ಮೊದಲೆಲ್ಲ ಮಕ್ಕಳು ಶಾಲೆಗೆ ಹೋದರೆ ಸಾಕಪ್ಪ ಎನ್ನುವ ಮಾತಿತ್ತು, ಏಕೆಂದರೆ ಯಾವುದೇ ರೀತಿಯ ಖಾಸಗಿ ಶಾಲೆಗಳರಲಿಲ್ಲ ಬದಲಾಗಿ ಎಲ್ಲರೂ ಸರಕಾರಿ ಶಾಲೆಗಳಿಗೆ ಹೋಗಬೇಕಾಗಿತ್ತು. ಆದರೆ ಇದೀಗ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ, ಸರಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗಿಂತ ಖಾಸಗಿ ಶಾಲೆಗಳನ್ನು ಅಪ್ಪಿಕೊಂಡಿರುವ ಜನರೇ ಬಹಳ. ಸಾವಿರ ಲಕ್ಷ ರೂಪಾಯಿಗಳಶ್ಟು ಫೀಸ್ ಇದ್ದರು ಸಹ ಪೋಷಕರು ಖಾಸಗಿ ಶಾಲೆಗಳ ಮೊರೆಹೋಗುತ್ತಾರೆ. ದಿನಕಳೆದಂತೆ ಶಿಕ್ಷಣ ವ್ಯಾಪಾರ ವಾಗುತ್ತಿರುವುದು ಎಲ್ಲರಿಗೂ ಗಮನಕ್ಕೆ ಬರುತ್ತಿದೆ.

\ಆದರೆ ಆಳವಾಗಿ ಬೇರೂರಿರುವ ಈ ವ್ಯವಸ್ಥೆಯನ್ನು ಸರಿಪಡಿಸಲು ಅಷ್ಟು ಬೇಗ ಸಾಧ್ಯವಾಗುವುದಿಲ್ಲ. ಅದರಲ್ಲೂ ಈ ಕೋರೋಣ ಹೆಮ್ಮಾರಿ ಇಂದ ಅಕ್ಷರಶಹ ನಮ್ಮ ದೇಶ ನಲುಗಿ ಹೋಗಿತ್ತು. ಬಡವರ ಮತ್ತು ಮಧ್ಯಮವರ್ಗದ ಸ್ಥಿತಿ ಶೋಚನೀಯವಾಗಿತ್ತು. ಆದರೆ ಈಗ ಪರಿಸ್ಥಿತಿ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರುತ್ತಿದ್ದು ಮತ್ತೆ ಶಾಲಾ ಕಾಲೇಜುಗಳು ಆರಂಭವಾಗುತ್ತಿದೆ. ಆದರೆ ಕೋರೋಣ ಕಾರಣದಿಂದ ಆರ್ಥಿಕ ಸಂಕಷ್ಟ ಎದುರಿಸಿರುವ ಪೋಷಕರಿಗೆ ಇದೀಗ ಖಾಸಗಿ ಶಾಲೆಗಳು ಹೇರುವ ಫೀಸ್ ಕಟ್ಟುವ ಚಿಂತೆ ದೊಡ್ಡದಾಗಿ ಕಾಡುತ್ತಿತ್ತು.

ಆದರೆ ನಮ್ಮ ರಾಜ್ಯ ಸರ್ಕಾರ ಈ ಚಿಂತೆಯನ್ನು ಈಗ ದೂರ ಮಾಡಿದೆ. ಹೌದು ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಗೆ ರಾಜ್ಯ ಸರ್ಕಾರ ಸಂತೋಷ ಮತ್ತು ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಅದೇನೆಂದರೆ ಖಾಸಗಿ ಶಾಲೆಗಳ ಶುಲ್ಕ ಕಡಿತಗೊಳಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶುಲ್ಕ ಕಡಿತದ ಸಂಬಂಧ ಪೋಷಕರ ಸಂಘಟನೆಗಳು ಹಾಗೂ ಖಾಸಗಿ ಶಾಲೆ ಮುಖ್ಯಸ್ಥರ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಈ ವರದಿಯನ್ನು ಆಧರಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ ಸುರೇಶ್ ಕುಮಾರ್ ಅವರು ಶುಲ್ಕ ಕಡಿತಾಗಿಳಿಸುವ ಕುರಿತು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಶೇಕಡಾ ಎಷ್ಟು ಶುಲ್ಕ ಕಡಿತ ಗೊಳ್ಳುವುದು ಎಂದು ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಶೇಕಡಾ 30 ರಿಂದ 35 ರಷ್ಟು ಶುಲ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದ.