ಪೊರಕೆಯನ್ನು ಮನೆಯಲ್ಲಿ ಈ ದಿಕ್ಕಿನಲ್ಲಿ ಇಟ್ಟರೆ ಹಣದ ಹರಿವು ಜಾಸ್ತಿ ಆಗುವುದು

ನಿಮ್ಮ ಮನೆಯ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತು ಎಂಬುದನ್ನು ನೀವು ತಿಳಿದುಕೊಂಡರೆ ನಿಮ್ಮ ಮನೆಯ ದಾರಿದ್ರ್ಯತನ ದೂರವಾಗುತ್ತದೆ. ಹೌದು ಮನೆಯ ಸ್ವಚ್ಚತೆಗೆ ಬಳಸುವ ಪೊರಕೆಯನ್ನು ಸಾಕ್ಷಾತ್ ಲಕ್ಷ್ಮಿಯ ಪ್ರತಿರೂಪ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಲಕ್ಷ್ಮಿಯು ಸ್ಥಿರವಾಗಿ ನಿಲ್ಲಬೇಕಾದರೆ ಪೊರಕೆಯನ್ನು ಇಡುವ ಪದ್ದತಿಯನ್ನು ಬದಲಾಯಿಸಬೇಕಾಗಿದೆ. ಯಾರ ಮನೆಯಲ್ಲಿ ಶಿಸ್ತು,ಸ್ವಚ್ಚತೆ ಇರುವುದಿಲ್ಲವೋ ಅಂತಹವರ ಮನೆಯಲ್ಲಿ ಲಕ್ಷ್ಮಿಯು ನಿಲ್ಲುವುದಿಲ್ಲ. ಪೊರಕೆಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಅದರ ಮಹತ್ವವನ್ನು ಅರಿಯುವುದು ಉತ್ತಮವಾಗಿರುತ್ತದೆ. ಕಾರಣ ಲಕ್ಷ್ಮಿಯ ಪ್ರತಿರೂಪ ಈ ಪೊರಕೆ ಇದನ್ನು ನೀವು ಹೇಗೆ ಬಳಸುತ್ತಿರೋ ಹಾಗೇ ಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲಿರುತ್ತದೆ.

ಪೊರಕೆಯನ್ನು ಎಲ್ಲೆಂದರಲ್ಲಿ ಇಡಬಾರದು ಅದಕ್ಕೆ ಪ್ರತ್ಯೇಕವಾಗಿ ಸ್ಥಾನ ಗುರುತಿಸಿ ಮತ್ತೊಬ್ಬರ ಕಣ್ಣಿಗೆ ಕಾಣದಂತೆ ಅದನ್ನು ಇಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಪಶ್ಚಿಮದ ದಿಶೆಯಲ್ಲಿ ಇಟ್ಟರೆ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ. ಊಟ ಮಾಡುವ ಸ್ಥಳದಲ್ಲಿ,ಅಡುಗೆ ಕೋಣೆಯಲ್ಲಿ ಈ ಪೊರಕೆಯನ್ನು ಇಡಬಾರದು. ಇಟ್ಟರೆ ಮನೆಗೆ ದಾರಿದ್ರ್ಯತನ ಹುಟ್ಟುತ್ತದೆ ಧನ ಧಾನ್ಯಗಳ ಕೊರತೆ ಉಂಟಾಗುತ್ತದೆ. ಮನೆ ಬಾಗಿಲ ಮುಖ್ಯ ದ್ವಾರದ ಮುಂಭಾಗ ರಾತ್ರಿಯ ಸಮಯದಲ್ಲಿ ಮಾತ್ರ ಪೊರಕೆಯನ್ನು ಇಡಬೇಕು ಇದರಿಂದ ನಕರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸದಂತೆ ಪೊರಕೆಯು ಮಾಡುತ್ತದೆ. ಆದರೆ ಬೆಳಿಗ್ಗೆಯ ಸಮದಲ್ಲಿ ಇದನ್ನು ಇಡಬಾರದು.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾತಃ ಕಾಲದಲ್ಲಿ ಮನೆಯ ಅಂಗಳ ಸ್ವಚ್ಚಗೊಳಿಸಿ ರಂಗೋಲಿ ಹಾಕುವುದು ನಮ್ಮ ಸಂಪ್ರದಾಯ ಇದರಿಂದ ನಿಮ್ಮ ಮನೆಗೆ ದೇವಾನು ದೇವತೆಗಳ ಆಗಮನ ವಾಗುವ ಅವಕಾಶ ಇರುತ್ತದೆ. ಇನ್ನು ಸಂಜೆಯ ಹೊತ್ತಲ್ಲಿ ಕಸ ಗೂಡಿಸುವ ಪದ್ದತಿ ಕೈಬಿಡಬೇಕು ಕಾರಣ ಸಂಜೆಯ ಸಮಯ ಕಸ ಗುಡಿಸಿದರೆ ಮನೆಯೂ ಸಹ ಗೂಡಿಸಿದಂತೆ ಆಗುತ್ತದೆ ಅಂದರೆ ಲಕ್ಷ್ಮಿಯು ಮನೆಯಿಂದ ನಿರ್ಗಮನ ಮಾಡುತ್ತಾಳೆ ಎಂದು ಹೇಳುತ್ತಾರೆ.

ಪೊರಕೆಯು ಹಳೆಯದಾಗಿದ್ದು, ಹೊಸ ಪೊರಕೆಯನ್ನು ಖರೀದಿಸುವುದಾದರೆ ಶನಿವಾರ ಉತ್ತಮವಾದ ದಿನವಾಗಿರುತ್ತದೆ. ಇನ್ನು ಮನೆಯಲ್ಲಿ ಮೋಟು ಮುರಿದ ಪೊರಕೆಯನ್ನು ಇಡಬಾರದು. ಅದನ್ನು ತುಳಿಯುವುದು ಅದರ ಮೇಲೆ ನಿಲ್ಲುವಂತಹ ಅವಲಕ್ಷಣಗಳನ್ನು ಮಾಡಬಾರದು ಎಂದು ವಾಸ್ತು ಶಾಸ್ತ್ರಜ್ಞರು ತಿಳಿಸುತ್ತಾರೆ. ಈ ರೀತಿಯ ಪೊರಕೆ ನಿಯಮಗಳನ್ನು ಪಾಲಿಸುವುದರಿಂದ ಮನೆಯ ದಾರಿದ್ರ್ಯತನ ದೂರವಾಗಿ ಮನೆಯಲ್ಲಿ ಸಿರಿ ಸಂಪತ್ತು ಐಶ್ವರ್ಯ ವೃದ್ದಿಯಾಗುತ್ತದೆ.

%d bloggers like this: