ನಮ್ಮ ಭಾರತೀಯ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ತುಪ್ಪವನ್ನು ಸೇವಿಸುವುದರಿಂದ ನಮ್ಮ ಬುದ್ಧಿಶಕ್ತಿಯು ಚುರುಕಾಗುತ್ತದೆ, ಆದರೆ ಇತ್ತೀಚಿನ ದಿನಮಾನಗಳಲ್ಲಿ ತುಪ್ಪವನ್ನು ತಿಂದರೆ ಕೊಬ್ಬಿನಾಂಶ ಹೆಚ್ಚಾಗುತ್ತದೆ, ಸ್ಥೂಲಕಾಯ ಉಂಟಾಗುತ್ತದೆ ಎಂದು ತುಪ್ಪ ಸೇವನೆಯಿಂದ ಸಾಕಷ್ಟು ಜನರು ತುಪ್ಪ ಸೇವನೆಯಿಂದ ದೂರವಾಗಿದ್ದಾರೆ. ಆದರೆ ತುಪ್ಪದ ಮಹತ್ವವನ್ನು ಅರಿಯದೆ ತುಪ್ಪವನ್ನು ತಾವೇ ನಿರ್ಭಂದಿಸಿಕೊಂಡು ತಮ್ಮ ದೇಹಕ್ಕೆ ಆಗಬಹುದಾದ ಒಳ್ಳೆಯ ಪರಿಣಾಮಗಳನ್ನು ಕಳೆದುಕೊಂಡಿದ್ದಾರೆ. ಅಂದಹಾಗೆ ತುಪ್ಪವನ್ನು ಉಪಯೋಗಿಸುವುದರಿಂದ ನಮಗೆ ಆರೋಗ್ಯಕರವಾದ ಲಾಭಗಳನ್ನು ನಾವು ಪಡೆದುಕೊಳ್ಳಬಹುದು.

ಕೆಲವರಿಗೆ ದೇಹದಲ್ಲಿ ಕೆಲವು ನ್ಯೂನತೆ ದೋಷಗಳು ಅನಿರೀಕ್ಷಿತವಾಗಿ ಉಂಟಾಗಿರುತ್ತವೆ.ಅಂತಹ ಸಮಸ್ಯೆಗಳ ನಿವಾರಣೆಗಾಗಿ ತುಪ್ಪವನ್ನು ಬಳಸುವುದು ಸೂಕ್ತವಾಗಿದೆ.ಇತ್ತೀಚಿನ ಯುವಕರಲ್ಲಿ ಪಿತ್ತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಯಾವುದೇ ಸಣ್ಣ ಪುಟ್ಟ ವಿಚಾರಗಳಿಗೆ ಏಕಾಏಕಿ ದಿಢೀರನೇ ಕೋಪ ಮಾಡಿಕೊಳ್ಳುವುದು ಸಾಮಾನ್ಯ ಸಹಜವಾಗಿದೆ. ಆದಲೆ ಈ ರೀತಿಯಾಗಿ ಬೇಗ ಕೋಪ ಮಾಡಿಕೊಳ್ಳುದಕ್ಕೆ ಮುಖ್ಯವಾದ ಕಾರಣ ಪಿತ್ತದ ಸಮಸ್ಯೆ ಅವರನ್ನು ಕಾಡುತ್ತದೆ. ಪಿತ್ತ ಸಮಸ್ಯೆಯ ನಿವಾರಣೆಗಾಗಿ ನೀವು ಸೇವಿಸುವ ಆಹಾರದ ಜೊತೆಗೆ ತುಪ್ಪದ ಸೇವನೆ ಮಾಡಿದರೆ ಪಿತ್ತದ ನಿಯಂತ್ರಣದಲ್ಲಿ ತುಪ್ಪ ಪ್ರಮುಖ ಪಾತ್ರವಹಿಸುತ್ತದೆ.

ತುಪ್ಪವನ್ನು ಸೇವಿಸುವುದರಿಂದ ನಿಮ್ಮ ತಾಳ್ಮೆಯು ಪ್ರಬಲವಾಗುತ್ತದೆ. ಇನ್ನು ತುಪ್ಪ ಸೇವನೆಯಿಂದ ನಿಮಗೆ ಗ್ಯಾಸ್ಟಿಕ್ ಸಮಸ್ಯೆಗಳು ದೂರವಾಗುತ್ತದೆ. ಚರ್ಮಕ್ಕೆ ಸಂಬಂಧಪಟ್ಟಂತಹ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.
ತುಪ್ಪವನ್ನು ಪ್ರತಿನಿತ್ಯ ಮಕ್ಕಳಿಗೆ ನೀಡುವುದರಿಂದ ಅವರ ಬುದ್ಧಿಶಕ್ತಿ ಚುರುಕಾಗಿ, ಜ್ಞಾಪಕಶಕ್ತಿಯು ಹೆಚ್ಚಾಗುತ್ತದೆ. ಅಶಕ್ತ ರಾದವರಿಗೆ ತುಪ್ಪದ ಆಹಾರ ತುಂಬಾ ಸಧೃಡ ದೇಹವನ್ನು ನೀಡುತ್ತದೆ. ತುಪ್ಪವನ್ನು ನಿಯಮಿತವಾಗಿ ಬಳಸುವುದರಿಂದ ಮಲಬದ್ಧತೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಜೊತೆಗೆ ತುಪ್ಪವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಅಂಶಗಳು ದೇಹದಲ್ಲಿ ಉಂಟಾಗುವುದಿಲ್ಲ ನಿಮ್ಮ ಆಹಾರದ ಪದ್ಧತಿಯ ಅನುಗುಣವಾಗಿ ದೇಹ ಬದಲಾವಣೆಗೊಳ್ಳುತ್ತದೆ.

ತುಪ್ಪವನ್ನು ಬೆಳಗ್ಗಿನ ಜಾವ ಮತ್ತು ರಾತ್ರಿಯ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ತುಂಬಾ ಪ್ರಯೋಜನವಿದೆ. ಒಂದು ಲೋಟ ಹಾಲಿಗೆ ಒಂದು ಚಮಚ ತುಪ್ಪ ಒಂದು ಚಿಟಿಕೆ ಅರಿಶಿನ ಹಾಕಿ ಬೆಳಗ್ಗೆ ಸಂಜೆ ಕೊಡುವುದರಿಂದ ದೇಹದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕಣ್ಣಿನ ಸಮಸ್ಯೆ ಇದ್ದವರಿಗೆ ತುಪ್ಪ ಸೇವನೆಯಿಂದ ತುಂಬಾ ಪ್ರಯೋಜನವಿದೆ ಎಂದು ಆಯುರ್ವೇದ ವೈದ್ಯರು ತಿಳಿಸುತ್ತಾರೆ.