ಫೋನ್ ಪೇ, ಗೂಗಲ್ ಪೇ ಕಥೆ ಬಿಡಿ ಇನ್ನು ಮುಂದೆ ನೀವು ವಾಟ್ಸಾಪ್ ಮೂಲಕವೇ ಹಣ ಕಳುಹಿಸಬಹುದು ಹಾಗು ಪಡೆಯಬಹುದು

ಆನ್ಲೈನ್ ಪಾವತಿಯಲ್ಲಿ ಪೈಪೋಟಿಗಿಳಿದ ವಾಟ್ಸಪ್! ವಾಟ್ಸಪ್ ಬಳಕೆದಾರರು ಇಷ್ಟು ದಿವಸ ಕೇವಲ ಸಂದೇಶ ಕಳಿಸುವುದಕ್ಕೆ, ವೀಡಿಯೋ ಕರೆ, ಮತ್ತು ಚಿತ್ರತುಣುಕುಗಳನ್ನು ರವಾನಿಸುವುದಕ್ಕೆ ಬಳಕೆ ಮಾಡುತ್ತಿದ್ದರು. ಆದರೆ ವಾಟ್ಸ್ ಇದೀಗ ಹೊಸ ಸಾಹಸಕ್ಕೆ ಮುಂದಾಗಿದೆ ಆನ್ಲೈನ್ ಪಾವತಿಗೆ ವೇದಿಕೆಯಾಗಿದ್ದ ಫೋನ್ ಪೇ, ಪೇಟಿಯಂ, ಗೂಗಲ್ ಪೇ, ಅಮೇಜಾನ್ ಪೇ ಹೀಗೆ ಹಲವಾರು ಆಪ್ ಗಳು ಹಣಕಾಸಿನ ವಹಿವಾಟಿಗೆ ಸಹಕಾರಿಯಾಗಿದ್ದವು ಇದೇ ರೀತಿ ವಾಟ್ಸಪ್ ಕೂಡ ತನ್ನ ಬಳಕೆದಾರರಿಗೆ ಹೊಸದೊಂದು ಕೊಡುಗೆ ನೀಡಿದೆ. ಇನ್ನು ಮುಂದೆ ವಾಟ್ಸಪ್ ಮೂಲಕವು ನೀವು ಹಣ ವರ್ಗಾವಣೆ ಮಾಡಬಹುದಾಗಿದೆ. ಭಾರತೀಯ ಪಾವತಿ ನಿಗಮ ಅಭಿವೃದ್ದಿಪಡಿಸಿರುವ ಯುಪಿಐ ವ್ಯವಸ್ಥೆಯ ಮೂಲಕ ವಾಟ್ಸಪ್ ನಲ್ಲಿಯೂ ಕೂಡ ಹಣ ವರ್ಗಾವಣೆ ಮಾಡಬಹುದಾಗಿದ್ದು ಕಳೆದ ಶುಕ್ರವಾರದಿಂದ ಈ ವ್ಯವಸ್ಥೆ ಜಾರಿಯಲ್ಲಿದೆ.

ವಾಟ್ಸಪ್ ಮೂಲಕ ನೀವು ಮಾಡುವ ವಹಿವಾಟಿಗೆ ಯಾವುದೇ ರೀತಿಯ ಸೇವಾಶುಲ್ಕವನ್ನು ಪಡೆಯುವುದಿಲ್ಲ ಇದು ಸಂಪೂರ್ಣ ಉಚಿತವಾಗಿದ್ದು ಬಳಕೆದಾರರು ವಾಟ್ಸಪ್ ಹೊಸ ನವೀಕರಣ ಮಾಡಿಕೊಂಡು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತನ್ನ ಬಳಕೆದಾರರಿಗೆ ಮಾಹಿತಿ ನೀಡಿದೆ. ಇದರಿಂದ ಗ್ರಾಹಕರ ವೈಯಕ್ತಿಕ ಮಾಹಿತಿಯ ಸಂಪೂರ್ಣ ರಕ್ಷಣಾತ್ಮಕವಾಗಿದ್ದು ಯಾವುದೇ ರೀತಿಯ ಭಯಪಡುವ ಅವಶ್ಯಕತೆಯಿಲ್ಲ ಈ ವಾಟ್ಸಪ್ ಪಾವತಿ ಮಾಡುವಾಗ ನಿಮ್ಮದೇ ಆದ ರಹಸ್ಯ ಸಂಖ್ಯೆಯನ್ನು ನೀಡಬಹುದಾಗಿದೆ ಇದರಿಂದ ನಿಮ್ಮ ಪಾವತಿಗೆ ಎಲ್ಲಾ ರೀತಿಯ ಸುರಕ್ಷತೆಯಿದೆ ಎಂದು ವಾಟ್ಸಪ್ ಸ್ಪಷ್ಟನೆ ಕೊಟ್ಟಿದೆ.

%d bloggers like this: