ಪೇಟಿಯಂ ಆಪ್ ನಿಂದ ಗ್ರಾಹಕರಿಗೆ ಎರಡು ಲಕ್ಷ ರೂಗಳ ಸಾಲದ ಯೋಜನೆ ಗ್ರಾಹಕರಿಗೆ ಬಂಪರ್ ಆಫರ್! ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆ ಆರಂಭವಾದ ದಿನದಿಂದ ಈ ಆನ್ಲೈನ್ ಪೇಮೆಂಟ್ ಪ್ರಕ್ರಿಯೆ ಹೆಚ್ಚಾಗಿದ್ದು, ಪ್ರಸ್ತುತ ಹಲವಾರು ಕ್ಷೇತ್ರಗಳಲ್ಲಿ ಆನ್ಲೈನ್ ಮುಖಾಂತರವೇ ಪೇಮೆಂಟ್ ಮಾಡಲಾಗುತ್ತಿದೆ. ಹಲವಾರು ಕ್ಷೇತ್ರಗಳ ವ್ಯಾಪಾರ ವ್ಯವಹಾರವನ್ನು, ಉದ್ಯಮಗಳ ವ್ಯವಹಾರದಲ್ಲಿ ಈ ಆನ್ಲೈನ್ ಪೇಮೆಂಟ್ ಅನುಸರಿಸಲಾಗುತ್ತಿದೆ. ಈ ಆನ್ಲೈನ್ ಪೇಮೆಂಟ್ ಆಪ್ ಗಳಲ್ಲಿ ಪೇಟಿಎಂ ಕೂಡ ಪ್ರಮುಖವಾದ ಆಪ್ ಆಗಿದ್ದು, ಹೆಚ್ಚು ಜನಪ್ರಿಯವಾದ ಮತ್ತು ಗ್ರಾಹಕರ ಅಚ್ಚುಮೆಚ್ಚಿನ ಆನ್ಲೈನ್ ಪೇಮೆಂಟ್ ಆಪ್ ಆಗಿದೆ.ಈ ಪೇಟಿಎಂ ಆಪ್ ತನ್ನ ಗ್ರಾಹಕರಿಗೆ ಬರೋಬ್ಬರಿ ಎರಡು ಲಕ್ಷದವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಚಿಂತನೆ ನಡೆಸಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.

ಈ ಸಾಲ ನೀಡುವ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲೀಕರಣ ರೂಪದಲ್ಲಿ ಸಾಲಪಾವತಿ ಮತ್ತು ಮರುಪಾವತಿಯ ಪ್ರಕ್ರಿಯೆಗಳು ನಡೆಯುತ್ತದೆ. ನೀವು ನಿಮ್ಮ ದಾಖಲೆ, ಮಾಹಿತಿಳನ್ನು ಅನ್ಲೈನ್ ಅರ್ಜಿಯ ಮೂಲಕವೇ ಭರ್ತಿ ಮಾಡಿ ಸಾಲ ಪಡೆಯಬಹುದಾಗಿದೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪೇಟಿಎಂ ಸಣ್ಣ ವ್ಯಾಪಾರ ಮಾಲೀಕರು, ಉದ್ಯೋಗಿಗಳು, ವೃತ್ತಿಪರರಿಗೆ ಸುಲಭವಾಗಿ ಸಾಲದ ಸೇವೆಗಳನ್ನು ನೀಡುತ್ತಿದೆ. ಈ ಸಾಲವು ಪೇಟಿಯಂ ಟೆಕ್ ಗಳಿಗೆ ಬ್ಯಾಂಕುಗಳು ಮತ್ತು ಎನ್.ಬಿ.ಎಫ್.ಸಿ.ಗಳಿಗೆ ಸಾಲವನ್ನು ಎರಡು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತವೆ.

ಸಾಲಕ್ಕೆ ಅರ್ಜಿ ಹಾಕುವವರು ಕೂಡ ಆನ್ ಲೈನ್ ಮುಖಾಂತರವೇ ತಮ್ಮ ಎಲ್ಲಾ ದಾಖಲಾತಿಗಳನ್ನು ನೀಡಿ ಕೇವಲ 2ನಿಮಿಷದ ಒಳಗೆ ಸಾಲವನ್ನು ಪಡೆಯಬಹುದಾಗಿದೆ. ಈ ಪೇಟಿಯಂ ಸಾಲದ ಸೇವೆಯು ವರ್ಷದ 365 ದಿನಗಳು ವಾರಾಂತ್ಯದ ಏಳುದಿನ ಪೂರ 24 ಗಂಟೆಯೂ ಸಹ ಕಾರ್ಯ ನಿರ್ವಹಿಸುತ್ತವೆ. ಸಾಲದ ಮರುಪಾವತಿಯನ್ನು 18 ರಿಂದ 36 ತಿಂಗಳವರೆಗೆ ಮರುಪಾವತಿಗೆ ಅವಕಾಶವಿದೆ ಎಂದು ಪೇಟಿಎಂ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.