ಪತಿಯಿಂದ ದೂರವಾದ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ ಹಾಗೂ ಸಂಸದೆ

ಬೆಂಗಾಲಿ ಸಿನಿಮಾದ ಖ್ಯಾತ ನಟಿ ಹಾಗೂ ಸಂಸದೆಯಾದ ನುಸ್ರತ್ ಜಹಾನ್ ತಾಯಿಯಾಗಿದ್ದಾರೆ, ಹೌದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆಯಾಗಿರುವ ನಟಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಇದೀಗ ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ನಟಿ ನುಸ್ರತ್ ಜಹಾನ್ ಅವರು ನಟ, ನಿರ್ದೇಶಕ ನಿರ್ಮಾಪಕರಾದ ರಾಜ್ ಚಕ್ರವರ್ತಿ ಅವರ ಶಾಟ್ರೂ ಸಿನಿಮಾದ ಮೂಲಕ ಬಣ್ಣದ ಜಗತ್ತಿಗೆ ಹೆಜ್ಜೆ ಇಟ್ಟಿದರು. ತದ ನಂತರ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದರು. ನಂತರ ನಟಿ ನುಸ್ರತ್ ಜಹಾನ್ 2019ರಲ್ಲಿ ಪಶ್ಚಿಮಬಂಗಾಳದ ಬಸಿರ್ಹತ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತರು. ದಾದಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಬಸಿರ್ಹತ್ ಲೋಕಸಭೆಯಲ್ಲಿ ಸ್ಪರ್ಧಿಸಿ ಗೆದ್ದು ಸಂಸದೆಯಾದರು. ಇದಾದ ಬಳಿಕ ನಟಿ ನುಸ್ರತ್ ಜಹಾನ್ ಅವರು ಭಾರಿ ಸುದ್ದಿಯಾಗಿದ್ದು ಅವರ ವೈಯಕ್ತಿಕ ಬದುಕಿನ ವಿಚಾರವಾಗಿ.

ನಟ ಯಶ್ ದಾಸ್ ಗುಪ್ತ ಅವರೊಂದಿಗೆ ಒಡನಾಟ ಹೊಂದಿದ್ದಾರೆ, ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರದಾಡಿದ್ದವು. ಇದಕ್ಕೆ ಪೂರಕ ಎಂಬಂತೆ ನಟ ಯಶ್ ದಾಸ್ ಗುಪ್ತಾ ಮತ್ತು ನಟಿ ನುಸ್ರತ್ ಜಹಾನ್ ಇಬ್ಬರು ಪ್ರವಾಸ ಹೋಗಿದ್ದ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಕೂಡ ಆಗಿದ್ದವು. ಬಳಿಕ ನಟಿ ಹಾಗೂ ಸಂಸದೆಯಾಗಿರುವ ನುಸ್ರತ್ ಜಹಾನ್ 2019ರಲ್ಲಿ ನಾನು ನಿಖಿಲ್ ಜೈನ್ ಜೊತೆಗೆ ಟರ್ಕಿಯ ಬೋಡ್ರಂನಲ್ಲಿ ನಡೆದ ಡೆಸ್ಟಿನೆಶನ್ ವೆಡ್ಡಿಂಗ್ ನಲ್ಲಿ ಮದುವೆ ಯಾಗಿದ್ದೇವೆ ಎಂದು ತಿಳಿಸಿದ್ದರು. ಕೆಲ ತಿಂಗಳ ಹಿಂದೆ ಪತಿ ನಿಖಿಲ್ ಜೈನ್ ಅವರು ಈ ಮಗು ನನ್ನದಲ್ಲ ಎಂದಿದ್ದರು ಹಾಗೂ ನುಸ್ರತ್ ಅವರಿಂದ ಬೇರೆಯಾಗಿದ್ದಾರೆ. ಇದೀಗ ನುಸ್ರತ್ ಗಂಡು ಮಗವಿಗೆ ಜನ್ಮ ನೀಡಿ ತಾಯಿಯಾಗಿದ್ದಾರೆ. ವೈದ್ಯರು ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರಕ್ಕೆ ಡೇಟ್ ತಿಳಿಸಿದ್ದರು. ಅಂತೆಯೇ ಆಗಸ್ಟ್ 26ರಂದು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಂಡು ಮಗವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

%d bloggers like this: