ದಕ್ಷಿಣ ಭಾರತದ ಟಾಪ್ ಸ್ಟಾರ್ ನಿರ್ದೇಶಕರ ಪಟ್ಟಿಯಲ್ಲಿ ಪ್ರಶಾಂತ್ ನೀಲ್! ಮಾಸ್ ಅಂಶವುಳ್ಳ ಉಗ್ರಂ ಚಿತ್ರ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಪ್ರಶಾಂತ್ ನೀಲ್ ಕೆಜಿಎಫ್ ಭಾಗ ಒಂದರ ನಂತರ ಸ್ಟಾರ್ ನಿರ್ದೇಶಕರ ಸಾಲಿನ ಪಟ್ಟಿಯಲ್ಲಿ ಮೀಸಲಾಗಿದ್ದ ಪ್ರಶಾಂತ್ ನೀಲ್ ಹೆಸರು ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿ ವಿಶ್ವದಾಖಲೆ ಮಾಡಿದ ತದನಂತರ ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ಐದು ನಿರ್ದೇಶಕರ ಪಟ್ಟಿಯಲ್ಲಿ ಪ್ರಶಾಂತ್ ನೀಲ್ ಸೇರಿದ್ದಾರೆ. ಇನ್ನು ಕೆಜಿಎಫ್ ಚಿತ್ರದಲ್ಲಿ ತಮ್ಮ ಅದ್ಭುತವಾದ ಕಲ್ಪನಾತ್ಮಕ ಶಕ್ತಿಯೊಂದಿಗೆ ಸರಳ ಕಥೆಯನ್ನು ಅಮೋಘವಾಗಿ ಪರದೆಯಲ್ಲಿ ತರುವುದಲ್ಲದೆ, ತಂತ್ರಜ್ಞಾನದ ವಿಚಾರದಲ್ಲಿಯೂ ಸಹ ತಮ್ಮ ಪ್ರತಿಭೆ ತೋರಿ ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ಆಶ್ಚರ್ಯದಿಂದ ಬಾಯ್ಮೇಲೆ ಬೆರಳಿಟ್ಟು ನೋಡುವಂತೆ ಮಾಡಿದ ಕೀರ್ತಿ ನಿರ್ದೇಶಕ ಪ್ರಶಾಂತ್ ನೀಲ್ಗೆ ಅವರಿಗೆ ಸಲ್ಲುತ್ತದೆ. ಇನ್ನು ಜಸ್ಟ್ ಮೇಕಿಂಗ್ ಮೂಲಕವೇ ಕುತೂಹಲ ಕೆರಳಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬರೋಬ್ಬರಿ ನೂರು ಮಿಲಿಯನ್ಗಿಂತ ಹೆಚ್ಚು ವೀಕ್ಷಣೆ ಪಡೆದು ಸಾರ್ವಕಾಲಿಕ ದಾಖಲೆ ಮಾಡಿದೆ. ಅಷ್ಟೇ ಅಲ್ಲದೆ ಹಾಲಿವುಡ್ ಸಿನಿಮಾಗಳ ದಾಖಲೆಯನ್ನು ಮುರಿದು ವಿಶ್ವದಾಖಲೆ ಮಾಡಿದೆ.

ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವುದು ಕೇವಲ ಎರಡು ಸಿನಿಮಾಗಳು ಉಗ್ರಂ ಮತ್ತು ಕೆಜಿಎಫ್ ಇದೀಗ ಕೆಜಿಎಫ್ ಮುಂದುವರಿದ ಭಾಗ ಕೆಜಿಎಫ್ ಚಾಪ್ಟರ್2 ಇದರ ಜೊತೆಗೆ ತೆಲುಗಿನ ಯಂಗ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಸಲಾರ್ ಎಂಬ ಚಿತ್ರ ಘೋಷಣೆ ಮಾಡಿಕೊಂಡಿದ್ದಾರೆ. ಈಗಾಗಲೇ ಮೈತ್ರಿ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುವ ಸಿನಿಮಾವೊಂದಕ್ಕೆ ಒಪ್ಪಿಗೆ ನೀಡಿದ್ದು ಈ ಸಿನಿಮಾ ನಿರ್ದೇಶನಕ್ಕಾಗಿ ಬರೋಬ್ಬರಿ ಎರಡು ಕೋಟಿ ಮುಂಗಡ ಹಣವನ್ನು ಪಡೆದಿದ್ದಾರೆ, ಕನ್ನಡದ ಗಡಿದಾಟಿ ಟಾಲಿವುಡ್ ಸಿನಿ ಉದ್ಯಮಕ್ಕೆ ಹೆಜ್ಜೆ ಇಟ್ಟಿರುವ ಪ್ರಶಾಂತ್ ನೀಲ್ ಅವರ ಸಂಭಾವನೆ ಬರೋಬ್ಬರಿ ಐದು ಕೋಟಿ ಎಂದು ಮಾಹಿತಿ ಹೊರಬರುತ್ತಿದ್ದು ಕನ್ನಡದ ನಿರ್ದೇಶಕ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದು, ಭಾರತೀಯ ಚಿತ್ರರಂಗದ ಟಾಪ್ ನಿರ್ದೇಶಕರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವುದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.