ಪ್ರಶಾಂತ್ ನೀಲ್ ಅವರ ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ಮತ್ತೊಬ್ಬ ಅತ್ಯುತ್ತಮ ನಟ

ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತದ ಸಿನಿರಂಗಕ್ಕೆ ಚಿರಪರಿಚಿತರಾಗಿರುವ ನಿರ್ದೇಶಕ ಎಂದರೆ ಪ್ರಶಾಂತ್ ನೀಲ್. ಕೆಜಿಎಫ್ ಸಿನಿಮಾ ಕೇವಲ ನಟ ಯಶ್ ಅವರಿಗೆ ಮಾತ್ರವಲ್ಲದೆ, ನಿರ್ದೇಶಕರಿಗೂ ಕೂಡ ದೊಡ್ಡ ಹೆಸರು ತಂದುಕೊಟ್ಟಿದೆ. ಐದು ಭಾಷೆಗಳಲ್ಲಿ ರಿಲೀಸಾದ ಕೆಜಿಎಫ್ ಚಿತ್ರದಿಂದ ನಟ ಯಶ್ ಪ್ಯಾನ್ ಇಂಡಿಯಾ ನಟರಾಗಿ ಹೊರಹೊಮ್ಮಿದರೆ, ಪ್ರಶಾಂತ್ ನೀಲ್ ಅವರು ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ಮೇಕಿಂಗ್ ಎಲ್ಲದರಲ್ಲೂ ಯುನಿಕ್ ಎನಿಸಿಕೊಂಡಿರುವ ಪ್ರಶಾಂತ್ ನೀಲ್ ಅವರ ಬೇಡಿಕೆ ಇತ್ತೀಚಿಗೆ ಹೆಚ್ಚಾಗಿದೆ. ದೊಡ್ಡ ದೊಡ್ಡ ಸ್ಟಾರ್ ನಟರು ಅವರೊಂದಿಗೆ ಕೆಲಸ ಮಾಡಲು ಕಾಯುತ್ತಿದ್ದಾರೆ. ಕೇವಲ ಕನ್ನಡದ ನಟರು ಮಾತ್ರವಲ್ಲದೆ ಬೇರೆ ಭಾಷೆಯ ನಟರು ಕೂಡ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಇದೀಗ ಕೆಜಿಎಫ್ ಚಿತ್ರದ ನಂತರ ಪ್ರಶಾಂತ್ ನೀಲ್ ಅವರು ತೆಲುಗು ಸಿನಿಮಾ ಇಂಡಸ್ಟ್ರಿಗೆ ಹಾರಿದ್ದಾರೆ. ಹೌದು ನಟ ಪ್ರಭಾಸ್ ಅವರನ್ನು ಹಾಕಿಕೊಂಡು ಪ್ರಶಾಂತ್ ನೀಲ್ ಅವರು ಹೊಸ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಸಲಾರ್ ಎಂದು ಹೆಸರಿಡಲಾಗಿದೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟನಾಗಿರುವ ಪ್ರಭಾಸ್ ಅವರಿಗೆ ಕನ್ನಡದ ನಿರ್ದೇಶಕರೊಬ್ಬರು ನಿರ್ದೇಶನ ಮಾಡುತ್ತಿರುವುದು ಹೆಮ್ಮೆಯ ವಿಷಯ. ಸದ್ಯಕ್ಕೆ ಪ್ರಭಾಸ್ ಹಾಗೂ ಕನ್ನಡತಿ ಪೂಜಾ ಹೆಗಡೆ ನಟಿಸಿರುವ ರಾಧೆ ಶ್ಯಾಮ್ ಸಿನಿಮಾ ಮಾರ್ಚ್ 11 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿರುವ ಕೆಜಿಎಫ್ ಚಿತ್ರಕ್ಕೂ ಹೊಂಬಾಳೆ ಫಿಲಂಸ್ ಅವರು ನಿರ್ಮಾಣ ಮಾಡಿದ್ದರು. ಸಲಾರ್ ಚಿತ್ರದ ಬಗ್ಗೆ ಹೆಚ್ಚಾಗಿ ಯಾವುದೇ ಮಾಹಿತಿಗಳನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಇನ್ನು ಪ್ರಭಾಸ್ ಅವರಿಗೆ ಪೂರ್ಣಪ್ರಮಾಣದ ನಾಯಕಿಯಾಗಿ ಯಾರು ನಟಿಸುತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಕೆಲವು ಹಂತಗಳಲ್ಲಿ ಶ್ರುತಿ ಹಾಸನ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ದೊರಕಿದೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದೆ. ಇನ್ನೂ ಒಂದು ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಹೆಚ್ಚು ತೂಕ ಬರಬೇಕಾದರೆ ನಾಯಕನಿಗೆ ತಕ್ಕಂತೆ ಒಬ್ಬ ಖಡಕ್ ವಿಲನ್ ಇರಲೇಬೇಕು. ಸಲಾರ್ ಚಿತ್ರದಲ್ಲಿ ಪ್ರಭಾಸ್ ಅವರಿಗೆ ವಿಲ್ಲನ್ ಆಗಿ ಯಾರು ನಟಿಸಲಿದ್ದಾರೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿತ್ತು.

ಆದರೆ ಇದೀಗ ಸಲಾರ್ ಚಿತ್ರದ ಖಳನಾಯಕನನ್ನು ಸೆಲೆಕ್ಟ್ ಮಾಡಲಾಗಿದೆ. ಹೌದು ಮಲಯಾಳಂ ನಟ ಪೃಥ್ವಿರಾಜ್ ಸಲಾರ್ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಲಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಪ್ರಶಾಂತ್ ನೀಲ್ ಅವರು ಪೃಥ್ವಿರಾಜ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಮುಂದಿನ ಮಾಹಿತಿಯನ್ನು ನಿರ್ದೇಶಕರು ನೀಡಲಿದ್ದಾರೆ ಎಂದು ಪ್ರಭಾಸ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ಈಗಾಗಲೇ ಕೆಜಿಎಫ್ ಚಿತ್ರದಿಂದ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಹೊಸದೊಂದು ದಾಖಲೆ ಬರೆದ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರ ಸಲಾರ್ ದುಪ್ಪಟ್ಟು ಕುತೂಹಲ ಸೃಷ್ಟಿಸಿರುವುದಂತೂ ನಿಜ.

%d bloggers like this: