ನಟಿ ರಾಧಿಕಾ ಕುಮಾರಸ್ವಾಮಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ನಟಿಯಾಗಿ ನಿರ್ಮಾಪಕಿಯಾಗಿ ಕನ್ನಡದಲ್ಲಿ ಉತ್ತಮ ಸ್ಥಾನವನ್ನು ಪಡೆದಿದ್ದಾರೆ ನಟಿ ರಾಧಿಕಾ. ಕೆಲವು ತಿಂಗಳುಗಳ ಹಿಂದೆ ತಮ್ಮ ಸಿನಿಮಾ ಚಿತ್ರೀಕರಣದಿಂದ ಸುದ್ದಿಯಲ್ಲಿದ್ದ ರಾಧಿಕಾ ಕುಮಾರಸ್ವಾಮಿ ಅವರು ಈಗ ಮತ್ತೆ ಬೇರೊಂದು ವಿಷಯದಲ್ಲಿ ಸುದ್ದಿ ಮಾಡುತ್ತಿದ್ದಾರೆ.
ಹೌದು ನಟಿ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದಕ್ಕೆ ಕಾರಣ ಅವರ ಅಭಿನಯದ ಒಂದು ಚಿತ್ರದ ವಿಷಯವಾಗಿ. ಹೌದು ರಾಧಿಕಾ ಕುಮಾರಸ್ವಾಮಿ ಅವರು ನಟಿಸಿ ನಿರ್ಮಿಸಿರುವ 2013ರಲ್ಲಿ ತೆರೆಕಂಡ ಸ್ವೀಟಿ ನನ್ನ ಜೋಡಿ ಚಿತ್ರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಚಿತ್ರದ ನಿರ್ಮಾಪಕಿಯಾಗಿರುವ ರಾಧಿಕಾ ಅವರ ಅನುಮತಿಯನ್ನು ಪಡೆಯದೆ ಸ್ವೀಟಿ ನನ್ನ ಜೋಡಿ ಚಿತ್ರವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆಯಂತೆ. ಇದೇ ವಿಷಯವಾಗಿ ಬೆಂಗಳೂರು ಉತ್ತರ ವಿಭಾಗದ ಠಾಣೆಯಲ್ಲಿ ರಾಧಿಕಾ ದೂರು ದಾಖಲಿಸಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ನಾಯಕನಟನಾಗಿ ಖ್ಯಾತ ನಟ ಆದಿತ್ಯ ಅಭಿನಯಿಸಿದ್ದರು, ಜೊತೆಗೆ ರಮ್ಯಕೃಷ್ಣ ಗಿರೀಶ್ ಕಾರ್ನಾಡ್ ಜೈಜಗದೀಶ್ ಅಂತಹ ತಾರಾಬಳಗವನ್ನು ಹೊಂದಿತ್ತು ಈ ಚಿತ್ರ.