ಪೋಷಕರ ಗಮನಕ್ಕೆ, ಕರ್ನಾಟಕದಲ್ಲಿ ಶಿಕ್ಷಕರಿಗೆ ಕಾಡುತ್ತಿದೆ ಕೊರೊನ

ಶಾಲಾ ಕಾಲೇಜು ಆರಂಭವಾದ ಮೊದಲ ದಿನದಲ್ಲೇ ರಾಜ್ಯಾದ್ಯಂತ ಬರೋಬ್ಬರಿ ಇಪ್ಪತ್ತೈದು ಶಿಕ್ಷಕರಿಗೆ ಕೊರೋನ ಸೋಂಕು ಧೃಡ! ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಆತಂಕ ಪಡುತ್ತಿದ್ದಾರೆ, ಕೊರೋನವೈರಸ್ ಜೊತೆಗೆ ರೂಪಾಂತರಿ ವೈರಸ್ ಹರಡುವ ಭೀತಿಯ ವಾತಾವರಣದ ನಡುವೆ ರಾಜ್ಯ ಸರ್ಕಾರ ವಿಧ್ಯಾರ್ಥಿಗಳ ಭವಿಷ್ಯ ದೃಷ್ಠಿಯಿಂದ ಶಾಲಾ ಕಾಲೆಜುಗಳನ್ನು ಆರಂಭಿಸಿತು. ಎಲ್ಲಾ ಶಾಲೆಯಲ್ಲಿ ವಿಧ್ಯಾರ್ಥಿ ಗಳನ್ನು ಸಂಭ್ರಮದಿಂದ ಬರಮಾಡಿಕೊಂಡು ಎಲ್ಲಾ ರೀತಿಯ ಕೊರೋನ ಮಾರ್ಗ ಸೂಚಿಯನ್ನು ಅನುಸರಿಸ ಲಾಗುತ್ತಿದೆ.

ಶಾಲಾ ಕಾಲೇಜು ಸಿಬ್ಬಂದಿ ಸೇರಿದಂತೆ ಎಲ್ಲಾ ವಿಧ್ಯಾರ್ಥಿಗಳು ಮತ್ತು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಮೊದಲು ಕೊರೊನ ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿತ್ತು. ಅದರಂತೆಯೇ ಪರೀಕ್ಷೆ ಮಾಡಿಸಿ ನೆಗೆಟೀವ್ ವರದಿ ಬಂದ ನಂತರ ಶಿಕ್ಷಕರು ಕರ್ತವ್ಯಕ್ಕೆ ಮರಳಿದ್ದರು, ಆದರೆ ನಿನ್ನೆ ಒಂದೇ ದಿನದಲ್ಲಿ ರಾಜ್ಯದ ಇಪ್ಪತ್ಮೂರು ಶಾಲೆ ಶಿಕ್ಷಕರಿಗೆ ಹಾಗೂ ಇಬ್ಬರು ಕಾಲೇಜಿನ ಉಪನ್ಯಾಸಕರಿಗೆ ಒಟ್ಟಾರೆಯಾಗಿ ಇಪ್ಪತ್ತೈದು ಜನರಿಗೆ ಕೊರೋನ ಸೋಂಕು ಧೃಡಪಟ್ಟಿರುವುದು ಮಕ್ಕಳ ಪೋಷಕರಲ್ಲಿ ಕಳವಳ ಹೆಚ್ಚಾಗಿದೆ. ಶಾಲೆ ಆರಂಭವಾದ ಇದೂವರೆಗೂ ಮೂವತ್ತೈದು ಭೋಧಕ ಸಿಬ್ಬಂದಿ ಹಾಗೂ ನಾಲ್ಕು ವಿಧ್ಯಾರ್ಥಿಗಳಿಗೆ ಸೋಂಕು ತಗುಲಿದೆ.

ರಾಜ್ಯವಾರು ಕೊರೋನ ಸೋಂಕು ತಗುಲಿದ ಶಿಕ್ಷಕರ ಸಂಖ್ಯೆ ಗಮನಿಸುವುದಾದರೆ ಚಿತ್ರದುರ್ಗ ಏಳು, ಶಿವಮೊಗ್ಗದಲ್ಲಿ ನಾಲ್ವರು, ಚಿಕ್ಕ ಮಗಳೂರು ಐದು, ಉತ್ತರ ಕನ್ನಡ, ಹಾವೇರಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಇಬ್ಬರು ಶಿಕ್ಷಕರಿಗೆ ಸೋಂಕು ತಗುಲಿದರೆ ಕೊಪ್ಪಳ, ಬಳ್ಳಾರಿಯಲ್ಲಿ ತಲಾ ಒಬ್ಬರಿಗೆ ಹಾಗೂ ಯಾದಗಿರಿಯ ಇಬ್ಬರು ಕಾಲೇಜು ಉಪನ್ಯಾಸ ಕರಿಗೆ ಕೊರೋನ ಸೋಂಕು ಧೃಡಪಟ್ಟಿರುವುದು ತಿಳಿದು ಬಂದಿದೆ.

ರಾಜ್ಯದಲ್ಲಿ ಶಾಲಾ ಕಾಲೇಜು ಆರಂಭವಾಯಿತು ಇನ್ನು ಮುಂದೆ ಮಕ್ಕಳು ಶಾಲೆ ಹೋಗಬಹುದು ಎಂದು ನಿಟ್ಟುಸಿರು ಬಿಟ್ಟಿದ್ದ ಅದೆಷ್ಟೋ ವಿಧ್ಯಾರ್ಥಿಗಳ ಪೋಷಕರು ಇದೀಗ ಮಕ್ಕಳನ್ನು ಶಾಲೆಗೆ ಕಳಿಸಬೇಕೋ ಬೇಡವೋ ಎಂಬ ಆತಂಕ ದಲ್ಲಿದ್ದಾರೆ.

%d bloggers like this: