ಪ್ರಶಾಂತ್ ನೀಲ್ ಕೇಳಿದ ಮಾತಿಗೆ ಸಂಜಯ್‌ ದತ್ ಪ್ರತಿಕ್ರಿಯೆ ನೋಡಿ ನೀಲ್ ಅವರಿಗೆ ಆಶ್ಚರ್ಯ

ಸಂಜಯ್ ದತ್ ಎಂಬ ಒಂದು ಹೆಸರಿನ ಹಿಂದೆ ಬಣ್ಣಬಣ್ಣದ ಕಿರು ಚಿತ್ರಣಗಳ ದೊಡ್ಡ ಹೊತ್ತಿಗೆಯೆ ಇದೆ, ರಾಜಕುಮಾರ್ ಹಿರಾನಿ ನಿರ್ದೇಶನದ ಸಂಜು ಎಂಬ ಒಂದು ಚಿತ್ರ ನೋಡಿದರೆ ಸಾಕು ಎಲ್ಲ ಬಣ್ಣಗಳ ಪರಿಚಯ ನಮ್ಮೆಲ್ಲರಿಗೂ ಆಗೆ ಆಗುತ್ತದೆ. ಸಾಕಷ್ಟು ಏಳುಬೀಳುಗಳನ್ನು ಕಂಡು ಮತ್ತೆ ಪುಟಿದೆದ್ದು ಬರುತ್ತಿದ್ದ ಸಂಜಯ್ ದತ್ ಅವರಿಗೆ ಕೆಲತಿಂಗಳ ಹಿಂದೆ ಆಸ್ಪತ್ರೆಗೆ ತೆರಳಿದ್ದಾಗ ಕ್ಯಾನ್ಸರ್ ಎಂಬ ಮಹಾಮಾರಿ ಇರುವುದು ತಿಳಿದುಬಂತು. ಜೀವನದಲ್ಲಿ ಎಂತೆಂತಹ ಕಷ್ಟಗಳನ್ನು ಎದುರಿಸಿ ಬಂದ ಸಂಜು ಅವರಿಗೆ ಕ್ಯಾನ್ಸರ್ ಕೂಡ ಚಿಕ್ಕದಾಗಿಯೇ ಕಂಡಿತು, ಅದು ಸಂಜು ಬಾಬಾಗಿರುವ ಗಟ್ಟಿತನ.

ಅವರ ಗಟ್ಟಿತನದ ಬಗ್ಗೆ ನಮಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ ಆದರೆ ನಾವು ಈಗ ನಿಮಗೊಂದು ತಾಜಾ ಉದಾಹರಣೆ ಹೇಳುತ್ತಿದ್ದೇವೆ. ಹೌದು ಕನ್ನಡದ ಹೆಮ್ಮೆಯ ಚಿತ್ರವಾದ ಕೆಜಿಎಫ್ ಭಾಗ ಒಂದರ ಅತ್ಯದ್ಭುತ ಯಶಸ್ಸಿನ ನಂತರ ಕೆಜಿಎಫ್ ಚಿತ್ರತಂಡ ಅಧೀರ ಎಂಬ ಒಂದು ಪಾತ್ರಕ್ಕಾಗಿ ಸಂಜಯ್ ದತ್ ಅವರಿಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದಾಗ ಸಂಜಯ ಒಂದು ಕ್ಷಣ ಯೋಚಿಸಿದೆ ಸಮ್ಮತಿಸಿದರು ಮತ್ತು ಅಂತಹ ಒಂದು ಪಾತ್ರಕ್ಕಾಗಿ ತಾವು ಹಲವು ವರ್ಷಗಳಿಂದ ಕಾಯುತ್ತಿರುವುದಾಗಿ ಹೇಳಿದರು.

ಹಾಗಾಗಿ ಅದೇ ಹುಮ್ಮಸಿನಲ್ಲಿ ಭರ್ಜರಿಯಾಗಿ ಕೆಜಿಎಫ್ ಎರಡನೇ ಭಾಗದ ಶೂಟಿಂಗ್ ನಡೆಯುತ್ತಿರುವಾಗ ಸಂಜಯ ಅವರಿಗೆ ಮಹಾಮಾರಿ ಕ್ಯಾನ್ಸರ್ ಇರುವುದು ಗೊತ್ತಾಗಿ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿ ಈಗ ಮತ್ತೆ ಗುಣಮುಖರಾಗಿ ಬಂದಿದ್ದಾರೆ. ಆದರೆ ವಿಷಯ ಇದಲ್ಲ, ಸಂಜಯ್ ದತ್ ಅವರ ಅಧೀರ ಪಾತ್ರದ ಕೆಲವು ಚಿತ್ರೀಕರಣದ ಭಾಗಗಳನ್ನು ಹೊರತುಪಡಿಸಿ ಬಹುತೇಕ ಕೆಜಿಎಫ್ ಎರಡನೆಯ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಇದೀಗ ಸಂಜು ಬಾಬಾ ಚೇತರಿಕೆಗೊಂಡು ಅಧೀರನ ಪಾತ್ರಕ್ಕೆ ಜೀವ ತುಂಬಲು ಶೂಟಿಂಗ್ ಸೆಟ್ಟಿಗೆ ಬಂದಿದ್ದಾರೆ. ಅಲ್ಲೊಂದು ಅಚ್ಚರಿ ನಡೆದಿದೆ.

ಹೌದು ಸಂಜು ಬಾಬಾ ಅವರ ಅನಾರೋಗ್ಯದ ಕಾರಣ ಚಿತ್ರತಂಡ ಅದಿರನ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಬಳಸಿ ಚಿತ್ರೀಕರಣ ಮಾಡಲು ನಿರ್ಧರಿಸಿತ್ತು ಆದರೆ ಸಂಜು ಬಾಬಾ ಇದನ್ನು ನಿರಾಕರಿಸಿ ತಾವೇ ಖುದ್ದಾಗಿ ಸಾಹಸ ದೃಶ್ಯಗಳಲ್ಲಿ ಭಾಗವಹಿಸುವೆ ಎಂದಿದ್ದಾರೆ. ಇದನ್ನು ಕೇಳಿದೆ ಎಲ್ಲಾ ಸಿನಿಮಾ ಮಂದಿ ಶಹಬ್ಬಾಸ್ ಎಂದಿದೆ. ಹೌದು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಂಜಯ್ ದತ್ ಅವರೊಂದಿಗೆ ಮಾತನಾಡುವಾಗ ಸಾಹಸ ದೃಶ್ಯಗಳಿಗಾಗಿ ಡ್ಯೂಪ್ ವ್ಯವಸ್ಥೆ ಮಾಡಲಾಗಿದೆ ಎಂದಾಗ ಸಂಜಯ್ ದತ್ ತಕ್ಷಣವೇ ಅದನ್ನು ನಿರಾಕರಿಸಿ ಇಲ್ಲ ನಾನೇ ಮಾಡುತ್ತೇನೆ ಎಂದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಇದೆಯಲ್ಲವೇ ಗಟ್ಟಿತನ ಎಂದರೆ, ಅವರ ಈ ಗಟ್ಟಿತನದ ಕಾರಣದಿಂದಲೇ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗ ಕೂಡ ಅವರೆದುರು ಮಕಾಡೆ ಮಲಗಿತು

%d bloggers like this: