ಪೂರ್ತಿ ಮಹಿಳಾ ಪ್ರಧಾನ ಪಾತ್ರದಲ್ಲಿ ಸ್ಟಾರ್ ನಟಿ, ಬಿಡುಗಡೆಗೆ ಸಿದ್ಧವಾಯಿತು ಬಹು ನಿರೀಕ್ಷಿತ ಚಿತ್ರ

ಬಾಲಿವುಡ್ನ ಖ್ಯಾತ ನಟಿ ಅಲಿಯಾ ಭಟ್ ತಮ್ಮ ಮುಂದಿನ ಪ್ರಾಜೆಕ್ಟ್ ನಲ್ಲಿ ವಿಶಿಷ್ಟ ಪಾತ್ರವೊಂದನ್ನು ಧರಿಸಿ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದರ್ಪಣೆ ಮಾಡಿದ ನಟಿ ಆಲಿಯಾ ಭಟ್, ತಮ್ಮ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡು ಸುದ್ದಿಯಾದವರು. ಅವರ ಮೊದಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ ಭರ್ಜರಿ ಯಶಸ್ಸು ಕಂಡಿತು. ಅಂದಿನಿಂದ ಇಂದಿನ ವರೆಗೂ ಆಲಿಯಾ ತಮ್ಮ ಸಿನಿಪಯಣದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ಅವರ ಎಲ್ಲ ಪ್ರಾಜೆಕ್ಟ್ ಗಳು ಸಕ್ಸಸ್ ಕಂಡವು. ಅವರ ವಿಭಿನ್ನ ಪಾತ್ರಗಳನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡರು. ಹಲವಾರು ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿದ ಇವರು, ತಮಗೆ ಕೊಟ್ಟ ಎಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದವರು.

ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಸಿಕೊಂಡ ಈ ನಟಿ, ಬ್ಯಾಕ್ ಟು ಬ್ಯಾಕ್ ಒಳ್ಳೊಳ್ಳೆ ಪಾತ್ರಗಳನ್ನು ನಿಭಾಯಿಸಿದರು. ಇವರ ಸಿನಿ ಕೇರಿಯರ್ಗೆ ಯುಟರ್ನ್ ಕೊಟ್ಟಂತಹ ಸಿನಿಮಾಗಳೆಂದರೆ ಪ್ರಸಿದ್ಧ ಕಾದಂಬರಿಕಾರ ಚೇತನ್ ಭಗತ್ ಅವರ ಕಾದಂಬರಿ ಆಧಾರಿತ ಹೈವೆ, ಟೂ ಸ್ಟೇಟ್ಸ್ ಚಿತ್ರಗಳು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದಂತಹ ಸಿನಿಮಾಗಳು. ಆನಂತರ ಗಲ್ಲಿಬಾಯ್, ಉಡ್ತಾ ಪಂಜಾಬ್, ರಾಝಿ ಚಿತ್ರಗಳಿಗಾಗಿ ಅತ್ಯುತ್ತಮ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಪೆಟಾ ಇಂಡಿಯಾ ವರ್ಷದ ವ್ಯಕ್ತಿಯಾಗಿ ಅಲಿಯಾ ಭಟ್ ಸೆಲೆಕ್ಟ್ ಆಗಿದ್ದಾರೆ. ಇತ್ತೀಚಿಗೆ ರಾಜಮೌಳಿ ನಿರ್ದೇಶನದ ಥ್ರಿಬಲ್ ಆರ್ ಚಿತ್ರದಲ್ಲಿ ಆಲಿಯಾ ನಟಿಸಿದ್ದು, ಇದು ಹಿಂದಿ ಮಾತ್ರವಲ್ಲದೇ, ಕನ್ನಡ, ತೆಲುಗು, ತಮಿಳು ಹೀಗೆ ಬೇರೆ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ.

ಥ್ರಿಬಲ್ ಆರ್ ಚಿತ್ರದ ಚಿತ್ರೀಕರಣ ಮುಗಿದಿದ್ದು, ರಿಲೀಸ್ ಆಗುವುದೊಂದೇ ಬಾಕಿ. ಇಷ್ಟೆಲ್ಲ ವಿಭಿನ್ನ ಪಾತ್ರಗಳನ್ನು ನಿಭಾಯಿಸಿದ ಅಲಿಯಾ ಇದೀಗ ಮತ್ತೆ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಹೌದು ಇತ್ತೀಚಿಗೆ ಅವರ ಹೊಸ ಚಿತ್ರದ ಮೊದಲ ಪೋಸ್ಟರ್ ಒಂದು ಬಿಡುಗಡೆಯಗಿದ್ದು, ಅಲಿಯಾ ಅವರ ಹೊಸ ಚಿತ್ರದ ಫೋಟೋ ನೋಡಿ ಎಲ್ಲರೂ ಕುತೂಹಲ ವ್ಯಕ್ತಪಡಿಸಿದ್ದಾರೆ. ಹೌದು ಹೊಸ ಲುಕ್ ನಲ್ಲಿ ಅಲಿಯಾ ಅವರು ಶ್ವೇತ ಬಣ್ಣದ ಸೀರೆಯುಟ್ಟು, ಹಣೆಗೆ ದೊಡ್ಡದಾಗಿ ಕೆಂಪು ಕುಂಕುಮ ತೊಟ್ಟು, ಗಂಭೀರವಾದ ಲುಕ್ ನೊಂದಿಗೆ ಫೋಟೋಗೆ ಪೋಸ್ ನೀಡಿರುವ ಅಲಿಯಾ ಎಲ್ಲರೂ ಹುಬ್ಬರಿಸುವಂತೆ ಮಾಡಿದ್ದಾರೆ. ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ಗಂಗೂಬಾಯಿಯ ಪಾತ್ರ ನಿರ್ವಹಿಸುತ್ತಿರುವ ಅಲಿಯಾ, ಗಂಗೂ ಬರುತ್ತಿದ್ದಾಳೆ ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದೇ ಫೆಬ್ರವರಿ 25ರಂದು ಸಿನಿಮಾ ತೆರೆಕಾಣಲಿದ್ದು, ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಾಗಿದೆ.

%d bloggers like this: