ಪತಿ ಜೊತೆಗಿನ ಪೋಟೋ ಹಾಕಿ ಖುಷಿಯ ವಿಚಾರ ಹಂಚಿಕೊಂಡ ನಟಿ ಅಮೂಲ್ಯ ಅವರು

ಸ್ಯಾಂಡಲ್ ವುಡ್ ಸ್ಟಾರ್ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು ಚಂದನವನದ ಸೂಪರ್ ಹಿಟ್ ಚಿತ್ರ ಚಲುವಿನ ಚಿತ್ತಾರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಅಮೂಲ್ಯ ಅವರು ತಮ್ಮಚುರುಕು ಮತ್ತು ಮುದ್ದಾದ ಅಭಿನಯದ ಮೂಲಕ ಮೊದಲ ಚಿತ್ರದಲ್ಲೇ ಜನಪ್ರಿಯತೆ ಜೊತೆಗೆ ಅಪಾರ ಅಭಿಮಾನಿ ಬಳಗ ಸಂಪಾದಿಸಿಕೊಂಡು ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದರು. ‌ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅಮೂಲ್ಯ ಅವರನ್ನು ಕಂಡರೆ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಅವರಿಗೆ ಅತ್ಯಂತ ಪ್ರೀತಿ ಆತ್ಮೀಯತೆ.

ಇನ್ನು ನಟಿ ಅಮೂಲ್ಯ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಜಗದೀಶ್ ಎಂಬುವವರನ್ನ ಪ್ರೀತಿಸಿ ಕುಟುಂಬದವರ ಒಪ್ಪಿಗೆ ಪಡೆದು 2017 ರಲ್ಲಿ ಜಗದೀಶ್ ಅವರೊಟ್ಟಿಗೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟರು. ನಟಿ ಅಮೂಲ್ಯ ಅವರು ಮದುವೆಯಾದ ಬಳಿಕ ಕೊಂಚ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು ಕೂಡ ಅಲ್ಲೊಂದು ಇಲ್ಲೊಂದು ಉತ್ತಮ ಪಾತ್ರಗಳಿರುವ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಸಿನಿಮಾದಿಂದ ದೂರ ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದ ಅಮೂಲ್ಯ ತಮ್ಮ ಅಭಿಮಾನಿಗಳೊಟ್ಟಿಗೆ ಸದಾ ಸಂಪರ್ಕದಲ್ಲಿದ್ದುಕೊಂಡು,ತಮ್ಮ ದಿನನಿತ್ಯದ ಅಪ್ ಡೇಟ್ಸ್ ಗಳನ್ನು ನೀಡುತ್ತಿದ್ದರು.

ಜೊತೆಗೆ ತಮ್ಮ ಸಂಭ್ರಮ ಸಂತಸದ ಕ್ಷಣಗಳಿಂದ ಇರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಇದೀಗ ಅದರಂತೆ ತಮ್ಮ ಮನೆಗೆ ಹೊಸ ಅತಿಥಿ ಬರುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು ನಟಿ ಅಮೂಲ್ಯ ಇದೀಗ ತಾಯಿಯಾಗುತ್ತಿದ್ದಾರಂತೆ. ಅದಕ್ಕೆ ಪೂರಕ ಎಂಬಂತೆ ನಟಿ ಅಮೂಲ್ಯ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ 2022 ರ ಬೇಸಿಗೆ ಕಾಲಕ್ಕೆ ನಮ್ಮ ಬಾಳಿಗೆ ಹೊಸ ಅತಿಥಿ ಅಗಮನವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳು ನಟಿ ಅಮೂಲ್ಯ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

%d bloggers like this: