್ನು ಹೊತ್ತು ತರುವ ರಕ್ಷಿತ್ ಅವರ ಈ ಚಿತ್ರಗಳು ಹೆಗಿರಲಿವೆ ಎಂಬ ಸಹಜ ಕುತೂಹಲದಿಂದ ಪ್ರೇಕ್ಷಕ ಪ್ರಭು ಕಾಯುತ್ತಿದ್ದಾನೆ. ರಕ್ಷಿತ್ ಶೆಟ್ಟಿ ಕೇವಲ ಒಬ್ಬ ಸಿನಿ ಸೆಲೆಬ್ರಿಟಿ ಆಗಿರದೆ ಒಳ್ಳೆಯ ಮಿಡಿಯುವ ಮನಸ್ಸಿನ ಸಾಮಾನ್ಯ ವ್ಯಕ್ತಿ ಕೂಡ ಆಗಿದ್ದಾರೆ. ಅವರು ಸರಳತೆ ವಿನಮ್ರತೆ ನಮ್ಮೆಲ್ಲರಿಗೂ ಗೊತ್ತೇ ಇದೆ. ಹೌದು ಮೊನ್ನೆ ರಕ್ಷಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಮ್ಮ ದೇಶದ ಮುಕುಟ ಕಾಶ್ಮೀರದಲ್ಲಿ ನಡೆಯುತ್ತಿರುವ ಚಾರ್ಲಿ ಚಿತ್ರದ ಕೊನೆಯ ಶೂಟಿಂಗ್ ಭಾಗದ ಫೋಟೋ ಒಂದನ್ನು ಹಾಕಿ ಅಪ್ಲೋಡ್ ಮಾಡಿದ್ದರು.

ಆಗ ಶರಣಯ್ಯ ಎಂಬ ವ್ಯಕ್ತಿ ಒಬ್ಬರು ತಮ್ಮ ತಂಗಿಯ ಶಸ್ತ್ರ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದು ಸಹಾಯ ಹಸ್ತವನ್ನು ಕೋರಿದ್ದಾರೆ, ಯಾವಾಗಲೂ ಅಭಿಮಾನಿಗಳೊಂದಿಗೆ ತಮ್ಮ ಸ್ವಲ್ಪ ಸಮಯ ಕಳೆವ ರಕ್ಷಿತ್ ಈ ಮೆಸೇಜ್ ಅನ್ನು ನೋಡಿದ್ದಾರೆ ಮತ್ತು ತಕ್ಷಣ ಅದಕ್ಕೆ ಪ್ರತಿಕ್ರಿಯೆ ನೀಡಿದ ರಕ್ಷಿತ್ ದಯವಿಟ್ಟು ನಿಮ್ಮ ನಂಬರ್ ಅನ್ನು ನನಗೆ ನೀಡಿ ಎಂದು ರಿಪ್ಲೈ ಮಾಡಿದ್ದಾರೆ. ನೋಡಿ ಒಬ್ಬ ಸ್ಟಾರ್ ನಟನಾಗಿದ್ದರು ಕೂಡ ಕಷ್ಟ ಎಂದು ಬಂದ ವ್ಯಕ್ತಿಗೆ ಸಹಾಯ ಮಾಡಲು ಮುಂದಾಗಿರುವ ಅವರ ಗುಣಕ್ಕೆ ನಮ್ಮದೊಂದು ಸಲಾಂ.

%d bloggers like this: