ಪತಿಯಿಂದ ಬೇರೆಯಾದ ನಂತರ ತಮ್ಮ ಹೆಸರು ಬದಲಾಯಿಸಿದ ದಕ್ಷಿಣ ಭಾರತದ ನಟನ ಪತ್ನಿ

ತಮಿಳಿನ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಹಾಗೂ ನಟ ಧನುಷ್ ಅವರು ತಮ್ಮ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದಾರೆ. 2004ಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ತಾವಿಬ್ಬರೂ ಡೈವೋರ್ಸ್ ನೀಡುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೇ ವರ್ಷ ಜನವರಿ 17ರಂದು ಧನುಷ್ ಹಾಗೂ ಐಶ್ವರ್ಯ ತಾವು ಬೇರ್ಪಡುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅವರ ಅವರ ಅಭಿಮಾನಿಗಳು ತುಂಬಾ ಶಾಕ್ ಆಗಿದ್ದರು. ಸಾಮಾನ್ಯವಾಗಿ ತಾವು ಇಷ್ಟಪಡುವ ಜೋಡಿಗಳು ಬೇರೆ ಯಾಗುತ್ತಿರುವ ವಿಷಯವನ್ನು ಕೇಳಿದರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. ಹಾಗೂ ಬೇರ್ಪಡುತ್ತಿರುವುದಕ್ಕೆ ಕಾರಣ ಏನಾಗಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.

ಡಿವೋರ್ಸ್ ಎಂಬ ವಿಷಯ ಸ್ವಲ್ಪ ಪರ್ಸನಲ್ ಆದರೂ ನಟ ನಟಿಯರಿಗೆ ತಮ್ಮ ಪರ್ಸನಲ್ ಲೈಫ್ ಗೆ ಆದ್ಯತೆ ನೀಡಿ ವಿಷಯಗಳನ್ನು ಮುಚ್ಚಿಡುವುದು ಕಷ್ಟವಾಗುತ್ತದೆ. ಏಕೆಂದರೆ ಹಲವಾರು ಮಾಧ್ಯಮಗಳು ನಟ ನಟಿಯರ ಜೀವನದ ಸೂಕ್ಷ್ಮ ವಿಚಾರಗಳನ್ನು ಕಂಡುಹಿಡಿದು ಎಲ್ಲರ ಮುಂದೆ ತೋರಿಸುತ್ತಾರೆ. ಅದಲ್ಲದೆ ಧನುಷ್ ಹಾಗೂ ಐಶ್ವರ್ಯಾ ಅವರ ಡಿವೋರ್ಸ್ ಗೆ ಕಾರಣ ಏನಿರಬಹುದು ಎಂದು ಸಾಕಷ್ಟು ಪ್ರಶ್ನೆಗಳು ಮೂಡಿಬರುತ್ತಿದ್ದವು. ಇದಕ್ಕೆ ಧನುಷ್ ಅವರ ತಂದೆ ಕಸ್ತೂರಿ ರಾಜ ಅವರು ಉತ್ತರ ನೀಡಿದ್ದಾರೆ. ಇದು ಕೇವಲ ಕುಟುಂಬದ ಜಗಳ ಎಂದು ಹೇಳಿ ತಮ್ಮ ಮಾತು ಮುಗಿಸಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಬಹುಶಹ ಸಣ್ಣ ಜಗಳವಿರಬಹುದು. ಇಂದಲ್ಲ ನಾಳೆ ಈ ಜೋಡಿ ಮತ್ತೆ ಒಂದಾಗುತ್ತಾರೆ ಎಂಬ ಆಸೆಯನ್ನಿಟ್ಟುಕೊಂಡಿದ್ದರು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಐಶ್ವರ್ಯ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ.

ಹೌದು ಐಶ್ವರ್ಯ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರ ಹೆಸರನ್ನು ಐಶ್ವರ್ಯ ರಜನೀಕಾಂತ್ ಧನುಷ್ ಎಂದು ಬರೆದುಕೊಂಡಿದ್ದರು. ಆದರೆ ಡಿವೋರ್ಸ್ ವಿಚಾರದ ಬಗ್ಗೆ ಸಂಪೂರ್ಣ ಪಾರದರ್ಶಕತೆಯನ್ನು ನೀಡಲು ಐಶ್ವರ್ಯ ಅವರು ತಮ್ಮ ಹೆಸರಿನಿಂದ ಧನುಷ್ ಎಂಬ ಹೆಸರನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ಐಶ್ವರ್ಯ ಹಾಗೂ ಧನುಷ್ ಜೋಡಿ ಒಂದಾಗಬಹುದು ಎಂಬ ವದಂತಿಯನ್ನು ಅಳಿಸಿಹಾಕಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ನಿಜಕ್ಕೂ ನಿರಾಸೆಗೊಂಡಿದ್ದಾರೆ. ಐಶ್ವರ್ಯ ಅವರು ವೈವಾಹಿಕ ಸಂಬಂಧವನ್ನು ಮುರಿದು ಕೊಳ್ಳುವುದರ ಬಗ್ಗೆ ಘೋಷಣೆ ಮಾಡಿದ ನಂತರ ಕೆಲವೇ ತಿಂಗಳುಗಳಲ್ಲೇ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಧನುಷ್ ಎಂಬ ಹೆಸರನ್ನು ಅಳಿಸಿಹಾಕಿ, ತಾವು ಮತ್ತೆ ಎಂದೂ ಒಂದಾಗುವುದಿಲ್ಲ ಎಂಬುದನ್ನು ಇಂಡೈರೆಕ್ಟ್ ಆಗಿ ಹೇಳಿದಂತಾಗಿದೆ.

%d bloggers like this: