ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸೆಟ್ಟೆರಲು ರೆಡಿ ಆಗಿವೆ. ಸಾಲು ಸಾಲು ಚಿತ್ರಗಲ್ಲಿ ಅಭಿನಯಿಸುತ್ತಿರುವ ಪ್ರಜ್ವಲ್ ದೇವರಾಜ್ ಅವರು ಶೂಟಿಂಗ್ ನಲ್ಲಿ ಕಂಪ್ಲೀಟ್ ಬ್ಯುಸಿ ಆಗಿದ್ದಾರೆ. ಈ ವರ್ಷವೂ ಕೂಡ ವರ್ಷಪೂರ್ತಿ ಪ್ರಜ್ವಲ್ ದೇವರಾಜ್ ಬ್ಯುಸಿ ಆಗಿರಲಿದ್ದಾರೆ. ಆದರೆ ವಿಶೇಷವೆಂದರೆ, ದಿವಂಗತ ಚಿರು ಸರ್ಜಾ, ಪ್ರಜ್ವಲ್ ದೇವರಾಜ್ ಹಾಗೂ ಪನ್ನಗಾಭರಣ ಅವರ ಗೆಳೆತನ ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಸ್ನೇಹಿತರಾದ ಪ್ರಜ್ವಲ್ ದೇವರಾಜ್ ಮತ್ತು ಪನ್ನಗಾಭರಣ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಹೌದು ಹ್ಯಾಪಿ ನ್ಯೂ ಇಯರ್, ಪಿಆರ್ಕೆ ಪ್ರೊಡಕ್ಷನ್ನ ಫ್ರೆಂಚ್ ಬಿರಿಯಾನಿ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪನ್ನಗಾಭರಣ ಅವರು ಪ್ರಜ್ವಲ್ ದೇವರಾಜ್ ಅವರ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ಪ್ರವೀಣ್ ಯಾದವ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದು, ಈ ಚಿತ್ರದ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ. ಪನ್ನಗಾಭರಣ ನಿರ್ದೇಶಿಸಲಿರುವ ಈ ಚಿತ್ರವು ಕಂಪ್ಲೀಟ್ ಆಕ್ಷನ್ ಸಿನೆಮಾ ಆಗಿದ್ದು ಇದೇ ಮೊದಲ ಬಾರಿಗೆ ಸಂಪೂರ್ಣ ಆಕ್ಷನ್ ಸಿನಿಮಾ ಒಂದನ್ನು ಪನ್ನಗಾಭರಣ ಅವರು ನಿರ್ದೇಶಿಸಲಿದ್ದಾರೆ. ಅಲ್ಲದೇ ಈ ಸಿನಿಮಾವನ್ನು ಫಿಲ್ಮಿ ಫೆಲೋ ಸ್ಟುಡಿಯೋಸ್ ಅರ್ಪಿಸುತ್ತಿದ್ದು, ಆಲ್ ಓಸಿಯನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಮಾತಾ ಭಗವತಿ ಪಿಚ್ಚರ್ಸ್ ನಿರ್ಮಾಣ ಮಾಡುತ್ತಿದೆ. ವಿರಾಜ್ ಸಿಂಗ್ ಅವರು ಛಾಯಾಗ್ರಹಣ ಮಾಡಲಿದ್ದು, ವಾಸುಕಿ ವೈಭವ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ.



ಈ ವಿಷಯವನ್ನು ನಟರಾದ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕರಾದ ಪನ್ನಗಾಭರಣ ಇಬ್ಬರು ಖಚಿತಪಡಿಸಿದ್ದು ಮಂಗಳವಾರ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ. ಈ ಚಿತ್ರದ ಕಥೆಯನ್ನು ಬಾಲಿವುಡ್ ಲೇಖಕ ಅಧೀರ್ ಭಟ್ ಬರೆದಿದ್ದು, ಇವರು ಬಂದೀಶ್ ಬಂಡಿತ್ಸ್, ದಿ ಆಫೀಸ್ ಮತ್ತು ಕಾರವಾರ್ ಸಿನೆಮಾಗೆ ಕಥೆ ಬರೆದಿದ್ದರು. ಆದರೆ ಈ ಚಿತ್ರದ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಸದ್ಯಕ್ಕೆ ನಟ ಪ್ರಜ್ವಲ್ ದೇವರಾಜ್ ಅವರು ಮಾಫಿಯಾ ಚಿತ್ರದ ಶೂಟಿಂಗ್ ನಲ್ಲಿ ಬಿಸಿ ಆಗಿದ್ದು, ಪನ್ನಗಾಭರಣ ನಿರ್ದೇಶನದ ಸಿನಿಮಾದ ಜೊತೆಗೆ ಹರಿ ಪ್ರಸಾದ್ ನಿರ್ದೇಶನದ ಜಕ್ಕಾ ಮತ್ತು ಕಿರಣ್ ನಿರ್ದೇಶನದ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ.