ಪರೀಕ್ಷಾ ಹಂತ ತಲುಪಿವೆ ನಮ್ಮದೇ ಮೂರು ಕೊರೋನಾ ಲಸಿಕೆಗಳು

ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಹೆಮ್ಮಾರಿಯ ನಿರ್ಮೂಲನೆಗಾಗಿ ಬಹುತೇಕ ಎಲ್ಲ ದೇಶಗಳ ವಿಜ್ಞಾನಿಗಳು ಪಣತೊಟ್ಟಿದ್ದಾರೆ. ಕಣ್ಣಿಗೆ ಕಾಣದ ಈ ಮಹಾಮಾರಿ ವೈರಸ್ ನಿಗ್ರಹಿಸಲು ಲಸಿಕೆ ಕಂಡು ಹಿಡಿಯುವ ಪೈಪೋಟಿಯಲ್ಲಿ ನಿರತರಾಗಿದ್ದಾರೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಕೂಡ ಕೊರೋನಾ ಲಸಿಕೆಯ ಅನ್ವೇಷಣೆ ದಿನನಿತ್ಯ ನಡೆಯುತ್ತಿದೆ. ಅದರಲ್ಲಿ ಈಗ ಭಾರತದ ಮೂರು ಲಸಿಕೆಗಳು ಪರೀಕ್ಷಾ ಹಂತವನ್ನು ತಲುಪಿವೆ. ಹೌದು ಸ್ವತಃ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾದ ಡಾಕ್ಟರ್ ಬಲರಾಮ್ ಭಾರ್ಗವ್ ಅವರು ಇದನ್ನು ಸ್ಪಷ್ಟಪಡಿಸಿದ್ದಾರೆ.

ಸೆರಂ ಇನ್ಸ್ಟಿಟ್ಯೂಟ್ ತಯಾರಿಸುತ್ತಿರುವ ಆಕ್ಸ್ಫರ್ಡ್ ವಿವಿ ಲಸಿಕೆ, ಕೋವಾಕ್ಸಿನ್, ಕ್ಯಾಡಿಲ್ಲ ಝಿಯಾಕೊವ್ ಡಿ ಇವೇ ನೋಡಿ ಭರವಸೆ ಮೂಡಿಸಿರುವಂತಹ ನಮ್ಮ ನೆಲದಲ್ಲಿಯೇ ತಯಾರಾಗುತ್ತಿರುವ ಕೊರೋನಾ ಲಸಿಕೆಗಳು. ಈಗಾಗಲೇ ಜಗತ್ತಿನಾದ್ಯಂತ ಹಲವಾರು ದೇಶಗಳು ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು ಅದರಲ್ಲಿ ರಷ್ಯಾದ ಸ್ಪುಟ್ನಿಕ್ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.

%d bloggers like this: