ಪ್ರಭಾಸ್ ಜೊತೆಗಿನ ಚಿತ್ರಕ್ಕೆ ದೀಪಿಕಾ ಪಡೆದ ಸಂಭಾವನೆ ಗೊತ್ತಾ

ದೀಪಿಕಾ ಪಡುಕೋಣೆ. ಈ ಹೆಸರು ಕೆಲವೇ ವರ್ಷಗಳ ಹಿಂದೆ ಯಾರೊಬ್ಬರಿಗೂ ಅಷ್ಟಾಗಿ ಪರಿಚಿತವಿರಲಿಲ್ಲ. ಆದರೆ ಈಗ ಈಕೆ ಬಾಲಿವುಡ್ ಟಾಪ್ ನಟಿ. ಹೌದು ಕನ್ನಡತಿ ದೀಪಿಕಾ ಪಡುಕೋಣೆ ಅವರು ಇಡೀ ದೇಶದಲ್ಲಿ ಟಾಪ್ ನಟಿಯಾಗಿ ಹೊರಹೊಮ್ಮಿದ್ದಾರೆ. ಅವರ ಅಭಿನಯ ಸೌಂದರ್ಯ ಎಲ್ಲರೂ ಮೆಚ್ಚುವಂತದ್ದು. ಬಾಲಿವುಡ್ ಅಷ್ಟೇ ಅಲ್ಲದೆ ಹಾಲಿವುಡ್ ನಲ್ಲಿ ಕೂಡ ವಿಲ್ಸನ್ ಅಂತಹ ವಿಶ್ವವಿಖ್ಯಾತ ನಟರೊಂದಿಗೆ ನಟಿಸಿ ಸಹಿ ಎನಿಸಿಸಿಕೊಂಡಿದ್ದಾರೆ. ಈಗ ಮತ್ತೊಮ್ಮೆ ದೀಪಿಕಾ ಸುದ್ದಿಯಲ್ಲಿದ್ದಾರೆ. ಹೌದು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರ ಹೊಸ ಚಿತ್ರ ರಾಧೇ ಶ್ಯಾಮ್ ಗಾಗಿ ದೀಪಿಕಾ ಆಯ್ಕೆಯಾಗಿದ್ದಾರೆ.

ಈ ಚಿತ್ರದಲ್ಲಿ ಪ್ರಭಾಸ್ ಗೆ ಇಬ್ಬರು ನಟಿಯರು. ಇನ್ನೊಬ್ಬರು ಕೂಡ ಕನ್ನಡದವಳೇ ಪೂಜಾ ಹೆಗಡೆ. ಹೌದು ಇದೇ ಪ್ರಥಮ ಬಾರಿಗೆ ದೀಪಿಕಾ ಪಡುಕೋಣೆ ಟಾಲಿವುಡ್ ಅಂಗಳಕ್ಕೆ ಬರಲು ಸಜ್ಜಾಗಿದ್ದಾರೆ. ಆದರೆ ಈ ಚಿತ್ರಕ್ಕೆ ಅವರು ಪಡೆಯುವ ಸಂಭಾವನೆ ಕೇಳಿದರೆ ನೀವು ನಿಜಕ್ಕೂ ಗಾಬರಿಯಾಗುತ್ತೀರಿ. ಹೌದು ದೀಪಿಕಾ ರಾಧೇಶ್ಯಾಮ್ ಚಿತ್ರಕ್ಕಾಗಿ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 20 ಕೋಟಿ ಎನ್ನಲಾಗುತ್ತಿದೆ. ನಾಗ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ, ಚಿತ್ರೀಕರಣಕ್ಕೂ ಮುನ್ನವೇ ಎಲ್ಲೆಡೆ ನಿರೀಕ್ಷೆ ಎಂಬ ಅಲೆಯನ್ನು ಹುಟ್ಟುಹಾಕಿದೆ.

%d bloggers like this: