ಪೋಷಕರ ಗಮನಕ್ಕೆ, ಈ ದಿನದಂದು ಕರ್ನಾಟಕದಲ್ಲಿ ಶಾಲಾ ಕಾಲೇಜುಗಳು ಆರಂಭ

ಈ ಕೋವಿಡ್ ಮಹಾಮಾರಿಯ ಸಲುವಾಗಿ ಜಗತ್ತಿನ ಸ್ಥಿತಿಗತಿಗಳ ಅಲ್ಲೋಲಕಲ್ಲೋಲ ಆಗಿಬಿಟ್ಟಿವೆ. ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಮೊದಲಿನಿಂದ ರೂಢಿಯಲ್ಲಿದೆ ಒಂದು ಕ್ರಮಬದ್ಧ ವ್ಯವಸ್ಥೆ ಲಯ ತಪ್ಪಿದಂತಾಗಿದೆ. ಅದರಲ್ಲಿ ಮುಖ್ಯವಾಗಿ ಶಿಕ್ಷಣ ಕ್ಷೇತ್ರ, ಹೌದು ಒಬ್ಬ ವ್ಯಕ್ತಿಯನ್ನು ಸಮಾಜಮುಖಿ ನಾಗರಿಕನನ್ನಾಗಿ ಮಾಡುವ ಬಹುಮುಖ್ಯ ಶಕ್ತಿಯೆಂದರೆ ಅದು ಶಿಕ್ಷಣ. ಈ ಶಿಕ್ಷಣ ವ್ಯವಸ್ಥೆ ಹಿಂದೆಂದೂ ಕಾಣದ ಒಂದು ವೈರಸ್ ಮಹಾಮಾರಿಯಿಂದ ಗೊಂದಲಮಯವಾಗಿ ಬಿಟ್ಟಿದೆ.

ಶಾಲೆಗೆ ಹೋಗಿ ಶಿಕ್ಷಕರ ಸನಿಹದಲ್ಲಿ ಕುಳಿತು ಪ್ರೀತಿಯಿಂದ ಪಾಠ ಕೇಳಬೇಕಾಗಿದ್ದ ಮಕ್ಕಳು ಮೊಬೈಲ್ ಲ್ಯಾಪ್ಟಾಪ್ ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮುಂದೆ ಕುಳಿತು ಶಿಕ್ಷಣ ಕಲಿಯಬೇಕಾದ ಪರಿಸ್ಥಿತಿ ಬಂದಿದ್ದು ನಿಜಕ್ಕೂ ವಿಪರ್ಯಾಸ. ಆದರೆ ಇದೀಗ ಸ್ವಲ್ಪ ಕಾರ್ಮೋಡ ಸರಿದಂತಾಗಿದೆ. ಹೌದು ರಾಜ್ಯದೆಲ್ಲೆಡೆ ಕೋರೋಣ ಸೋಂಕಿತರ ಪ್ರಮಾಣ ನಿಯಂತ್ರಣಕ್ಕೆ ಬಂದಿದ್ದು ಸೋಂಕಿತರ ಸಂಖ್ಯೆ ಇಳಿಮುಖದತ್ತ ಸಾಗಿದೆ.

ಇದೇ ಕಾರಣಕ್ಕೆ ಇಂದು ಶಾಲಾ ಕಾಲೇಜುಗಳನ್ನು ಆರಂಭಿಸುವ ಧೈರ್ಯವನ್ನು ಮಾಡುತ್ತಿದೆ ಸರಕಾರಗಳು. ಹೌದು ಕೆಲವು ದಿನಗಳ ಹಿಂದೆ ಶಿಕ್ಷಣ ಹಾಗೂ ಆರೋಗ್ಯ ತಜ್ಞರ ಅಭಿಪ್ರಾಯ ಪಡೆದು ಜನೆವರಿ 1 ರಂದು ಶಾಲಾ ಕಾಲೇಜುಗಳನ್ನು ಆರಂಭಿಸುವ ಯೋಜನೆ ಮಾಡಿಕೊಳ್ಳಲಾಗಿತ್ತು. ಆದರೆ ಬ್ರಿಟನ್ನಲ್ಲಿ ಹೊಸದಾಗಿ ಕಂಡುಬಂದ ರೂಪಾಂತರಿ ಕರೋನಾ ಮತ್ತೆ ಎಲ್ಲರಲ್ಲೂ ಆತಂಕ ಮತ್ತು ಗೊಂದಲವನ್ನು ಶುರು ಮಾಡಿತ್ತು. ಆದರೆ ಈ ಕುರಿತು ಮಾತನಾಡಿದ ಯಡಿಯೂರಪ್ಪ ಅವರು ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಹೌದು ಮಾತನಾಡಿದ ಯಡಿಯೂರಪ್ಪ ಅವರು ಮೊದಲೇ ನಿಗದಿಯಾದಂತೆ ಜನೆವರಿ ಒಂದರಿಂದಲೇ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ ಅವರು ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಮೊದಲೇ ನಿರ್ಧರಿಸಿದಂತೆ ಜನವರಿ ಒಂದರಿಂದ 10 ಮತ್ತು 12 ನೇ ತರಗತಿಗಳನ್ನು ಆರಂಭಿಸಲಾಗುವುದು ಎಂದು ಪೋಷಕರಲ್ಲಿ ಗೊಂದಲಗಳಿಗೆ ಉತ್ತರ ನೀಡಿದ್ದಾರೆ

%d bloggers like this: