ಪೆಟಿಎಂ ಇಂದ ಇದನ್ನು ಬುಕ್ ಮಾಡಿ ತಕ್ಷಣ 500 ರೂಪಾಯಿ ನಿಮ್ಮ ಪೆಟಿಎಂ ಖಾತೆಗೆ ಸಿಗುತ್ತದೆ

ನಮ್ಮ ಪ್ರತಿನಿತ್ಯದ ಜೀವನಕ್ಕೆ ಅಡುಗೆ ಗ್ಯಾಸ್ ಬೇಕೇ ಬೇಕು, ಕೆಲವೊಂದು ಸಣ್ಣ ಕುಟುಂಬದ ಮನೆಗಳಲ್ಲಿ ತಿಂಗಳಿಗೆ ಅಥವಾ 45 ದಿನಗಳಿಗೆ ಒಂದು ಸಿಂಡರ್ ಪೂರ್ಣಗೊಂಡರೆ ಕೆಲವು ದೊಡ್ಡ ಕುಟುಂಬ ಮತ್ತು ಮಧ್ಯಮ ಕುಟುಂಬಗಳಲ್ಲಿ ತಿಂಗಳಿಗೆ ಎರಡರಂತೆ ಸಿಲೆಂಡರ್ ಖಾಲಿಯಾಗುತ್ತದೆ. ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ನಾವು ಪ್ರತಿಯೊಂದಕ್ಕೂ ಸಿಲೆಂಡರನ್ನೇ ಅವಲಂಬಿಸಿದ್ದೇವೆ. ಇಂತಹ ಅನಿವಾರ್ಯವಾದ ಸಿಲಿಂಡರುಗಳ ಆರ್ಡರ್ ಮೇಲೆ ಪೇಟಿಎಂ ಐದುನೂರು ರೂಪಾಯಿಗಳ ಕ್ಯಾಶ್ ಬ್ಯಾಕ್ ನೀಡಲು ಮುಂದಾಗಿದೆ.

ಹೌದು ಒಂದು ವೇಳೆ ನೀವು ಪೇಟಿಎಂ ಅಪ್ಲಿಕೇಶನ್ ಮೂಲಕ ಸಿಲಿಂಡರನ್ನು ಬುಕ್ ಮಾಡಿದ್ದೆ ಆದಲ್ಲಿ ನಿಮಗೆ 500 ಮರುಪಾವತಿ ಆಗಲಿವೆ. ಹೀಗೆ ಕ್ಯಾಶ್ ಬ್ಯಾಕ್ ಪಡೆಯಲು ಕೆಳಗಿನ ನಿಯಮಗಳನ್ನು ಪಾಲಿಸಿ. ಮೊದಲು ನಿಮ್ಮ ಮೊಬೈಲ್ ಗಳಲ್ಲಿ ಪೇಟಿಎಂ ಅಪ್ಲಿಕೇಶನ್ ಅನ್ನು ತೆರೆಯಿರಿ, ಒಂದುವೇಳೆ ಅಲ್ಲಿ ನಿಮಗೆ ರಿಚಾರ್ಜ್ ಅಥವಾ ಪೇಯ್ ಆಯ್ಕೆ ಸಿಗದಿದ್ದರೆ ಮೋರ್ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮಗೆ ರಿಚಾರ್ಜ್ ಆಯ್ಕೆ ದೊರೆಯುತ್ತದೆ.

ಅದನ್ನು ಕ್ಲಿಕ್ ಮಾಡಿ ಬುಕ್ ಸಿಲೆಂಡರ್ ಎಂಬ ಆಯ್ಕೆ ಬರುತ್ತದೆ ಅದನ್ನು ಕ್ಲಿಕ್ ಮಾಡಿ. ನೀವು ಭಾರತ್ ಗ್ಯಾಸ್ ಬಳಕೆದಾರರಗಿದ್ದರೆ ಭಾರತ್ ಗ್ಯಾಸ್ ಎಂದು ಇಂಡಿಯನ್ ಗ್ಯಾಸ್ ಆಗಿದ್ದರೆ ಇಂಡಿಯನ್ ಗ್ಯಾಸ್ ಎಂದು ಆಯ್ಕೆ ಮಾಡಬೇಕು, ನಂತರ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಅಥವಾ ಎಲ್ಪಿಜಿ ನಂಬರನ್ನು ನಮೂದಿಸಬೇಕು. ಅದರ ನಂತರ ಕೆಳಗೆ ಬರುವ ಗ್ರಾಹಕರ ವಿವರಗಳನ್ನು ಭರ್ತಿ ಮಾಡಬೇಕು.

ಇನ್ನೇನು ಆರ್ಡರ್ ಓಕೆ ಆಗುವ ಹಂತದಲ್ಲಿ FIRSTLPG ಎಂಬ ಪ್ರೋಮೊ ಕೋಡನ್ನು ನಮೂದನೆ ಮಾಡಬೇಕು. ಒಂದು ವೇಳೆ ನೀವು ಪ್ರೋಮೊ ಕೋಡನ್ನು ನಮೂದಿಸಲು ವಿಫಲರಾದರೆ ಕ್ಯಾಶ್ಬ್ಯಾಕ್ ದೊರೆಯಲು ಸಾಧ್ಯವಿಲ್ಲ. ಇದನ್ನು ಮೊದಲ ಬಾರಿ ಬಳಸಿದಾಗ ಮಾತ್ರ ನೀವು ಪಡೆಯಬಹುದು, ಈ ರೀತಿಯಾ ಸುವರ್ಣಾವಕಾಶ ನಿಮಗೆ ಡಿಸೆಂಬರ್31 2020ರವರೆಗೆ ಮಾತ್ರ ಲಭ್ಯವಿದೆ, ಹೀಗಾಗಿ ಈ ಅವಕಾಶವನ್ನು ನೀವು ಸದುಪಯೋಗ ಪಡಿಸಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗು ತಿಳಿಸಿ ಅವರು ಪಡೆದುಕೊಳ್ಳುವಂತೆ ಮಾಡಿ.

%d bloggers like this: