ಪರಿಸ್ಥಿತಿ ಕೈ ಮೀರುವ ಮೊದಲು ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು, ಚಂದನ್ ಶೆಟ್ಟಿ

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಆಕ್ರೋಶ! ಕನ್ನಡದ ಆಲ್ಬಂ ಸಾಂಗ್ ಗಳಲ್ಲಿ ತನ್ನದೆಯಾದ ವಿಭಿನ್ನ ಶೈಲಿಯ ಸಾಹಿತ್ಯ ಮತ್ತು ಸಂಗೀತದಿಂದ ಮೂರೇ ಮೂರು ಪೆಗ್ಗಿಗೆ ಎಂಬ ಆಲ್ಬಂ ಸಾಂಗ್ ಮೂಲಕ ಜನಪ್ರಿಯರಾದ ಚಂದನ್ ಶೆಟ್ಟಿ. ಕನ್ನಡದ ಫೇಮಸ್ ರಿಯಾಲಿಟಿ ಶೋ ಅಗಿರುವ ಬಿಗ್ ಬಾಸ್ ಮನೆಗೆ ಹೋಗಿ ತನ್ನ ವ್ಯಕ್ತಿತ್ವ ಮತ್ತು ಪ್ರತಿಭೆಯ ಮೂಲಕ ಶೋ ನಲ್ಲಿ ಗೆದ್ದು ಕರ್ನಾಟಕದ ಮನೆಮಾತಾದರು. ಚಂದನ್ ಶೆಟ್ಟಿ ಪೊಗರು ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ, ಈಗಾಗಲೇ ಇವರ ಸಂಗೀತದ ಕರಾಬು ಸಾಂಗ್ ಯುಟ್ಯುಬ್ ನಲ್ಲಿ 150 ಮಿಲಿಯನ್ ವೀಕ್ಷಣೆ ಪಡೆದು ದಾಖಲೆ ನಿರ್ಮಾಣ ಮಾಡಿದೆ.

ಹಾಗಾದರೆ ರ್ಯಾಪರ್ ಚಂದನ ಶೆಟ್ಟಿ ಕೋಪಗೊಂಡಿದ್ದು ಯಾರ ಮೇಲೆ ಅಂತೀರಾ, ಇತ್ತೀಚೆಗೆ ಅವರು ಒಂದು ಪಬ್ ರೆಸ್ಟೋರೆಂಟ್ ಗೆ ಹೋಗಿದ್ದಾರೆ. ಆ ಪಬ್ ರೆಸ್ಟೋರೆಂಟ್ ಗಳಲ್ಲಿ ಸಂಪೂರ್ಣವಾಗಿ ಇಂಗ್ಲೀಷ್ ಸಾಂಗ್ ಮಾತ್ರ ಹಾಕಿದ್ದಾರೆ ಇದನ್ನು ಪ್ರಶ್ನಿಸಿ ಅಲ್ಲಿನ ರೆಸ್ಟೋರೆಂಟ್ ಮಾಲೀಕರ ಬಳಿ ಹೋಗಿ ಇಂಗ್ಲೀಷ್ ಸಾಂಗ್ ಜೊತೆಗೆ ಕನ್ನಡದ ಸಾಂಗ್ ಕೂಡ ಹಾಕಬೇಕು ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಪಬ್ ರೆಸ್ಟೋರೆಂಟ್ ಮಾಲೀಕರು ಸ್ಪಂದಿಸದೆ, ನಿರ್ಲಕ್ಷ್ಯತನದಿಂದ ನಕರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇದಕ್ಕೆ ಬೇಸರಗೊಂಡ ಚಂದನ್ ಶೆಟ್ಟಿ ಆಕ್ರೋಶದಿಂದ ಪಬ್ ಗಳಲ್ಲಿ ಕನ್ನಡ ಸಾಂಗ್ ಹಾಕಲ್ಲ ಅಸಲಿಗೆ ಈ ಪಬ್ ಮಾಲೀಕರು ಕನ್ನಡದವರಲ್ಲ ಅವರಿಗೆ ಈ ಇಲ್ಲಿ ಎಲ್ಲಾ ರೀತಿಯಾದ ಸೌಲಭ್ಯಗಳುಬೇಕು, ಆದರೆ ಕನ್ನಡ ಭಾಷೆ ಬೇಡ ಈಗಾಗಲೇ ಕನ್ನಡ ಭಾಷೆಯ ಪರಿಸ್ದಿತಿ ಶೋಚನೀಯವಾಗಿದೆ ಕೈಮೀರುವ ಮೊದಲು ಎಚ್ಚರವಾಗಿ ಜಾಗೃತಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪಬ್ ಮಾಲೀಕರ ವಿರುಧ್ದ ತನ್ನ ಅಸಮಾಧಾನವನ್ನು ಹೊರಹಾಕಿದ್ದಾರೆ.

%d bloggers like this: