ಪೂಜೆ ಮಾಡುವಾಗ ಇವುಗಳನ್ನು ತಪ್ಪದೆ ಪಾಲಿಸಬೇಕು

ದೇವರ ಕೋಣೆಯಲ್ಲಿ ಮತ್ತು ಪೂಜಾ ಸಮಯದಲ್ಲಿ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಆದರೆ ಈ ನಿಯಮಗಳ ಬಗ್ಗೆ ಕೆಲವರಿಗೆ ಅರಿವಿರುತ್ತದೆ ಇನ್ನು ಕೆಲವರಿಗೆ ಇದರ ಮಹತ್ವ ಹಿನ್ನೆಲೆ ತಿಳಿದಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಈ ನಿಯಮಗಳ ಬಗ್ಗೆಭಕ್ತಿಗಿಂತ ಆಲಸ್ಯತನವೇ ಹೆಚ್ಚಾಗಿರುತ್ತದೆ, ಈ ನೇಮ ನಿಯಮಗಳನ್ನು ಪಾಲಿಸುವುದರಿಂದ ಬೇಗ ಭಗವಂತನ ಕೃಪೆಗೆ ಪಾತ್ರರಾಗುತ್ತೀರಿ. ನಿಮ್ಮ ಮನೆಯಲ್ಲಿ ಅದೃಷ್ಟ, ಅಷ್ಟ ಐಶ್ವರ್ಯ ಲಭಿಸುತ್ತದೆ. ಇನ್ನು ದೇವರ ಪೂಜಾ ಸಾಮಗ್ರಿಗಳನ್ನು ಆದಷ್ಟು ಶುಭ್ರವಾಗಿ ಇಟ್ಟಿರಬೇಕು, ದೇವರ ಕೋಣೆಯಲ್ಲಿ ಒಡೆದು ಹೋಗಿರುವ ದೇವರ ಫೋಟೋ ಇಡಕೂಡದು. ವಿಗ್ರಹಗಳನ್ನು ಕೂಡ ಇಡಕೂಡದು.

ದೇವರ ಕೋಣೆಯನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು, ಈ ಸ್ವಚ್ಛಗೊಳಿಸುವಾಗ ಪೊರಕೆಯನ್ನು ಬಳಸಲೇಬಾರದು. ಬಟ್ಟೆಯಿಂದ ಅರಿಶಿನದ ನೀರನ್ನು ಬಳಸಿ ಸ್ವಚ್ಛಗೊಳಿಸಿದರೆ ಸಾಕ್ಷಾತ್ ಮಹಾಲಕ್ಷ್ಮಿಗೆ ಪ್ರಿಯರಾಗುತ್ತೀರಿ. ಜೊತೆಗೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ತಾಂಡವವಾಡುತ್ತಾಳೆ. ದೇವರ ಕೋಣೆಯಲ್ಲಿ ಹೆಚ್ಚು ವಿಗ್ರಹಗಳನ್ನು ಇಡಬಾರದು ಒಂದುವೇಳೆ ಇಟ್ಟಿದ್ದೆ ಆದರೆ ಅದಕ್ಕೆ ಕೆಲವು ನೈವೇದ್ಯಗಳನ್ನು ಅರ್ಪಿಸ ಬೇಕಾಗುತ್ತದೆ.

ಈ ಮಂಗಳವಾರ, ಶುಕ್ರವಾರ ಮತ್ತು ಶನಿವಾರದಂದು ವಿಗ್ರಹ ಅಥವಾ ದೇವರಫೋಟೋಗಳನ್ನು ಸ್ವಚ್ಛಗೊಳಿಸಬಾರದು. ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ಅರಿಶಿಣದ ನೀರಿನಿಂದ ಫೋಟೋಗಳನ್ನು ಸ್ವಚ್ಛಗೊಳಿಸಬೇಕು. ಇನ್ನು ದೇವರ ಪೂಜೆ ಮಾಡುವಾಗ ಆಕಳಿಸುವುದು, ಕೋಪದಿಂದ ಇರುವುದು ಕೋಪದಲ್ಲಿ ಅಸ್ಪಷ್ಟ ಮಂತ್ರ ಹೇಳುವುದು ಉಚಿತವಲ್ಲ.

ಮನೆಯಲ್ಲಿ ಸಂಧ್ಯಾವಂದನೆ ಮಾಡದೆ ನೀವು ಮಾಡುವಂತಹ ನೇಮ ನಿಯಮಗಳು ದೇವರಿಗೆ ತೃಪ್ತಿ ತರುವುದಿಲ್ಲ. ದೇವರ ಪೂಜೆ ಮಾಡುವಾಗ ನಿಮ್ಮ ಮೇಲೆ ವಸ್ತ್ರ ಇರಲೇಬೇಕು ಬರಿ ಮೈ ಯಿಂದ ಪೂಜಿಸುವುದು ಸೂಕ್ತವಲ್ಲ. ಇನ್ನು ಪೂಜಾ ಸಮಯದಲ್ಲಿ ಹಣೆಯಲ್ಲಿ ಕುಂಕುಮ ಅಥವಾ ಗಂಧ ಇಟ್ಟಿರಬೇಕು. ವಿಗ್ರಹಗಳನ್ನು ಪೂಜಿಸುವಾಗ ಹಾಲನ್ನು ಬಳಸಬಾರದು ಜೊತೆಗೆ ಎಲೆಅಡಿಕೆಯ ಇಟ್ಟು ಸಂಕಲ್ಪ ಮಾಡಿ ಪೂಜಿಸಿದರೆ ಒಳ್ಳೆಯದು.

ಇನ್ನು ದೇವರ ಮನೆಯಲ್ಲಿ ಸದಾ ದೀಪ ಬೆಳಗುತ್ತಿರಬೇಕು. ದೀಪಗಳು ಚಿಕ್ಕದಾದರೆ ಕ್ರಮವಾಗಿ ಜೋಡಿಸಿರಬೇಕು ಇಲ್ಲ ದೊಡ್ಡದಾದ 2 ದೀಪದ ಕಂಬ ಗಳಿದ್ದರೆ ಎಡ-ಬಲ ದಲ್ಲಿ ಇರಿಸಬೇಕು. ಗಣಪತಿಯ ಪೂಜೆ, ಮನೆದೇವರ ಪೂಜೆ ಸಂಪೂರ್ಣವಾಗಿ ನೆರವೇರಿಸಬೇಕು. ನಿಮ್ಮ ಸಂಕಷ್ಟಗಳಿಗೆ ಪರಿಹಾರ ನೀಡುವುದು ನಿಮ್ಮ ಮನೆಯ ದೇವರು ಆದ್ದರಿಂದ ಆದಷ್ಟು ನಿಮ್ಮನೆ ದೇವರುಗಳಿಗೆ ಸಕಾಲಕ್ಕೆ ಸರಿಯಾಗಿ ಪೂಜೆ ಸಲ್ಲಿಸಬೇಕು.

ಹೊಸ್ತಿಲ ಮೇಲೆ ಲಕ್ಷ್ಮಿಯ ಸಾನಿಧ್ಯ ಇರುವುದರಿಂದ ಹೊಸ್ತಿಲ ಮೇಲೆ ಕೂರಬಾರದು ನಿಲ್ಲಬಾರದು, ಪೊರಕೆಯನ್ನು ತಾಕಿಸಬಾರದು. ಇನ್ನು ದೇವರ ಕೋಣೆಯಲ್ಲಿ ಕಡ್ಡಾಯವಾಗಿ ಶ್ರೀಚಕ್ರ, ಗಣಪತಿ,ಮಹಾಲಕ್ಷ್ಮಿ, ಸಾಲಿಗ್ರಾಮ ದೇವತೆಗಳನ್ನು ಪೂಜಿಸುವುದರಿಂದ ಅದೃಷ್ಟ ಲಭಿಸುತ್ತದೆ. ಆದ್ದರಿಂದ ನೀವು ಕಡ್ಡಾಯವಾಗಿ ದೇವರಕೋಣೆಯಲ್ಲಿ ಈ ದೇವರ ಫೋಟೋಗಳನ್ನು ಇಡಬೇಕು.

%d bloggers like this: