ಪೊಲೀಸ್ ಇಲಾಖೆಗೆ ಸೇರಿದ್ರು ಎಲ್ಲರ ನೆಚ್ಚಿನ ನಟಿ ರಂಜನಿ ರಾಘವನ್

ಕನ್ನಡದ ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ. ಅದರಲ್ಲೂ ಈ ಧಾರಾವಾಹಿಯಲ್ಲಿ ಗೌರಿ ಪಾತ್ರದಲ್ಲಿ ಮಿಂಚಿದ ರಂಜನಿ ರಾಘವನ್ ಅವರು ಎಲ್ಲರಿಗೂ ಇಷ್ಟ. ಈ ದಾರಾವಾಹಿಯಿಂದ ಎಲ್ಲೆಡೆ ಮನೆಮಾತಾದ ಇವರು ಒಬ್ಬ ಒಳ್ಳೆಯ ನಟಿಯಷ್ಟೇ ಅಲ್ಲ ಜೊತೆಗೆ ಒಳ್ಳೆಯ ಮನಸ್ಸಿರುವ ವ್ಯಕ್ತಿ ಕೂಡ ಎಂದು ಹಲವಾರು ಬಾರಿ ಸಾಬೀತುಪಡಿಸಿದ್ದಾರೆ. ಈಗ ರಂಜನಿಯವರು ನಟನೆಯನ್ನು ಬಿಟ್ಟು ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಅರೆರೆ ಏನಿದು ಆಶ್ಚರ್ಯ ಕೈತುಂಬಾ ಅವಕಾಶಗಳನ್ನಿಟ್ಟುಕೊಂಡು ಕೂಡ ರಜನಿ ಅವರು ಏಕೆ ಪೊಲೀಸ್ ಇಲಾಖೆ ಸೇರಿಕೊಂಡರು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಹೌದು ರಂಜನಿ ಅವರು ಯಾವುದೋ ಒಂದು ಪೊಲೀಸ್ ಪಾತ್ರ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ ಅವರು ನಿಜವಾಗಿಯೂ ತಾತ್ಕಾಲಿಕವಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದಾರೆ. ಸದ್ಯ ಇಡೀ ಜಗತ್ತು ಕೊರೋನಾದಿಂದ ತತ್ತರಿಸಿಹೋಗಿದೆ, ಅದರಲ್ಲೂ ಈಗ ನಮ್ಮ ಬೆಂಗಳೂರಿನ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಹೀಗಾಗಿ ನಮ್ಮನ್ನೆಲ್ಲಾ ಕಾಯುತ್ತಿರುವ ವಿವಿಧ ಕ್ಷೇತ್ರಗಳಲ್ಲಿನ ಕೊರೋನಾ ವಾರಿಯರ್ಸ್ ಕೂಡ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪೊಲೀಸರ ಸಂಖ್ಯೆಗೆ ಬರ ಬಿದ್ದಿದೆ.

ಇಂಥ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಸ್ವಯಂಸೇವಕರನ್ನು ಆಹ್ವಾನಿಸಿದೆ. ಇದನ್ನು ತಿಳಿದು ನಟಿ ರಂಜನಿ ಅವರು ಸೇವೆ ಮಾಡುವ ಮನಸ್ಥಿತಿಯಿಂದ ಈಗ ಸಿವಿಲ್ ಪೋಲಿಸ್ ವಾರ್ಡನ್ ಆಗಿ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ಸ್ವತಃ ರಂಜನಿ ಅವರೇ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದ ಅನೇಕ ಪೊಲೀಸರು ಕ್ವಾರಂಟೈನ್ ಆಗಿದ್ದು ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಜನರ ಸೇವೆ ಅವಶ್ಯಕತೆ ಇದ್ದು ತಾವು ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ನಿಜವಾಗಿಯೂ ರಂಜನಿಯವರ ಈ ಅದ್ಭುತ ಗುಣಕ್ಕೆ ಶಹಭಾಷ್ ಎನ್ನಲೇಬೇಕು. ಏಕೆಂದರೆ ಸದ್ಯ ಧಾರವಾಹಿಗಳಲ್ಲಿ ಬಿಜಿಯಾಗಿದ್ದರೂ ಕೂಡ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ರಂಜನಿ ಅವರು ರಾಜಹಂಸ ಎಂಬ ಕನ್ನಡ ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದಾರೆ ಜೊತೆಗೆ ಸದ್ಯಕ್ಕೆ ಕನ್ನಡತಿ ಎಂಬ ಧಾರಾವಾಹಿಯಲ್ಲಿ ತಮ್ಮ ನಟನೆಯ ಮೂಲಕ ಮಿಂಚುತ್ತಿದ್ದಾರೆ.

%d bloggers like this: