ಪತ್ನಿಗೆ ದುಬಾರಿ ಬೆಲೆಯ ಬೈಕ್‌ ಕೊಡಿಸುವ ಮೂಲಕ ಪ್ರೇಮಿಗಳ ದಿನ ಆಚರಿಸಿಕೊಂಡ ನಟ ಹಾಗೂ ನಟಿ

ಬಿಗ್ ಬಾಸ್ ನಲ್ಲಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದು, ಮುದ್ದಾದ ಮಗುವಿಗೆ ತಂದೆ ತಾಯಿಗಳಾಗಿ ವ್ಯಾಲೆಂಟೆನ್ಸ್ ಡೇ ದಿನವನ್ನು ಸಖತ್ ಸರ್ಪ್ರೈಸ್ ಆಗಿ ಆಚರಿಸಿಕೊಂಡಿದ್ದಾರೆ. ಹೌದು ಮೊನ್ನೆ ಫೆಬ್ರವರಿ 14ರಂದು ಪ್ರೇಮಿಗಳ ದಿನದ ವಿಶೇಷವಾಗಿ ಅನೇಕರು ತಮ್ಮ ಪ್ರೀತಿ ಪಾತ್ರರಿಗೆ ಇಷ್ಟು ದಿನಗಳ ಕಾಲ ತಮ್ಮ ಮನದಲ್ಲಿ ಬಚ್ಚಿಟ್ಟುಕೊಂಡಿದಂತಹ ಪ್ರೀತಿಯನ್ನ ತಿಳಿಸಿ ಪ್ರಿಯತಮ/ಪ್ರಿಯತಮೆ ಮುಂದೆ ತಮ್ಮ ಪ್ರೇಮ ನಿವೇದನೆ ಮಾಡಿ ಪರಸ್ಪರ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಪ್ರೀತಿಸಿ ಮದುವೆ ಆಗಿರುವ ಬಹಳಷ್ಟು ಜೋಡಿಗಳು ವ್ಯಾಲೆಂಟೆನ್ಸ್ ಡೇ ದಿನದಂದು ತಮ್ಮ ಸಂಗಾತಿಗೆ ವಿಶೇಷವಾದ ಉಡುಗೊರೆಯನ್ನ ನೀಡುವ ಮೂಲಕ ತಮ್ಮ ಪ್ರೀತಿಯ ಶುಭಾಶಯವನ್ನ ತಿಳಿಸಿದ್ದಾರೆ.

ಇದೀಗ ಅದರಂತೆ ಮಲೆಯಾಳಂ ಕಿರುತೆರೆಯ ಸ್ಟಾರ್ ನಟರಾದಂತಹ ಶ್ರೀನಿಶ್ ಅವರು ತಮ್ಮ ಪ್ರೀತಿಯ ಮಡದಿ ಪರ್ಲಿ ಅವರಿಗೆ ಅಚ್ಚರಿಯಾದಂತಹ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಬೈಕ್ ವೊಂದನ್ನ ಉಡುಗೊರೆ ನೀಡಿದ್ದಾರೆ. ಮಲೆಯಾಳಂನ ಕಿರುತೆರೆಯ ನಟ ಶ್ರೀನಿಶ್ ಅರವಿಂದ್ ಮತ್ತು ನಟಿ ಪರ್ಲಿ ಮಾಣಿ ಅವರು ಕಳೆದ ಎರಡು ವರ್ಷಗಳ ಕಿರುತರೆ ಲೋಕದ ಜನಪ್ರಿಯ ರಿಯಾಲಿಟಿ ಶೋ ಆದಂತಹ ಬಿಗ್ ಬಾಸ್ ಮಲೆಯಾಳಂ ಆವರ್ತದಲ್ಲಿ ಇಬ್ಬರು ಸ್ಪರ್ಧಿಯಾಗಿ ಭಾಗವಹಿಸಿದ್ದರು.ದೊಡ್ಮನೆಯಲ್ಲಿ ಪರಸ್ಪರ ಪ್ರೀತಿಗೆ ಬಿದ್ದ ಈ ಜೋಡಿ ಬಿಗ್ ಬಾಸ್ ಶೋ ನಿಂದ ಹೊರ ಬಂದ ಬಳಿಕ ವೈವಾಹಿಕ ಜೀವನಕ್ಕೆ ಇಡುತ್ತಾರೆ. ಅವರಿಬ್ಬರ ಸುಂದರ ದಾಂಪತ್ಯ ಸಂಸಾರಕ್ಕೆ ಸಾಕ್ಷಿಯಾಗಿ ಒಂದು ಮುದ್ದಾದ ಮಗು ಕೂಡ ಇದೆ. ಅಂತೆಯೇ ಇದೀಗ ಫೆಬ್ರವರಿ14 ಪ್ರೇಮಿಗಳ ದಿನದ ಅಂಗವಾಗಿ ಪ್ರೀತಿಸಿ ಮದುವೆಯಾದ ತನ್ನ ಮಡದಿ ಪರ್ಲಿ ಮಾಣಿ ಅವರಿಗೆ ಅಚ್ಚರಿಯಂತಹ ಉಡುಗೊರೆ ನೀಡಿದ್ದಾರೆ.

ಅಂದು ನಟ ಶ್ರೀನಿಶ್ ಅರವಿಂದ್ ಅವರು ಪತ್ನಿ ಪರ್ಲಿ ಮಾಣಿ ಅವರನ್ನ ಹೊರಗಡೆ ಕರೆದ್ಯೋಯುತ್ತಾರಂತೆ. ನಟಿ ಪರ್ಲಿ ಮಣಿ ಅವರು ಎಲ್ಲೋ ಊಟಕ್ಕೆಂದು ಹೋಟೇಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದುಕೊಂಡಿದ್ದರಂತೆ. ಆದರೆ ನಟ ಶ್ರೀನಿಶ್ ಅರವಿಂದ್ ತನ್ನ ಪತ್ನಿಗೆ ಇಷ್ಟವಾದ ಬಿಎಂಡಬ್ಲ್ಯೂ ಬೈಕ್ ಅನ್ನು ನೀಡಿ ಅಚ್ಚರಿ ಪಡಿಸಿದ್ದಾರೆ. ಇದರ ವೀಡಿಯೋ ತುಣುಕನ್ನ ನಟಿ ಪರ್ಲಿ ಮಣಿ ಅವರು ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಈ ವ್ಯಾಲೆಂಟೆನ್ಸ್ ಡೇ ನನಗೆ ಖಂಡಿತವಾಗಿಯೂ ಅತ್ಯಂತ ವಿಶೇಷವಾದುದು. ನಾನು ಇದಕ್ಕೆ ತುಂಬಾ ಭಾವುಕನಾಗಿದ್ದೇನೆ ಎಂದು ತನ್ನ ಪ್ರೀತಿಯ ಪತಿ ಶ್ರೀನಿಶ್ ಅರವಿಂದ್ ಅವರ ಹೆಸರನ್ನ ಟ್ಯಾಗ್ ಮಾಡಿದ್ದಾರೆ. ಇನ್ನು ನಟಿ ಪರ್ಲಿ ಮಣಿ ಅವರಿಗೆ ಸೂಪರ್ ಬೈಕ್ ಗಳೆಂದರೆ ತುಂಬಾ ಇಷ್ಟವಂತೆ. ಹಾಗಾಗಿ ಈ ಬಿಎಂಡಬ್ಲ್ಯೂ ಜಿ310 ಬೈಕ್ ಅನ್ನೇ ಗಿಫ್ಟ್ ಆಗಿ ನೀಡಿದ್ದಾರೆ.

%d bloggers like this: